ಕಿರುತೆರೆ- ಟಿವಿ

ಪ್ರವೀಣ್ ಮಂಜೇಶ್ವರ ನಿರ್ದೇಶನದ “ಯಾರಿವನು” ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆ

ಮಂಜೇಶ್ವರ: ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಎಂದು ಬೈಯ್ದ ತಂದೆಯೋರ್ವ ತನ್ನ ಮಗನನ್ನು ರಾತ್ರೋರಾತ್ರಿ ಮನೆಯಿಂದ ಹೊರ ದಬ್ಬುತ್ತಾನೆ. ಆದರೆ ಆ ಬಳಿಕ ಆ ಹುಡುಗ ಏನಾದ…. ಮರಳಿ ಮನೆ ಸೇರಿದನೇ…ಹೇಗೆ ಎಂಬೆಲ್ಲ ಕುತೂಹಲ ಭರಿತ ಕಥಾನಕದೊಂದಿಗೆ ಸಮರ್ಥ ನಿರ್ದೇಶನ, ಚಿತ್ರೀಕರಣಗಳನ್ನೊಳಗೊಂಡ “ಯಾರಿವನು” ಕಿರುಚಿತ್ರ ಶುಕ್ರವಾರ ಮಧ್ಯಾಹ್ನ ಯೂಟ್ಯೂಬ್ ಚಾನೆಲ್ ನಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಂಡಿದೆ.

ವೃತ್ತಿಯಲ್ಲಿ ಕಂಟ್ಯೂಟರ್ ತಂತ್ರಜ್ಞನಾಗಿರುವ ಯುವ ಕಲಾವಿದ ಪ್ರವೀಣ್ ಮಂಜೇಶ್ವರ ರಚಿಸಿ ನಿರ್ದೇಶಿಸಿರುವ ಕಿರುಚಿತ್ರ ಸುಮಾರು 22 ನಿಮಿಷಗಳ ಕಥಾಹಂದರ ಹೊಂದಿದೆ. ನಿವೃತ್ತ ಮುಖ್ಯೋಪಾಧ್ಯಾಯ, ದಸ್ತಾವೇಜು ಬರಹಗಾರ ಗುಂಪೆ ಗೋವಿಂದ ಭಟ್ ಅವರ ನಿರ್ಮಾಣದಲ್ಲಿ ಸೂರ್ಯನಾರಾಯಣ ಭಟ್ ತೆಂಕಬೈಲು ಅವರು ಚಿತ್ರ ಕಥೆ ರಚಿಸಿದ್ದಾರೆ. ರವೀಶ ಎ, ಪ್ರಭಾ ಮಂಜೇಶ್ವರ ಹಾಗೂ ದಿನೇಶ್ ಕಾಸರಗೋಡು ಕ್ಯಾಮರಾದಲ್ಲಿ ಮನೋಹರವಾಗಿ ಮೂಡಿಬಂದಿರುವ ಚಿತ್ರಕ್ಕೆ ಪ್ರವೀಣ್ ಮಂಜೇಶ್ವರ ಮತ್ತು ಉಮಾ ಕಿರಣ್ ಮಂಜೇಶ್ವರ ಸಂಕಲನ ನಡೆಸಿರುವ ಚಿತ್ರದ ಪೋಸ್ಟರ್ ನ್ನು ಕೃಷ್ಣ ಶರ್ಮ ಕೆ ಕ್ರಿಯಾತ್ಮಕ ಶೈಲಿಯಲ್ಲಿ ವಿನ್ಯಾಸ ಮಾಡಿದ್ದಾರೆ.

ವಿಶೇಷವೆಂದರೆ ಕಿರುಚಿತ್ರದ ಪ್ರಧಾನ ಪಾತ್ರದಲ್ಲಿ ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ನಂಬ್ಯಾರ್ ಪಾತ್ರ ನಿರ್ವಹಿಸಿದ್ದ ನಾಗರಾಜ ಪದಕಣ್ಣಾಯ, ನಿರ್ದೇಶಕ ಪ್ರವೀಣ್ ಮಂಜೇಶ್ವರ ಗಮನ ಸೆಳೆಯುವ ಪಾತ್ರದ ಮೂಲಕ ಬೆರಗುಗೊಳಿಸಿದ್ದಾರೆ. ಮಿಕ್ಕುಳಿದಂತೆ ಅಖಿಲೇಶ್ ಕಣಂಗಲ, ಗೋಪಾಲಕೃಷ್ಣ ನೀರ್ಚಾಲು, ಪ್ರಸಾದ್ ಎಂ.ಎನ್, ಸರೋಜಾ ಎಸ್ ಭಟ್ ಸೇರಾಜೆ, ನಯನ ಗೌರಿ ಸೇರಾಜೆ, ಶ್ರೀದೇವಿ ಪ್ರವೀಣ್, ಶೃತಿಪ್ರಶಾಂತ್, ನಂದನಕೃಷ್ಣ ಸೇರಾಜೆ, ಮಾ.ಅರವಿಂದ್, ಉಮಾ ಕಿರಣ್ ಮಂಜೇಶ್ವರ, ರಾಜೀವ ಶೆಟ್ಟಿ, ರಮೇಶ್ ಶೆಟ್ಟಿ, ರವೀಂದ್ರ ಶೆಟ್ಟಿ, ಕು.ಪಲ್ಲವಿ ತೆಂಕಬೈಲು, ಕು.ಭೂಮಿಕಾ, ಕು.ಸಾನ್ನಿಧ್ಯ ಶೆಟ್ಟಿ, ಹಾಗೂ ಬೇಬಿ ಪ್ರಣತಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಶಿಶು ಸಾಹಿತಿ, ಶಿಕ್ಷಕ ಶ್ರೀನಿವಾಸ ಭಟ್ ಸೇರಾಜೆ ಅವರ ಗೀತೆಗಳಿಗೆ ಬಿ.ಎಸ್ ಕಾರಂತ ರಾಮಕುಂಜ ಸಂಗೀತ ನೀಡಿದ್ದಾರೆ. ಅತ್ಯಪೂರ್ವ ಕಥೆ, ನಿರ್ದೇಶನದ ಮೂಲಕ ಯುವ ಮನಸ್ಸುಗಳಿಗೆ ಮುದನೀಡುವ ಕುಟುಂಬ ಚಿತ್ರವಾಗಿ ಯಾರಿವನು ಮೂಡಿಬಂದಿದೆ. ನಮ್ಮೊಳಗೆ ನಮಗರಿಯದವನೆಂಬ ಅಂತರಂಗಿಕ ತುಮುಲಗಳು, ನಿತ್ಯ ಜೀವನದ ಘಟನಾವಳಿಗಳನ್ನು ಬಿಂಬಿಸುವ ಈ ಕಿರುಚಿತ್ರ ಗಡಿನಾಡು ಕಾಸರಗೋಡಿನ ಕೊಡುಗೆ ಎನ್ನುವುದು ಹೆಮ್ಮೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಒಂದೇ ದಿನ 7.7 ಕೋಟಿ ವೀಕ್ಷಣೆಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ರಾಮಾಯಣ ಧಾರಾವಾಹಿ

Upayuktha

‘ಕೃಷ್ಣ’ನ ಮನಗೆದ್ದ ‘ರಾಧೆ’- ಶ್ವೇತಾ ರಸ್ತೋಗಿ

Upayuktha

ಸಂಗೀತ ನಿರ್ದೇಶಕ ವಿ. ಮನೋಹರ್ ಇಂದು ಹನುಮಗಿರಿ ಕ್ಷೇತ್ರಕ್ಕೆ ಭೇಟಿ

Harshitha Harish