ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಧರ್ಮಸ್ಥಳದಲ್ಲಿ ಯಶಸ್ವಿಯಾಗಿ ನೆರವೇರಿದ ‘ಪ್ರಾರ್ಥನಾ ಸಮಾವೇಶ’

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ 22ನೇ ವರ್ಷದ ಭಜನಾ ತರಬೇತಿ ಕಮ್ಮಟದ ಬದಲಾಗಿ ಸಾ0ಕೇತಿಕವಾಗಿ ‘ಪ್ರಾರ್ಥನಾ ಸಮಾವೇಶ’ವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಇಂದು (ಅ.3) ನಡೆದ ಪ್ರಾರ್ಥನಾ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಮನೋರಮಾ ತೋಳ್ಪಾಡಿತ್ತಾಯ, ರಾಮಕೃಷ್ಣ ಕಾಟುಕುಕ್ಕೆ ಹಾಗೂ ರಾಜೇಶ್ ಪಡಿಯಾರ್ ಮುಂತಾದ ಕಲಾವಿದರು ಶಿಬಿರಾರ್ಥಿಗಳಿಗೆ ಭಜನಾ ಅಭ್ಯಾಸವನ್ನು ಮಾಡಿಸಿದರು. ಹಿಮ್ಮೇಳದಲ್ಲಿ ಮಂಗಲದಾಸ ಗುಲ್ವಾಡಿ, ಹಾಗೂ ದೇವದಾಸ್ ಪ್ರಭು ಸಹಕರಿಸಿರುತ್ತಾರೆ.

ಪ್ರಾರ್ಥನಾ ಸಮಾವೇಶದಲ್ಲಿ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀಧಾಮ ಮಾಣಿಲ, ಇವರು ಮಾರ್ಗರ್ದರ್ಶನ ನೀಡುತ್ತಾ ಸಮಾಜದ ಜನಸಾಮಾನ್ಯರಲ್ಲಿ ಧಾರ್ಮಿಕ ಭಾವನೆ ಉಳಿಸುವ ಪ್ರಯತ್ನ ಭಜನಾ ಕಮ್ಮಟದಿ0ದ ಸಾಧ್ಯವಾಗಿದೆ. ಮಾನವೀಯ ಮೌಲ್ಯವನ್ನು ನಮ್ಮಲ್ಲಿ ಅಳವಡಿಸಿಕೊಂಡು ಪ್ರಕೃತಿ ಮತ್ತು ನಿಸರ್ಗವನ್ನು ಸ0ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನಸ್ಸನ್ನು ಪರಿಶುದ್ಢ ಮಾಡಿ ಭಗವಂತನನ್ನು ಪ್ರಾರ್ಥಿಸಿ ಎಂದು ಸಂದೇಶವನ್ನು ನೀಡಿದರು.

ಮುಖ್ಯ ಅತಿಥಿಗಳಾದ ಡಾ. ಗಣೇಶ್ ಅಮೀನ್ ಸಂಕಮಾರ್ ಇವರು ಭಗವಂತನ ಜಪಿಸಿ ನೆಲೆಯಾಗುವುದೇ ‘ಭಜನೆ’. ಆಡಂಬರದ ಸಂಪತ್ತು ಬದುಕಲ್ಲ, ದೇವರ ಆರಾಧನೆಯೇ ಬದುಕಿನ ಸಾರ್ಥಕತೆ ಎಂದು ಶುಭನುಡಿದರು.

ಪ್ರಾರ್ಥನಾ ಸಮಾವೇಶದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು, ಹೆಚ್ಚು ಜನ ಸೇರಿದರೆ ಅಪಾಯವೆಂದು ಅರಿತು ಸಾಂಕೇತಿಕವಾಗಿ ಈ ವರ್ಷ ‘ಪ್ರಾರ್ಥನಾ ಸಮಾವೇಶ’ವನ್ನು ನಡೆಸಿದ್ದೇವೆ. ಭಜನೆಯಿಂದ ಸಂಘಟನಾ ಶಕ್ತಿ, ಭಜನಾ ಮ0ಡಳಿಗಳು ಉತ್ತಮ ರೀತಿಯಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಿರುವುದರಿಂದ ಭಜನೆಯ ಬಗ್ಗೆ ಗೌರವ, ಶ್ರದ್ಧೆ, ಭಕ್ತಿ ಹೆಚ್ಚಾಗಿದೆ. ಮುಂದಿನ ವರ್ಷದಿ0ದ ಲಕ್ಷಾಂತರ ಜನರಿಗೆ ಭಜನಾ ಕಮ್ಮಟದ ತರಬೇತಿಯನ್ನು ವೀಕ್ಷಿಸಲು ಆನ್‍ಲೈನ್ ಮೂಲಕ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಅಧ್ಯಕ್ಷೀಯ ನುಡಿಗಳನ್ನು ನುಡಿದರು.

ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು, ಮಮತಾ ರಾವ್ ವ0ದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ವಿವೇಕಾನಂದ ಪಿಯು ಕಾಲೇಜಿನ ಹಲವು ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆ

Upayuktha

ಕೇರಳದ ರೋಗಿಗಳಿಗೆ ಷರತ್ತುಬದ್ಧ ಪ್ರವೇಶ: ತಲಪಾಡಿ ಗಡಿಯಲ್ಲಿ ನಾಲ್ವರು ವೈದ್ಯಾಧಿಕಾರಿಗಳ ನಿಯೋಜನೆ

Upayuktha

ಬ್ರಹ್ಮಾವರ: ಚೌಳಿಕೆರೆಗೆ ಬಿದ್ದ ಕಾರು, ಉದ್ಯಮಿ ಸಾವು, ಯುವತಿಗೆ ಗಂಭೀರ ಗಾಯ

Upayuktha

Leave a Comment