ನಗರ ಸ್ಥಳೀಯ

ಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ|| ಚೂಂತಾರು

ಮಂಗಳೂರು: ರಾಷ್ಟ್ರದ ಮಾನವ ಸಂಪನ್ಮೂಲಗಳು ಮತ್ತು ಆಸ್ತಿಪಾಸ್ತಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಮೊದಲ ಆದ್ಯತೆ ಆಗಿರುತ್ತದೆ. ಅದೇ ರೀತಿ ಮಾನವ ನಿರ್ಮಿತ ದುರಂತಗಳು ಮತ್ತು ನೈಸರ್ಗಿಕ ದುರಂತಗಳಾದಾಗ ರಾಷ್ಟ್ರೀಯ ಸಂಪನ್ಮೂಲಗಳನ್ನು ರಕ್ಷಿಸುವ ವಿಶೇಷ ಹೊಣೆಗಾರಿಕೆ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ತಂಡಕ್ಕೆ ಇರುತ್ತದೆ. ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿಯೂ ರಾಷ್ಟ್ರದ ಸಂಪತ್ತು ಮತ್ತು ಮಾನವರ ಜೀವ ರಕ್ಷಣೆಯನ್ನು ಮಾಡುವ ಹೊಣೆಗಾರಿಕೆ ಮತ್ತು ರೋಗ ತಡೆಗಟ್ಟುವ ವಿಶೇಷ ಜವಾಬ್ದಾರಿ ಪೌರರಕ್ಷಣಾ ತಂಡದ ಕಾರ್ಯಕರ್ತರಿಗೆ ಹಾಗೂ ಗೃಹರಕ್ಷಕರಿಗೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.

ಇಂದು (ಮಾ.4) ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ 50ನೇ ರಾಷ್ಟ್ರೀಯ ಸುರಕ್ಷಾ ದಿನಾಚರಣೆ ಅಂಗವಾಗಿ ‘ಸುರಕ್ಷಾ ಪ್ರತಿಜ್ಞಾ ವಿಧಿ’ ಕಾರ್ಯಕ್ರಮ ನಡೆಯಿತು.

ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಪ್ರತಿಜ್ಞಾ ವಿಧಿ ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಪರಿಸರವಾದಿ ಮತ್ತು ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರು ಮಾತನಾಡಿ ಕೈಗಾರೀಕರಣದಿಂದ ಪರಿಸರದ ಮೇಲೆ ದೌರ್ಜನ್ಯ ಉಂಟಾಗುತ್ತದೆ. ಬೆಳವಣಿಗೆ ಹೊಂದುವಾಗ ಈ ರೀತಿ ಪರಿಸರದ ಮೇಲೆ ದುಷ್ಪರಿಣಾಮ ಆಗುವುದು ಸಹಜ. ಆದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಆಗದಂತೆ ತಡೆಯಬೇಕಾದ ಅನಿವಾರ್ಯತೆ ಈಗ ಇದೆ. ಈ ನಿಟ್ಟಿನಲ್ಲಿ ಪೌರರಕ್ಷಣಾ ತಂಡ ಮತ್ತು ಗೃಹರಕ್ಷಕ ದಳಕ್ಕೆ ವಿಶೇಷ ಜವಾಬ್ದಾರಿ ಇದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್ ಪಿ., ಸುನಿಲ್ ಪೂಜಾರಿ, ದಿವಾಕರ್, ಬಶೀರ್, ಸಂತೋಷ್‍ರಾಜನ್, ದುಷ್ಯಂತ್ ರೈ. ಜಯಲಕ್ಷ್ಮಿ, ಸುಲೋಚನ ಉಪಸ್ಥಿತರಿದ್ದರು. ಕಛೇರಿ ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಗುರುರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಬದಿಯಡ್ಕ ಸಂತೆ: ದುಬಾರಿ ಬಿಎಂಡಬ್ಲ್ಯು ಕಾರಿನಲ್ಲಿ ಬಟ್ಟೆ ಮಾರಾಟ- ವೈರಲ್‌ ಫೋಟೋ

Upayuktha

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಮಾನವ ಸಂಪನ್ಮೂಲ ವಿಭಾಗದ ಯೂಟ್ಯೂಬ್ ಚಾನೆಲ್‌ ಉದ್ಘಾಟನೆ

Upayuktha

ಸಿಎ ಆಗಲು ನಿರಂತರ ಅಭ್ಯಾಸ, ಸಮರ್ಪಣಾ ಭಾವದ ಕಲಿಕೆ ಅಗತ್ಯ: ಸಿ.ಎ. ಆದರ್ಶ್ ಶೆಣೈ

Upayuktha