ದೇಶ-ವಿದೇಶ ಪ್ರಮುಖ

ಡಿಡಿ ನ್ಯಾಷನಲ್‌: ನಾಳೆಯಿಂದ ಮತ್ತೆ ಮೂಡಿಬರಲಿದೆ ಜನಪ್ರಿಯ ‘ರಾಮಾಯಣ’ ಧಾರಾವಾಹಿ

ಲಾಕ್‌ಡೌನ್‌ ಅವಧಿಯ ಬೇಸರ ಕಳೆಯಲು ಪ್ರಸಾರ ಭಾರತಿ ಪ್ರಯತ್ನ

(ಚಿತ್ರ: ಅಂತರ್ಜಾಲ)

ಹೊಸದಿಲ್ಲಿ: 1980ರ ದಶಕದಲ್ಲಿ ದೇಶದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ಮತ್ತೊಮ್ಮೆ ದೂರದರ್ಶನದಲ್ಲಿ ಪ್ರಸಾರವಾಗಲಿವೆ.

ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸಂಬಂಧ ಟ್ವೀಟ್ ಮಾಡಿದ್ದು, ಶನಿವಾರ ಬೆಳಗ್ಗೆ 9 ಗಂಟೆಯಿಂದ 10  ಗಂಟೆಯ ವರೆಗೆ ರಮಾನಂದ ಸಾಗರ್ ನಿರ್ಮಿತ ‘ರಾಮಾಯಣ’ ಧಾರಾವಾಹಿ ಮತ್ತೆ ಪ್ರಸಾರವಾಗಲಿದೆ ಎಂದು ದೃಢಪಡಿಸಿದ್ದಾರೆ. ರಾತ್ರಿ 9ರಿಂದ 10ರ ವರೆಗೆ ಎರಡನೇ ಕಂತು ಪ್ರಸಾರವಾಗಲಿದೆ.

ಹಲವಾರು ವೀಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಭಾರತಿ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರನ್ನು ಉದ್ದೇಶಿಸಿ,  1980 ಮತ್ತು 90ರ ದಶಕಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಈಗ ಮತ್ತೊಮ್ಮೆ ಪ್ರಸಾರ ಮಾಡಬೇಕು ಎಂದು ಬೇಡಿಕೆಯಿಟ್ಟಿದ್ದರು.

ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಇಡೀ ದೇಶವೇ 21 ದಿನಗಳ ಕಾಲ ಲಾಕ್‌ಡೌನ್ ಆದ ಸ್ಥಿತಿಯಲ್ಲಿ ಇರುವಾಗ ಜನತೆಯೂ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಅನುಭವಿಸುತ್ತಿರುವಾಗ ದೂರದರ್ಶನದಲ್ಲಿ ಮತ್ತೊಮ್ಮೆ ಈ ಧಾರಾವಾಹಿಗಳನ್ನು ಪ್ರಸಾರ ಮಾಡುವ ಬೇಡಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಇದನ್ನು ಗಮನಿಸಿ ಪ್ರಸಾರ ಭಾರತಿ ಸಿಇಓ ಶಶಿಶೇಖರ ವೆಂಪಟ್ಟಿ ಅವಟು ಟ್ವೀಟ್ ಮಾಡಿದ್ದು, ಈ ಧಾರಾವಾಹಿಗಳ ಹಕ್ಕುಗಳನ್ನು ಹೊಂದಿದವರ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದರು.

ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ ಅವರ ಗಮನಕ್ಕೂ ಈ ವಿಷಯವನ್ನು ತರಲಾಗಿದ್ದು, ಜನತೆಯ ಬೇಡಿಕೆ ಹಾಗೂ ತಮ್ಮ ಉತ್ತರದ ಟ್ವೀಟ್‌ಗಳನ್ನು ಸಚಿವರ ಖಾತೆಗೆ ವೆಂಪಟ್ಟಿ ಅವರು ಟ್ಯಾಗ್ ಮಾಡಿದ್ದಾರೆ.

ಮೊದಲ ಬಾರಿಗೆ ದೂರದರ್ಶನದ ರಾಷ್ಟ್ರೀಯ ವಾಹಿನಿಯಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ಪ್ರಸಾರವಾದಾಗ ಇಡೀ ದೇಶದಲ್ಲೇ ಭಾರೀ ಸಂಚಲನ ಉಂಟಾಗಿ, ಅಪಾರ ಜನಪ್ರಿಯತೆ ಪಡೆದಿದ್ದವು. ಇಂದಿಗೂ ಆ ಎರಡು ಧಾರಾವಾಹಿಗಳ ಜನಪ್ರಿಯತೆಯನ್ನು ಮೀರಿಸುವ ಅನ್ಯ ಧಾರಾವಾಹಿಗಳು ಕಿರುತೆರೆಯಲ್ಲಿ ಬಂದಿಲ್ಲ.

ರಾಮಾನಂದ ಸಾಗರ್ ಅವರ ರಾಮಾಯಣ ಮತ್ತು ಬಿ.ಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಗಳ ಪ್ರಸಾರ ಮುಗಿದ ಬಳಿಕ ಅವುಗಳ ಮಾದರಿಯನ್ನೇ ಅನುಸರಿಸಿ ಇನ್ನೂ ಹಲವು ಪೌರಾಣಿಕ ಧಾರಾವಾಹಿಗಳು ಕಿರುತೆರೆಗೆ ಲಗ್ಗೆಯಿಟ್ಟವು. ಆದರೆ ಆ ಮಟ್ಟದ ಜನಪ್ರಿಯತೆ ಗಳಿಸಲು ಸಾಧ್ಯವಾಗಿಲ್ಲ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

‘ಎಸ್‌ಡಿಎಂ ಝೇಂಕಾರ’- ಶೈಕ್ಷಣಿಕ, ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

Upayuktha

ಬೆಂಗಳೂರಿನ ಮಲ್ಲೇಶ್ವರಂ ಹವ್ಯಕ ಭವನದಲ್ಲಿ “ಗಾಯತ್ರಿ ಮಹೋತ್ಸವ” ಫೆ. 9ಕ್ಕೆ

Upayuktha

ಕ್ರಿಕೆಟ್ ಜಗತ್ತಿನ 360 ಡಿಗ್ರಿ ಆಟಗಾರ ಎ.ಬಿ ಡಿವಿಲಿಯರ್ಸ್‌ಗೆ ಇಂದು ಹ್ಯಾಪಿ ಬರ್ತ್‌ಡೇ

Upayuktha