ಕ್ಯಾಂಪಸ್ ಸುದ್ದಿ ನಗರ ಪ್ರಮುಖ ಸ್ಥಳೀಯ

ಜ.23-24: ಫಾದರ್‌ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಪ್ರೇರಣ 2020

ಸಾಹಿತ್ಯ ಮತ್ತು ಸೃಜನಶೀಲತೆ ಉತ್ಸವ ಹಾಗೂ ಆರೋಗ್ಯ ಪ್ರದರ್ಶನ

ಮಂಗಳೂರು: ದೇರಳಕಟ್ಟೆಯ ಫಾದರ್‌ ಮುಲ್ಲರ್‌ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ‘ಪ್ರೇರಣ 2020’ – ಸಾಹಿತ್ಯ ಮತ್ತು ಸೃಜನಶೀಲತೆ ಹಾಗೂ ಆರೋಗ್ಯ ಪ್ರದರ್ಶನ ಜ.23 ಮತ್ತು 24ರಂದು ನಡೆಯಲಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೈಸ್ಕೂಲ್‌ಗಳು ಮತ್ತು ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಿವಿಧ ರೀತಿಯ ಪ್ರತಿಭಾ ಪ್ರದರ್ಶನ ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಜತೆ ಸಂವಾದಕ್ಕಾಗಿ ‘ಪ್ರೇರಣ 2020’ ಎಂಬ 2 ದಿನಗಳ ಕಾರ್ಯಕ್ರಮವನ್ನು ಫಾದರ್ ಮುಲ್ಲರ್‌ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಮ್ಮಿಕೊಂಡಿದೆ.

ಈ ಬಾರಿ 11ನೇ ವರ್ಷದ ‘ಪ್ರೇರಣ’ ಕಾರ್ಯಕ್ರಮವನ್ನು ಕಾಲೇಜು ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳಿಗಾಗಿ ‘ಆರೋಗ್ಯ ಪ್ರದರ್ಶನ’ ಈ ಬಾರಿಯ ವಿಶೇಷತೆಯಾಗಿದೆ.

ಪ್ರೇರಣ 2020 ಆರೋಗ್ಯ ಪ್ರದರ್ಶನ:
ವೈದ್ಯಕೀಯ ವಿಜ್ಞಾನ ಮತ್ತು ಶಿಕ್ಷಣದ ನಿಗೂಢ ವಿಷಯಗಳ ಕುರಿತು ಕುತೂಹಲಿಗಳಾದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಮಾಹಿತಿ ನೀಡುವ ವಿಶೇಷ ವೇದಿಕೆ ಇದಾಗಿದೆ.

ಸಾಮಾನ್ಯ ಹಾಗೂ ರೋಗಲಕ್ಷಣ ಶಾಸ್ತ್ರದ ಅಧ್ಯಯನಕ್ಕೆ ಬೇಕಾಗುವ ಮಾನವ ದೇಹದ ನಾನಾ ಮಾದರಿಗಳ ಸಿಂಹಾವಲೋಕಕ್ಕೆ ಇದೊಂದು ಅವಕಾಶ ಒದಗಿಸುತ್ತದೆ.

ವೈದ್ಯಕೀಯ ಜಗತ್ತಿನ ಐತಿಹಾಸಿಕ ಮತ್ತು ಇತ್ತೀಚಿನ ಮುನ್ನಡೆಗಳನ್ನು ಅವಲೋಕಿಸುವ ಅವಕಾಶವಿದೆ.
ಸಾಮಾನ್ಯ ವೈದ್ಯಕೀಯ ಸನ್ನಿವೇಶಗಳು ಮತ್ತು ಅವುಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇಲ್ಲಿದೆ. ಆರೋಗ್ಯದ ಕುರಿತ ಮಿಥ್ಯೆಗಳನ್ನು ಹೋಗಲಾಡಿಸಿ ವಾಸ್ತವಾಂಶಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇಲ್ಲಿರುತ್ತದೆ.

ಆರೋಗ್ಯಕರ ಜೀವನ ವಿಧಾನದ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಅವಕಾಶವಿರುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೋಷಕಾಂಶ ಭರಿತ ಆಹಾರಗಳ ಬಗ್ಗೆ ಅರಿವು ಇಲ್ಲಿ ಲಭ್ಯ.
ಹೋಮಿಯೋಪಥಿ ವೈದ್ಯಕೀಯದ ಕಾರ್ಯವಿಧಾನದ ಬಗ್ಗೆ ಶ್ರವ್ಯ ದೃಶ್ಯ ಪ್ರಸ್ತುತಿಯೂ ಇಲ್ಲಿ ಇರುತ್ತದೆ.

 ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು:

23ರಂದು ಬೆಳಗ್ಗೆ ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಸಾಮಾನ್ಯ ಜ್ಞಾನದ ವಿಷಯಗಳ ಬಗ್ಗೆ ಕ್ವಿಜ್‌ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 3,000 ರೂ ಮತ್ತು ದ್ವಿತೀಯ ಬಹುಮಾನ 2,000 ರೂ ನೀಡಲಾಗುತ್ತದೆ.

24ರಂದು ಬೆಳಗ್ಗೆ 10 ಗಂಟೆಗೆ ಮಾದರಿ ಆರೋಗ್ಯ ಸಂರಕ್ಷಣೆ 2020- ಒಂದು ದೃಷ್ಟಿಕೋನ ಎಂಬ ವಿಷಯದಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ 1 ಗಂಟೆ ಅವಧಿಯ ಪ್ರತ್ಯೇಕ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 1,000 ರೂ ಹಾಗೂ ದ್ವಿತೀಯ 750 ರೂ ನಗದು ಪುರಸ್ಕಾರ ನೀಡಲಾಗುತ್ತದೆ.

‘ಹೆಲ್ದಿಫೈ ಇಂಡಿಯಾ 2020’ ಥೀಮ್‌ ಕುರಿತು ಮೆಡಿಕಲ್‌ ಮಾಡೆಲ್‌ ತಯಾರಿ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳ ಎರಡು ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಾಡೆಲ್‌ಗಳ ಉಪಯೋಗವನ್ನು ಪರೀಕ್ಷಕರ ಎದುರು ವಿವರಿಸಬೇಕಾಗುತ್ತದೆ.

ಪ್ರಥಮ ಬಹುಮಾನ 3,000 ರೂ ಹಾಗೂ ದ್ವಿತೀಯ ಬಹುಮಾನ 2,000 ರೂ ನಗದು ಪುರಸ್ಕಾರ ನೀಡಲಾಗುತ್ತದೆ ಎಂದು ಫಾದರ್ ಮುಲ್ಲರ್‌ ಹೋಮಿಯೋಪಥಿಕ್ ಕಾಲೇಜಿನ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಮುಂದಿನ ಬಜೆಟ್‌ಗಳಲ್ಲೂ ಆದಾಯ ತೆರಿಗೆ ದರಗಳಲ್ಲಿ ಕಡಿತ ಇಲ್ಲ: ಸರಕಾರದ ಸ್ಪಷ್ಟನೆ

Upayuktha

ರೇಡಿಯೋ ಪಾಂಚಜನ್ಯದಲ್ಲಿ ಡಾ. ವಸಂತ ಕುಮಾರ್ ಪೆರ್ಲ

Upayuktha

ಬಡವರನ್ನು ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ: ಡಿ. ವೇದವ್ಯಾಸ ಕಾಮತ್

Upayuktha