ಕಲೆ ಸಂಸ್ಕೃತಿ ಪ್ರತಿಭೆ-ಪರಿಚಯ

ಸಂಗೀತ ಲೋಕದ ಯುವ ಗಾಯಕಿ ವಿದುಷಿ ರೂಪಶ್ರೀ ಶ್ರವಣ್

ದಕ್ಷಿಣ ಕನ್ನಡ ಜಿಲ್ಲೆ ಸಂಗೀತ ಕ್ಷೇತ್ರಕ್ಕೆ ಅನೇಕ ಪ್ರತಿಭೆಯನ್ನು ಕೊಡುಗೆಯಾಗಿ ನೀಡಿದೆ.ಇಂತಹ ಪ್ರತಿಭೆಯಲ್ಲಿ ಇಂದು ಪ್ರಜ್ವಲಿಸುತ್ತಿರುವ ಪ್ರತಿಭೆ ಶ್ರೀಮತಿ ವಿದುಷಿ ರೂಪಶೀ ಶ್ರವಣ್.

ದಿನಾಂಕ 12.07.1994 ಪುತ್ತೂರು ತಾಲೂಕು ಮುಂಡೂರು ಎಂಬ ಪುಟ್ಟ ಗ್ರಾಮದಲ್ಲಿ ಶ್ರೀಮತಿ ರಾಜೇಶ್ವರಿ ಮತ್ತು ಶ್ರೀ ರಮೇಶ್ ಕಣ್ಣಾರಾಯ ಇವರ ಪ್ರೀತಿಯ ಮಗಳಾಗಿ ಜನನ.MSC in Physics ಇವರ ವಿದ್ಯಾಭ್ಯಾಸ.

ಮನೆಯಲ್ಲಿ ಸಂಗೀತ ವಾತಾವರಣ ಇದ್ದ ಕಾರಣ ಸಂಗೀತ ಕ್ಷೇತ್ರ ಇವರನ್ನು ಆಕರ್ಷಣೆ ಮಾಡಲು ತುಂಬಾ ಸಮಯ ಬೇಕಾಗಲಿಲ್ಲ.ತಮ್ಮ 9ನೇ ವಯಸ್ಸಿನಲ್ಲಿ ತನ್ನ ತಾಯಿಯಿಂದ ಶಾಸ್ತ್ರೀಯ ಸಂಗೀತ ಅಧ್ಯಯನ ಮಾಡಿ ಜೂನಿಯರ್ ಹಾಗೂ ಸೀನಿಯರ್ ಮುಗಿಸಿ ಮುಂದೆ ವಿಧುಷಿ ಶ್ರೀಮತಿ ಪವಿತ್ರ ರೂಪೇಶ್ ಇವರ ಮಾರ್ಗದರ್ಶನದಲ್ಲಿ ವಿದ್ವತ್ ಪರೀಕ್ಷೆಯನ್ನು ಮುಗಿಸಿರುತ್ತಾರೆ.ಇವಾಗ ಒಟ್ಟು 17 ವರ್ಷಗಳಿಂದ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.ಈವರೆಗೆ 250ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆಗಳಿಸಿರುತ್ತಾರೆ.ಶಾಸ್ತ್ರೀಯ ಸಂಗೀತದ ಜೊತೆಗೆ “ಸುಗಮ ಸಂಗೀತ,ಜಾನಪದ ಸಂಗೀತವನ್ನು ಹಾಡುವುದು ಕರಗತ ಮಾಡಿಕೊಂಡಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಇವರಿಗೆ “ಎಂ.ಸ್. ಸುಬ್ಬಲಕ್ಷ್ಮಿ, ಬೊಂಬೆ ಜಯಶ್ರೀ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಿಜಯ್ ಪ್ರಕಾಶ್ ಇತರರು ಇವರ ನೆಚ್ಚಿನ ಗಾಯಕರು. ಚಿತ್ರಕಲೆ, ನೃತ್ಯ,ಪುಸ್ತಕ ಓದುವುದು ಇವರ ಹವ್ಯಾಸಗಳು. RS Melodies ಎಂಬ ಒಂದು ತಂಡವನ್ನು ಹುಟ್ಟು ಹಾಕಿ ಅನೇಕ ಕಾರ್ಯಕ್ರಮಗಳನ್ನು ಈ ತಂಡದ ಮೂಲಕ ನೀಡಿರುತ್ತಾರೆ.

ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆಗಳು ಹಾಗೂ ಇವರು ನೀಡಿರುವ ಕಾರ್ಯಕ್ರಮಗಳು:-

● 2006ರಲ್ಲಿ ಶಿಕ್ಷಕರ ಪ್ರತಿಷ್ಠಾನ ಮಂಗಳೂರು ಇವರು ಆಯೋಜಿಸಿದ ಜನಪದ ಗೀತೆ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ.

● 2007ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ.

● 2008, 2013, 2015ರಲ್ಲಿ ಮಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ ಅಂತರ್ ಕಾಲೇಜು ಶಾಸ್ತ್ರೀಯ ಸಂಗೀತ ಸ್ಫರ್ಧೆಯಲ್ಲಿ ಪ್ರಶಸ್ತಿ.

● 2013, 2014ರಲ್ಲಿ ಎಸ್.ವಿ.ಎಸ್ ಕಾಲೇಜ್ ಆಯೋಜಿಸಿದ ಅಂತರ್ ಕಾಲೇಜು ಶಾಸ್ತ್ರೀಯ ಸಂಗೀತ ಸ್ಫರ್ಧೆಯಲ್ಲಿ ಪ್ರಶಸ್ತಿ.

● 2015ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಯುವ ಸಂಗೀತ ಸ್ಫರ್ಧೆಯಲ್ಲಿ ಕಾರ್ಯಕ್ರಮ ನೀಡಲು ಆಯ್ಕೆ.

● 2016ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ “ಯುವಸೌರಭ” ಕಾರ್ಯಕ್ರಮದಲ್ಲಿ ಸಂಗೀತ ನೀಡಲು ಆಯ್ಕೆ.

● 2017ರಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ ಕಾರ್ಯಕ್ರಮ ನೀಡಲು ಆಯ್ಕೆ.

●2019ರಲ್ಲಿ ಕರಾವಳಿ ಕಲಾವಿದರು ಒಕ್ಕೂಟ ಇವರು ನಡೆಸಿದ “ಸ್ವರ ಕುಡ್ಲ” ಸಂಗೀತ ಸ್ಪರ್ಧೆಯ Season 1 ಕಾರ್ಯಕ್ರಮದ ವಿಜೇತೆ ಹಾಗೂ Season 2ರ ಟಾಪ್ ಫೈನಲಿಸ್ಟ್ ಆಗಿ ಹೊರಹೊಮ್ಮಿದರು.

● 3 ವರ್ಷಗಳಿಂದ ಆಕಾಶವಾಣಿಯ ಯುವವಾಣಿ ವಿಭಾಗದ ಕಲಾವಿದೆಯಾಗಿ ಕಾರ್ಯಕ್ರಮ ನೀಡುತ್ತಿದ್ದಾರೆ.

●ನಕ್ಷತ್ರ ಲೋಕ YouTube Channel ನಡೆಸಿದ “ಕರಾವಳಿ ಗಾನ ಕೋಗಿಲೆ” ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

●ಡಿಡಿ ಚಂದನ ವಾಹಿನಿ ನಡೆಸಿದ “ಗಾನಚಂದನ” ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಅಲ್ಲದೆ ಮಂಗಳೂರು, ಮಡಿಕೇರಿ , ಉಡುಪಿ, ಸುಬ್ರಹ್ಮಣ್ಯ, ಶಿವಮೊಗ್ಗ ಮುಂತಾದ ಕಡೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ,ಕನ್ನಡ ರಾಜ್ಯೋತ್ಸವ,ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಮುಂತಾದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡಿ ಜನಮನ ರಂಜಿಸಿರುತ್ತಾರೆ. ಅಲ್ಲದೆ ಬಜಪೆಯ “ಶಾಂತಿ ಕಲಾ ಕೇಂದ್ರ” ಸೇರಿದಂತೆ ಹಲವು ಕಡೆಗಳಲ್ಲಿ ಸಂಗೀತದ ತರಗತಿಗಳನ್ನು ನಡೆಸುತ್ತಿದ್ದಾರೆ.

ಇವತ್ತಿನ ಸಂಗೀತ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೀಗೆ ಹೇಳುತ್ತಾರೆ “ಇವತ್ತಿನ ಸಂಗೀತ ಪ್ರೇಕ್ಷಕರರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಒಲವು ಕಡಿಮೆಯಾಗಿದೆ ಹಾಗೂ ಬೇರೆ ರೀತಿಯ ಸಂಗೀತದಲ್ಲಿ ತುಂಬಾನೇ ಆಸಕ್ತಿ ಇದೆ”.

ಸಂಗೀತ ಕ್ಷೇತ್ರದಲ್ಲಿ ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ ಇವರು ಹೀಗೆ ಹೇಳುತ್ತಾರೆ “ಸಂಗೀತದಲ್ಲಿ ಇನ್ನಷ್ಟು ಸಾಧನೆ ಮಾಡುವುದು ಹಾಗೂ ನನ್ನದೇ ಸ್ವಂತ ಸಂಗೀತ ಶಾಲೆ ತೆರೆಯಬೇಕು”.

ದಿನಾಂಕ 12.12.2018 ರಂದು ಶ್ರವಣ್ ಕುಮಾರ್ ಕೊಳಂಬೆ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಶ್ರೀಯುತ ಶ್ರವಣ್ ಕುಮಾರ್ ಇವರು ಕೂಡ ಒಬ್ಬ ಯಕ್ಷಗಾನ ಕಲಾವಿದ ಹಾಗೂ ಒಳ್ಳೆಯ ಸಂಗೀತವನ್ನು ಹಾಡುತ್ತಾರೆ.

ಇವರಿಗೆ ಕಲಾ ಸರಸ್ವತಿ ಹಾಗೂ ನಾವು ನಂಬಿರುವ ಕಲಾಮಾತೆ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಹಾರೈಸೋಣ.

– ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ

Upayuktha

ಕಟೀಲು ಮೇಳದ ತಿರುಗಾಟ ಇಂದಿನಿಂದ; ಮೊದಲ ಸೇವೆಯಾಟ ಕಟೀಲು ದೇವಿಯ ಸನ್ನಿಧಿಯಲ್ಲಿ

Upayuktha

ಫೆ.8ರಂದು ಕಾವೂರಿನಲ್ಲಿ ಕಟೀಲು ಯಕ್ಷಗಾನ ಬಯಲಾಟದ ವಜ್ರಮಹೋತ್ಸವ

Upayuktha

Leave a Comment

error: Copying Content is Prohibited !!