ಬೆಂಗಳೂರು : ಇತ್ತೀಚಿಗೆ ಸ್ಯಾಂಡಲ್ ವುಡ್
ಅವರಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ ಮತ್ತು ಛಾಯಾ ಸಿಂಗ್ ಮೂವರು ನಟಿಯರು ಹಾರರ್ ಸಿನಿಮಾಗಾಗಿ ಒಟ್ಟಾಗಿದ್ದಾರೆ.
ಈ ಮೂವರು ನಟಿಯರಿಗೆ ಕಾಲಿವುಡ್ ನಿರ್ದೇಶಕ ಗೌತಮ್ ವಿ.ಪಿ ಆಕ್ಷನ್ ಕಟ್ ಹೇಳುವ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.
ಈ ಸಿನಿಮಾದ ಟೈಟಲ್ ಇನ್ನೂ ಬಹಿರಂಗವಾಗಿಲ್ಲ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಹಾರರ್ ವಿಷಯಗಳು ಇದೆ.
ಚಿತ್ರದಲ್ಲಿ ಈ ಮೂವರು ನಟಿಯರು ಬೇರೆ ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಚಿತ್ರೀಕರಣ ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆಸಲು ಸಿನಿಮಾ ತಂಡವು ಪ್ಲಾನ್ ಮಾಡಿದೆ.
ಚಿತ್ರದಲ್ಲಿ ಶಿವಾಜಿ ಸೂರತ್ಕಲ್ ಖ್ಯಾತಿಯ ನಟ ವಿನಯ್ ಗೌಡ ನಟನೆ ಮಾಡುತ್ತಿದ್ದಾರೆ. ಈ ಸಿನಿಮಾ ಪ್ರಸ್ತುತ ಕಾಲಘಟ್ಟದ ಜೊತೆಗೆ 1960ರ ದಶಕದ ಕಥೆಯನ್ನೂ ಒಳಗೊಂಡಿದೆ.
ಹಾಗಾಗಿ ಪಾತ್ರಗಳು ಎರಡು ಶೇಡ್ ಗಳಲ್ಲಿ ಮೂಡಿಬರಲಿದ್ದು, ಈ ಹೊಸದಾದ ಸಿನಿಮಾ ನವೆಂಬರ್ 17 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.
ನವೆಂಬರ್ 11ರಂದು ಸಿನಿಮಾ ಟೈಟಲ್ ರಿವೀಲ್ ಆಗಲಿದ್ದು, ಬೆಂಗಳೂರಿನಲ್ಲಿ ಟೈಟಲ್ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಶೀರ್ಷಿಕೆ ಬಹಿರಂಗಗೊಳಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಟ ಉಪೇಂದ್ರ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.