ಕಲೆ ಸಂಸ್ಕೃತಿ ಪ್ರತಿಭೆ-ಪರಿಚಯ

ಸುಮಧುರ ಕಂಠದ ಭಾಗವತರು ಚಂದ್ರಕಾಂತ್ ರಾವ್ ಮೂಡುಬೆಳ್ಳೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಪ್ರಸಿದ್ಧ ಕಲೆ ಯಕ್ಷಗಾನ.ಇಂತಹ ಪ್ರಸಿದ್ಧ ಕಲೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಬಡಗುತಿಟ್ಟಿನ ಖ್ಯಾತ ಭಾಗವತರು ಶ್ರೀಯುತ ಚಂದ್ರಕಾಂತ್ ರಾವ್ ಮೂಡುಬೆಳ್ಳೆ. ದಿನಾಂಕ 11.06 .1979 ಶ್ರೀಮತಿ ಮೋಹಿನಿ ರಾವ್ ಹಾಗೂ ವೆಂಕಟರಮಣ ರಾವ್ ಇವರ ಪ್ರೀತಿಯ ಮಗನಾಗಿ ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ.

ದಿ ಗೋರ್ಪಡಿ ವಿಠಲ್ ಪಟೇಲ್ ಇಂದ್ರಾಳಿ ಹಾಗೂ ಪ್ರಭಾಕರ ಆಚಾರ್ಯ ಪ್ರಮುಖರು ಇವರ ಯಕ್ಷಗಾನದ ಗುರುಗಳು. ಹಟ್ಟಿಯಂಗಡಿ, ಜಲವಳ್ಳಿ ಮೇಳದಲ್ಲಿ ತಿರುಗಾಟ ನಡೆಸಿ, ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಒಟ್ಟು 18 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ವೃತ್ತಿಯಾಗಿ ಮೇಳದಲ್ಲಿ ಕಳೆದ 4 ವರ್ಷದಿಂದ ತಿರುಗಾಟ ಮಾಡುತ್ತಿದ್ದಾರೆ.ಕರಹರ ಪ್ರಿಯ ಹಾಗೂ ಅಠಾಣ ಇವರ ನೆಚ್ಚಿನ ರಾಗಗಳು. ಪೌರಾಣಿಕ ಪ್ರಸಂಗಗಳು ಅಂದ್ರೇ ಇವರಿಗೆ ತುಂಬಾನೇ ಅಚ್ಚುಮೆಚ್ಚು. ಈಶ್ವರಿ ಪರಮೇಶ್ವರಿ, ರಂಗನಾಯಕಿ,ಚಂದ್ರಮುಖಿ ಸೂರ್ಯಸಖಿ ಇವರ ನೆಚ್ಚಿನ ಪ್ರಸಂಗಗಳು.

ಮೊದಲು ಸಂಘಗಳಲ್ಲಿ ಶನಿ, ಮಾಗಧ ಇತ್ಯಾದಿ ವೇಷಗಳನ್ನು ಮಾಡಿದ್ದಾರೆ. ಹೆರಂಜಾಲು ಗೋಪಾಲ್ ಗಾಣಿಗ ಹಾಗೂ ವಿದ್ವಾನ್ ಗಣಪತಿ ಭಟ್, ಹೊಸ ಪ್ರಸಂಗದಲ್ಲಿ ಸುಬ್ರಮಣ್ಯ ಧಾರೇಶ್ವರ ಇವರ ನೆಚ್ಚಿನ ಭಾಗವತರು. ಸಂಗೀತ ಹೇಳುವುದು ಹಾಗೂ ಕೇಳುವುದು ಇವರ ಹವ್ಯಾಸ.

ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳುವಾಗ ಇವರು ಹೀಗೆ ಹೇಳುತ್ತಾರೆ:-
ಹಿಂದಿನ ಕಾಲಕ್ಕೆ ನೋಡಿದ್ರೆ ಸ್ಥಿತಿ ತುಂಬಾನೇ ಉತ್ತಮವಾಗಿ ಇದೇ.ವಿಶ್ವದಾದ್ಯಂತ ಯಕ್ಷಗಾನದ ಕಂಪು ಹರಡುತ್ತಿದೆ.

ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳುವಾಗ ಇವರು ಹೀಗೆ ಹೇಳುತ್ತಾರೆ:-
ಪ್ರತೀ ಒಬ್ಬ ಪ್ರೇಕ್ಷಕರ ಅಭಿಪ್ರಾಯ ಬೇರೆ ಇರುತ್ತೆ, ಹಾಗಾಗಿ ಪ್ರತೀ ಪ್ರೇಕ್ಷಕರು ಅವರ ಅಭಿಪ್ರಾಯಕ್ಕೆ ಸ್ವತಂತ್ರರು.

ದಿನಾಂಕ 08.04.2012ರಲ್ಲಿ ದೀಪಿಕಾ ಸಿ ರಾವ್ ಇವರನ್ನು ಮದುವೆಯಾಗಿ ಅನುಶ್ರೀ ಸಿ ರಾವ್ ಹಾಗೂ ಸ್ಕಂದ ಸಿ ರಾವ್ ಮುದ್ದಾದ ಮಕ್ಕಳ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ನಾವು ನಂಬಿರುವ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಹಾರೈಸೋಣ.

– ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿಗೆ ಕುಂಬಳೆ ಸುಂದರರಾವ್ ಆಯ್ಕೆ: ಡಿ.7ರಂದು ಒಡಿಯೂರಿನಲ್ಲಿ ಪ್ರದಾನ

Upayuktha

ಚೆನ್ನೈ ಯಕ್ಷೋತ್ಸವದಲ್ಲಿ ಇಂದು ಬಪ್ಪನಾಡು ಕ್ಷೇತ್ರ ಮಹಾತ್ಮೆ

Upayuktha

ವಿದುಷಿ ಅರ್ಥಾ ಪೆರ್ಲ ಅವರಿಂದ ‘ನೃತ್ಯಾರ್ಪಣ’

Upayuktha

Leave a Comment