ಕಲೆ-ಸಾಹಿತ್ಯ ರಾಜ್ಯ

ಕನ್ನಡದ ‘ನುಡಿಜಾಣ’ ಕೆ. ರಾಜಕುಮಾರ್‌ ಅವರಿಗೆ ಪ್ರತಿಷ್ಠಿತ ರಾಜರತ್ನಂ ಪ್ರಶಸ್ತಿ

ಕೋಲಾರ: ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ 2019ನೆಯ ಸಾಲಿಗೆ ಕನ್ನಡ ಕಟ್ಟಾಳು ಕೆ. ರಾಜಕುಮಾರ್ ಅವರನ್ನು ಆಯ್ಕೆಮಾಡಿದೆ. ಇದು ಸಾಹಿತ್ಯದ ಪರಿಚಾರಿಕೆಗಾಗಿ ರಾಜ್ಯ ಸರ್ಕಾರ ನೀಡುವ ಏಕಮಾತ್ರ ಪುರಸ್ಕಾರ. ಇದು ರೂ. 50,000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಕೆ. ರಾಜಕುಮಾರ್ ನಲವತ್ತೆರಡು ವರ್ಷಗಳಿಂದ ಸತತವಾಗಿ ಸಾಹಿತ್ಯದ ಚಾಕರಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ನುಡಿಚಾರಕರು. ಸ್ವತಃ ಲೇಖಕರಾದ ಕೆ. ರಾಜಕುಮಾರ್ ಪುಸ್ತಕ ಪ್ರಕಾಶನ, ವಿತರಣೆ, ಮಾರಾಟ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಇದನ್ನು ಕುರಿತಂತೆ ಕನ್ನಡ ಪುಸ್ತಕ ಪ್ರಕಾಶನ ಕಮ್ಮಟಗಳನ್ನು ಪರಿಕಲ್ಪಿಸಿ, ರೂಪಿಸಿ ಲೇಖಕ, ಪ್ರಕಾಶಕರಿಗೆ ತರಬೇತಿ ನೀಡಿದ್ದಾರೆ.

ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಿ, ಬಂದ ಹಣದಿಂದ ಬೆಂಗಳೂರಿನಲ್ಲಿ ಕುವೆಂಪು, ಬಿಎಂಶ್ರೀ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರು ಜನರಲ್ಲಿ ಪುಸ್ತಕ ಮನಸ್ಕತೆಯನ್ನು ನೆಟ್ಟವರು. ಹೀಗೆ ಸಾಹಿತ್ಯ ಪರಿಚಾರಿಕೆಯ ಎಲ್ಲ ನೆಲೆಗಳಲ್ಲೂ ಕಟಿಬದ್ಧರಾಗಿ ದುಡಿದವರು. ಜಿ.ಪಿ. ರಾಜರತ್ನಂರ ಸಾಹಿತ್ಯ ಪರಿಚಾರಿಕೆಯನ್ನು ಸಮರ್ಥವಾಗಿ, ನಿಷ್ಠೆಯಿಂದ ಮುಂದುವರೆಸುತ್ತಿರುವ ಕೆ. ರಾಜಕುಮಾರ್ ಅವರ ಮುಡಿಗೆ ಇದೀಗ ಸರ್ಕಾರ ರಾಜರತ್ನದ ಗರಿಯನ್ನು ಇಟ್ಟಿದೆ. ಅರ್ಹರನ್ನು ಆಯ್ಕೆಮಾಡುವ ಮೂಲಕ ಪ್ರಾಧಿಕಾರ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ ಎಂದು ಕನ್ನಡಪರ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಜಯನಗರದ ಶಾಸಕಿ ಸೌಮ್ಯಾರೆಡ್ಡಿಯವರು ಕೆ. ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಅವರು ಮಾತನಾಡಿ ಸರ್ಕಾರ ಮೊದಲ ಬಾರಿಗೆ ನಿಜವಾದ ಪರಿಚಾರಕರಿಗೆ ಪ್ರಶಸ್ತಿ ನೀಡಿದೆ ಎಂದು ಶ್ಲಾಘಿಸಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡರ ನೇತೃತ್ವದಲ್ಲಿ 15 ವಿವಿಧ ಕನ್ನಡಪರ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಆಗಮಿಸಿ ಸನ್ಮಾನಿಸಿದರು. ಕರ್ನಾಟಕ ಪ್ರಕಾಶಕರ ಸಂಘವೂ ರಾಜಕುಮಾರ್‌ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಎಂಜಿನಿಯರಿಂಗ್‌, ಡಿಪ್ಲೊಮಾ, ಪದವಿ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತತೆ ನೀಡಲು ಸರಕಾರ ಸಿದ್ಧ ಎಂದ ಡಿಸಿಎಂ

Upayuktha

ಕೃತಿ ಪರಿಚಯ: ಸುಮುಖ- ದಂತ ಆರೋಗ್ಯ ಮಾರ್ಗದರ್ಶಿ

Upayuktha

ಸರ್ಕಾರಿ ಉದ್ಯೋಗಿಗಳು ಕಛೇರಿಯಲ್ಲಿ ಐಡಿ ಕಾರ್ಡ್ ಧರಿಸುವುದು ಕಡ್ಡಾಯ

Harshitha Harish