ದೇಶ-ವಿದೇಶ ಪ್ರಮುಖ

2ನೇ ಹಂತದ ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭ: ಲಸಿಕೆ ಹಾಕಿಸಿಕೊಂಡ ಮೋದಿ

ಹೊಸದಿಲ್ಲಿ: ಇಂದಿನಿಂದ ದೇಶದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಬಹು ಕಾಯಿಲೆ ಇರುವ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಕೋವಿಡ್ ಲಸಿಕೆ ಅಭಿಯಾನದ 2ನೇ ಭಾಗವಾಗಿ ಇವತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

70 ವರ್ಷದ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಏಮ್ಸ್‍ನಲ್ಲಿ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ಸಂಶೋಧಿಸಿರುವ ಕೋವಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

ಕೋವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಅಂತಿಮ ವರದಿ ಬರದೆಯೇ ತರಾತುರಿಯಲ್ಲಿ ಅನುಮತಿ ನೀಡಲಾಗಿತ್ತು ಎಂಬ ಟೀಕೆ ಆರಂಭದಲ್ಲಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿಯವರೇ ಕೋವಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದು ಮಹತ್ವ ಪಡೆದಿದೆ.

ಕೋವಿಡ್ ಲಸಿಕೆ ಪಡೆದ ಬಳಿಕ ಪ್ರಧಾನಿ ಮೋದಿಯವರು ಟ್ವೀಟಿಸಿದ್ದಾರೆ. ಲಸಿಕೆ ಪಡೆಯುವ ವೇಳೆ ಅಸ್ಸಾಂ ರಾಜ್ಯದ ಸಂಪ್ರದಾಯಿಕ ಶಾಲನ್ನು ಪ್ರಧಾನಿ ಧರಿಸಿದ್ದರು. ಏಪ್ರಿಲ್‍ನಲ್ಲಿ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಏಮ್ಸ್‍ನಲ್ಲಿ ನನ್ನ ಕೋವಿಡ್-19 ಲಸಿಕೆಯ ಡೋಸ್ ಪಡೆದಿದ್ದೇನೆ. ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟವನ್ನು ತುರ್ತು ಸಮಯದಲ್ಲಿ ಬಲವರ್ಧಿಸಿರುವುದು ಮಹತ್ವದ್ದು. ಅರ್ಹರಿರುವ ಎಲ್ಲರೂ ಕೋವಿಡ್ ಲಸಿಕೆ ಪಡೆಯುವಂತೆ ಮನವಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಭಾರತವನ್ನು ಕೋವಿಡ್ ಮುಕ್ತಗೊಳಿಸೋಣ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಕೇರಳ ಮತ್ತು ಪುದುಚೇರಿ ಮೂಲದ ದಾದಿಯರಾದ ರೋಸಮ್ಮ ಅನಿಲ್ ಮತ್ತು ಪಿ ನಿವೇದಿತಾ ಲಸಿಕೆ ಚುಚ್ಚಿದರು.

ಲಸಿಕೆ ಪಡೆದ ಬಳಿಕ ದಾದಿಯರ ಜೊತೆಗೆ ಪ್ರಧಾನಿ ಮಾತಾಡಿದರು. ಲಸಿಕೆ ಚುಚ್ಚಿ ಆಯ್ತಾ..? ನನಗೆ ಗೊತ್ತೇ ಆಗಲ್ವಿಲ್ಲ..! ಎಂದು ಪ್ರಧಾನಿ ಮೋದಿ ಹೇಳಿದರು ಎಂದು ದಾದಿ ಪಿ ನಿವೇದಿತಾ ಹೇಳಿದ್ದಾರೆ.

Related posts

ಗುಜರಾತ್​ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: 6 ಮುನ್ಸಿಪಾಲ್​ ಕ್ಲೀನ್​ ಸ್ವೀಪ್​

Sushmitha Jain

ಕೋವಿಡ್ ಸೋಂಕಿಗೆ ತುತ್ತಾಗಿದ್ದ ಉತ್ತರ ಪ್ರದೇಶ ದ ಸಚಿವೆ ಕಮಲ ರಾಣಿ ನಿಧನ

Harshitha Harish

ದೆಹಲಿ: ಕರ್ತವ್ಯ ದಲ್ಲಿ ತೊಡಗಿದ್ದ ಯೋಧ ಆತ್ಮಹತ್ಯೆ

Harshitha Harish