ಕತೆ-ಕವನಗಳು

*ಪ್ರೇಯಸಿ*

 

ಸಾಂದರ್ಭಿಕ ಚಿತ್ರ (ಕೃಪೆ: ವೀ ನೋ ಯುವರ್ ಡ್ರೀಮ್ಸ್.ಕಾಂ)

ನೀ ಹುಟ್ಟಿದೆಲ್ಲಿ ನಾ ಹುಟ್ಟಿದೆಲ್ಲಿ


ಸಮ್ಮಿಲನವಾದೆವು ಅದಾವುದೋ ಕ್ಷಣದಲ್ಲಿ
ಅಚ್ಚಳಿಯದೇ ಉಳಿದಿರುವೇ ನೀ ನನ್ನ ಮನದಲ್ಲಿ
ನೀನಿರುವಾಗ ಜಾಗವಿಲ್ಲ ಬೇರಾರಿಗು ನನಲ್ಲಿ

ನನ್ನವರ ತೊರೆದು ಬಂದಿರುವೆ ನಿನ್ನಯ ಅರಸಿ
ಪ್ರಮಾಣಿಸುವೆ ನಾ ನಿನಗೆ ಮಾಡದಿರುವೆ ಗಾಸಿ
ಮುಗುಳು ನಗೆ ಬೀರುತ್ತ ಬಂದಿರುವೆಯೇ ಮನದರಸಿ
ಜೋಪಾನವಾಗಿ ಕಾಪಾಡುವನು ನಿನ್ನ ತಪ್ಪುಗಳ ಮನ್ನಿಸ್ಸಿ

ಜೊತೆಯಾಗಿರುವೆ ಗೆಳತಿ ಬಾಳೆಂಬ ಪಯಣದಲ್ಲಿ
ಹುಟ್ಟು ನಾನಾಗಿರುವೆ ನಿನ್ನ ಖುಷಿಯೆಂಬ ದೋಣಿಯಲ್ಲಿ
ಮೈ ಮರೆತೆ ಗೆಳತಿಯೇ ನಿಷ್ಕಲ್ಮಶ ಪ್ರೀತಿಯಲ್ಲಿ
ನಗುವೆಂಬ ಮಾಲೆ ಕಟ್ಟುವೆ ಈ ನಿನ್ನ ಮುಖದಲ್ಲಿ.

ಕಾವಾಲಾಗಿ ನಿಲ್ಲುವೆನು ನಾನೆಂದು ನಿನಗಾಗಿ
ಕಾಯುತ್ತಿರುವೆ ನಾನಿಂದು ನಿನ್ನಯ ಒಪ್ಪಿಗೆಗಾಗಿ
ಒಮ್ಮೆ ಬಂದು ಬಿಡು ಗೆಳತಿಯೇ ನನ್ನೀ ಸಂಗಾತಿಯಾಗಿ
ಜನ್ಮಾಂತರಲ್ಲೂ ನಾನಿರುವೆ ಜೊತೆ ಜೊತೆಯಾಗಿ.

✍️ 1331.ganiga

Related posts

ಕವನ: ನೆನಪುಗಳು

Upayuktha

ಕವನ: ಅರ್ಘ್ಯವನು ಸ್ವೀಕರಿಸಿ ಹರಸು ಶ್ರೀಕೃಷ್ಣ

Upayuktha

ಹನಿಗವನ: ಆಪತ್ಕಾಲ..!!

Upayuktha