ದೇಶ-ವಿದೇಶ

ರೈತರಿಗಾಗಿ ಪದ್ಮವಿಭೂಷಣ ಪ್ರಶಸ್ತಿ ಹಿಂತಿರುಗಿಸಿದ ಪ್ರಕಾಶ್ ಸಿಂಗ್ ಬಾದಲ್

ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ತಮಗೆ ನೀಡಿದ್ದ ಪದ್ಮ ವಿಭೂಷಣ ಪ್ರಶಸ್ತಿಯನ್ನು ಅಕಾಲಿ ದಳದ ಹಿರಿಯ ನಾಯಕ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.

ರೈತರೊಂದಿಗೆ ಕೇಂದ್ರ ಸರ್ಕಾರ ದೆಹಲಿ ವಿಜ್ಞಾನ ಭವನದಲ್ಲಿ ಮಾತುಕತೆ ನಡೆಸುತ್ತಿರುವುದರ ನಡುವೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿರುವ ಪ್ರಕಾಶ್ ಸಿಂಗ್ ಬಾದಲ್, ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿರುವುದಾಗಿ ಹೇಳಿದ್ದಾರೆ.

ರೈತರ ಬೇಡಿಕೆಗಳನ್ನು ಪರಿಗಣಿಸದಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಪ್ರಕಾಶ್ ಸಿಂಗ್ ಬಾದಲ್, 2015ರಲ್ಲಿ ತಮಗೆ ನೀಡಲಾಗಿದ್ದ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣವನ್ನು ಹಿಂತಿರುಗಿಸಿದ್ದಾರೆ.

Related posts

ಹಾಲಿವುಡ್ ನಟ ‘ಬ್ಲಾಕ್‌ ಪ್ಯಾಂಥರ್‌’ ಖ್ಯಾತಿಯ ಚಾಡ್ವಿಕ್ ಬೋಸ್ಮನ್ ನಿಧನ

Harshitha Harish

ಅರುಣ್ ಜೇಟ್ಲಿಯವರ ಒಂದು ವರ್ಷದ ಪುಣ್ಯಸ್ಮರಣೆ- ಗಣ್ಯರಿಂದ ನಮನ

Harshitha Harish

ಮಹಾರಾಷ್ಟ್ರ ಪಾಲಿಟಿಕ್ಸ್: ನಾಳೆಗೆ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್‌

Upayuktha