ದೇಶ-ವಿದೇಶ ಪ್ರಮುಖ

ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ ಪ್ರಕರಣ: ಒಬ್ಬ ವ್ಯಕ್ತಿಯ ಬಂಧನ

ಕೊಚ್ಚಿ: ಪಾಲಕ್ಕಾಡ್‌ನಲ್ಲಿ ಗರ್ಭಿಣಿ ಆನೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಕೇರಳ ಅರಣ್ಯ ಸಚಿವರು ಶುಕ್ರವಾರ ತಿಳಿಸಿದ್ದಾರೆ. ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಬಂಧನ ಇದಾಗಿದೆ.

ಘಟನೆಗೆ ಸಂಬಂಧಿಸಿ ಮೂವರು ಶಂಕಿತರನ್ನು ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರವಷ್ಟೇ ಹೇಳಿದ್ದರು.

‘ಬಂಧಿತ ವ್ಯಕ್ತಿಯು ರಬ್ಬರ್ ಟ್ಯಾಪಿಂಗ್ ಕಾರ್ಮಿಕನಾಗಿದ್ದಾನೆ. ಉಳಿದ ಶಂಕಿತರ ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದು ಪಾಲಕ್ಕಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಜಿ. ಶಿವ ವಿಕ್ರಂ ತಿಳಿಸಿದ್ದಾರೆ.

ಪಾಲಕ್ಕಾಡ್‌ನ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಳಿ ಗರ್ಭಿಣಿ ಆನೆಯೊಂದು ಮೇ ೨೭ರಂದು ಮೃತಪಟ್ಟಿತ್ತು. ಸ್ಫೋಟಕಗಳನ್ನು ತುಂಬಿಸಿದ ಅನಾನಸ್ ತಿನ್ನಲು ನೀಡಿದ್ದೇ ಆನೆಯ ಸಾವಿಗೆ ಕಾರಣ ಎನ್ನಲಾಗಿದೆ. ಘಟನೆಗೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಯೂ ಸಾವಿರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದಿಂದ ವರದಿ ಕೇಳಿತ್ತು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಅಮಿತಾಬ್ ಬಚ್ಚನ್ ಅವರ ಜೊತೆ “ಮೇಡೆ” ಚಿತ್ರದ ಕೆಲಸ ಮಾಡಲಿರುವ ಬಾಲಿವುಡ್ ನಟ ಅಜಯ್ ದೇವ್ ಗನ್

Harshitha Harish

ವಿಜಯರಾಜೇ ಸಿಂಧಿಯಾ ಸ್ಮರಣಾರ್ಥ 100 ರೂ ನಾಣ್ಯ ಬಿಡುಗಡೆ

Upayuktha

ಕುರ್ತಾ, ಪಂಚೆ ತೊಟ್ಟು ಅಯೋಧ್ಯೆಯತ್ತ ಧಾವಿಸಿದ ಪ್ರಧಾನಿ ಮೋದಿ

Harshitha Harish