ದೇಶ-ವಿದೇಶ ಪ್ರಮುಖ ವಾಣಿಜ್ಯ

ಒಂದೇ ತಿಂಗಳಲ್ಲಿ 2 ಬಾರಿ ಹೆಚ್ಚಳವಾಯಿತು ಅಡುಗೆ ಅನಿಲ ದರ: ಸಾಮಾನ್ಯ ವರ್ಗದವರ ವಿರುದ್ಧ ಬೆಲೆ ಹೆಚ್ಚಳ ಅಸ್ತ್ರ

ಹೊಸದಿಲ್ಲಿ : ಪೆಟ್ರೋಲ್-ಡೀಸೆಲ್ ಬಳಿಕ ಅಡುಗೆ ಅನಿಲ ದರ ಏರುಗತಿಯತ್ತ ಸಾಗಿದ್ದು, ಒಂದೇ ತಿಂಗಳಲ್ಲಿ 2 ಬಾರಿ ಬೆಲೆ ಹೆಚ್ಚಳವಾಗಿದೆ.

ಹೌದು ಈ ತಿಂಗಳ ಆರಂಭದಲ್ಲಿ 25 ರೂ. ಏರಿಕೆಯಾಗಿದ್ದ ಅಡುಗೆ ಅನಿಲ ಬೆಲೆ ಇದೀಗ ಮತ್ತೆ 50 ರೂಪಾಯಿಯಷ್ಟು ಏರಿಕೆಯಾಗಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ಒಂದೇ ತಿಂಗಳಲ್ಲಿ ಒಟ್ಟು 75 ರೂ. ಹೆಚ್ಚಳವಾಗಿದೆ. ಇದು ಸಾಮಾನ್ಯ ವರ್ಗದವರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ನಾಳೆಯಿಂದಲ್ಲೇ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಮೆಟ್ರೋ ನಗರಗಳಲ್ಲಿ ಈ ದರ ಅನ್ವಯವಾಗಲಿದ್ದು, ದೆಹಲಿಯಲ್ಲಿ ಜನರು ಎಲ್‌ಪಿಜಿ ಸಿಲಿಂಡರ್‌ಗೆ 769 ರೂ., ಬೆಂಗಳೂರಿನಲ್ಲಿ 722 ರಿಂದ 772ರೂ.ಗೆ ಬೆಲೆ ಏರಿಕೆಯಾಗಿದೆ.

ಫೆಬ್ರವರಿ 4ರಂದು ಮೆಟ್ರೋ ನಗರಗಳಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು 25 ರೂ.ಗೆ ಹೆಚ್ಚಿಸಿದ್ದವು. ಇದೀಗ 50 ರೂ.ಗೆ ಹೆಚ್ಚಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗರಿಷ್ಠ ಮಟ್ಟ ತಲುಪಿದ್ದು ಈ ಸಂದರ್ಭದಲ್ಲಿ ಅಡುಗೆ ಅನಿಲ ಬೆಲೆಯಲ್ಲೂ ಏರಿಕೆ ಕಂಡು ಜನರು ಶಾಕ್​ ಆಗಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕಾಸರಗೋಡು: ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ದೇಹಾಂತ್ಯ

Upayuktha

ರಾಜ್ಯಸಭಾ ಚುನಾವಣೆ: ಕರ್ನಾಟಕ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಕಣಕ್ಕೆ

Upayuktha

ಮಹಾರಾಷ್ಟ್ರದಲ್ಲಿ ಕೋವಿಡ್​​ 2ನೇ ಅಲೆ: ಗಡಿಯಲ್ಲಿ ಮತ್ತೆ ಕಟ್ಟೆಚ್ಚರ

Sushmitha Jain