ದೇಶ-ವಿದೇಶ ಪ್ರಮುಖ

ಅಮೆರಿಕಾದ ನೀತಿ ನಿರ್ದೇಶಕರಾಗಿ ಆಯ್ಕೆಯಾದ ಮೊದಲ ಮಹಿಳೆ ಉಡುಪಿ ಮೂಲದ ಮಾಲಾ ಅಡಿಗ

ಮಂಗಳೂರು: ಮಾಲಾ ಅಡಿಗ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ನ ಸಂಸ್ಥಾಪಕ ಕೆ.ಸೂರ್ಯನಾರಾಯಣ ಅಡಿಗ ಅವರ ಮತ್ತು 2008 ರಲ್ಲಿ ಮ್ಯಾನ್ ಬುಕರ್ ಬಹುಮಾನವನ್ನು ಪಡೆದ ಅರವಿಂದ್ ಅಡಿಗ ಅವರ ಕುಟುಂಬಕ್ಕೆ ಸೇರಿದವರು.

ಯು.ಎಸ್. ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಸರಕಾರದ ಜಿಲ್ ಬಿಡೆನ್ ಅವರ ನೀತಿಯ ಪ್ರಥಮ ಮಹಿಳಾ ನಿರ್ದೇಶಕರಾಗಿ ಮಾಲಾ ಅಡಿಗ ಅವರು ನೇಮಕಗೊಂಡಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕಕ್ಕುಂಜೆ ಗ್ರಾಮಕ್ಕೆ ಸಂತೋಷ, ಹೆಮ್ಮೆಯನ್ನು ತಂದಿದೆ.

ಮಾಲಾ ಅಡಿಗರವರು ನಿರ್ಮಾಲಾ ಉಪಾಧ್ಯಾಯ ಅವರ ಸೋದರ ಸೊಸೆ. ನಿರ್ಮಲಾ, ಆಕೆಯ ತಂದೆಯ ದೊಡ್ಡಕ್ಕ. ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ, ಆಕೆ ತುಂಬಾ ಒಳ್ಳೆಯ ಹುಡುಗಿ. ಆಕೆಯ ಸಂಬಂಧದ ಬಾಂಧವ್ಯದ ಬೇರು ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಿದೆ ಎಂದರು.

ಜನವರಿಯಲ್ಲಿ ಬಿಡೆನ್ ಯುಎಸ್ಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ, ಮಾಲಾ ಶ್ವೇತಭವನದಲ್ಲಿ ಹಿರಿಯ ಸಿಬ್ಬಂದಿಯಾಗುತ್ತಾರೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲು ಶನಿವಾರ ಅವರನ್ನು ಶ್ವೇತಭವನಕ್ಕೆ ಕರೆದಿದ್ದರು ಎಂದು 87 ವರ್ಷದ ನಿರ್ಮಲಾ ಹೇಳಿ, ಮಾಲಾ ಅವರ ಹೊಸ ಜವಾಬ್ದಾರಿಯನ್ನು ಅಭಿನಂದಿಸಿದರು.

ಮಾಲಾ ಅವರ ತಂದೆ ಡಾ.ರಮೇಶ್ ಅಡಿಗರ (84) ಎರಡನೇ ಮಗನಾಗಿದ್ದರು. ನಾಳೀಯ ಶಸ್ತ್ರಚಿಕಿತ್ಸಕನಾಗಿ (ವಸ್ಕ್ಯುಲಾರ್ ಸರ್ಜನ್) ತನ್ನ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಅವರು 25 ವರ್ಷದವರಿದ್ದಾಗ ಅಮೆರಿಕಕ್ಕೆ ತೆರಳಿದ್ದರು. ಮಾಲಾರವರ ತಾಯಿ ಜಯ ಅಡಿಗ, ವೆಲ್ಲೂರಿನಲ್ಲಿ ಮೆಡಿಸಿನ್ ವಿದ್ಯಾಭ್ಯಾಸ ಮಾಡಿದ್ದರು‌.

2019 ರಲ್ಲಿ ಬೆಂಗಳೂರಿನಲ್ಲಿ ಕುಟುಂಬ ಸಮಾಗಮ ಕಾರ್ಯಕ್ರಮದಲ್ಲಿ ಮಾಲಾ ಅವರನ್ನು ಭೇಟಿಯಾಗಿದ್ದನ್ನು ನಿರ್ಮಲಾ ನೆನಪಿಸಿಕೊಂಡರು. ನಂತರ ನಿರ್ಮಲಾ ಅವರು ತಮ್ಮ ಮಗಳು ಸುಜಾತಾ ನಕ್ಕತ್ತಾಯ ಮತ್ತು ಕುಟುಂಬದೊಂದಿಗೆ 2019 ರ ನವೆಂಬರ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದರು.

ಮಾಲಾ ತನ್ನ ಹೆತ್ತವರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಲು ಪತಿ ಚಾರ್ಲ್ಸ್ ಮತ್ತು ಮಗಳು ಆಶಾ ಅವರೊಂದಿಗೆ ಬೆಂಗಳೂರಿಗೆ ಬಂದಿದ್ದರು. ಅವರು ಏಳು ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದರು ಮತ್ತು ಅಲ್ಲಿನ ಕಡಲತೀರಗಳನ್ನು ಪ್ರೀತಿಸುತ್ತಿದ್ದರು. ಜೊತೆಗೆ ಕಕ್ಕುಂಜೆ ದೇವಸ್ಥಾನದಲ್ಲಿ ಪೂಜೆ ಅರ್ಪಿಸಿದ್ದರು. ಬಬ್ಬರಿಯನಕಟ್ಟೆಯಲ್ಲಿರುವ ಅವರ ಪೂರ್ವಜರ ಮನೆಗೆ ಭೇಟಿ ನೀಡಿದ್ದರು ಎಂಬುದನ್ನು ನಿರ್ಮಲಾ ಸ್ಮರಿಸಿಕೊಂಡರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬೆಳಗಿದವು ಕೋಟಿ ಕೋಟಿ ಹಣತೆಗಳು: ಕೊರೊನಾ ಅಂಧಕಾರದ ವಿರುದ್ಧ ಶಕ್ತಿಯುತ ಸಾತ್ವಿಕ ಸಮರ

Upayuktha

ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ನಾಳೆ ಮೋದಿ ಚಾಲನೆ

Harshitha Harish

ಮುಂದಿನ ಐದು ವರ್ಷಗಳಲ್ಲಿ ಮೀನು ಉತ್ಪಾದನಾ ರಫ್ತು ದ್ವಿಗುಣ: ಗಿರಿರಾಜ್ ಸಿಂಗ್

Upayuktha