ಓದುಗರ ವೇದಿಕೆ

ಒತ್ತಾಯ: ಸಂವಿಧಾನ ತಜ್ಞ ಬೆನಗಲ್ ನರಸಿಂಹ ರಾವ್ ಹುಟ್ಟೂರಲ್ಲಿ ಸ್ಮಾರಕ, ಅಧ್ಯಯನ ಕೇಂದ್ರ ಬೇಕು

ಭಾರತ ಸಂವಿಧಾನ ಅಂದ ತಕ್ಷಣವೇ ನೆನಪಿಗೆ ಬರಲೇ ಬೇಕಾದ ಇನ್ನೊಂದು ಪ್ರಮುಖವಾದ ಹೆಸರು ಬೆನೆಗಲ್ ನರಸಿಂಹ ರಾವ್.

ಭಾರತ ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರ್‌ ಜತೆ ಸೇರಿ ಪ್ರಮುಖ ಪಾತ್ರ ವಹಿಸಿದವರಲ್ಲಿ ನಮ್ಮ ಊರಿನವರೇ ಆದ ಬಿ.ಎನ್.ರಾವ್ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಭಾರತ ಸಂವಿಧಾನ ರಚನಾ ಸಭೆಯಲ್ಲಿ ಪ್ರಧಾನ ವಿಷಯ ತಜ್ಞ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.ಆಡಳಿತ ಸೇವೆಯಲ್ಲಿ ಉತ್ಕೃಷ್ಟ ಮಟ್ಟದ ಪದವಿ ಗಳಿಸಿರುವ ಇವರು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಇವರಿಗಿದೆ.

ಇಂತಹ ಮಹಾನ್ ವ್ಯಕ್ತಿಯ ಹೆಸರು ಕೂಡಾ ಅವರ ಹುಟ್ಟೂರಿನವರಾದ ನಾವು ಮರೆಯುವ ಸ್ಥಿತಿಯಲ್ಲಿ ನಾವಿದ್ದೇವೆ. ಅವರ ಹೆಸರನ್ನು ಮುಂದಿನ ಪೀಳಿಗೆ ಶಾಶ್ವತವಾಗಿ ನೆನಪಿಸುವ ಜೊತೆಗೆ ಬಹು ಉಪಯುಕ್ತವಾದ ಸಂವಿಧಾನ ಅಧ್ಯಯನ ಮತ್ತು ಮಾಹಿತಿ ಕೇಂದ್ರ ಉಡುಪಿ ಜಿಲ್ಲಾ ಕೇಂದ್ರದಲ್ಲಿ ಬೆನಗಲ್ ನರಸಿಂಹ ರಾವ್ ಹೆಸರಿನಲ್ಲಿ ಸ್ಥಾಪನೆಯಾಗ ಬೇಕು ಅನ್ನುವುದು ನಮ್ಮೆಲ್ಲರ ಕೇೂರಿಕೆಯೂ ಹೌದು.

ಜಿಲ್ಲಾ ಆಡಳಿತ ಈ ನಿಟ್ಟಿನಲ್ಲಿ ಕೂಡಲೆ ಸ್ಪಂದಿಸಲಿ ಅನ್ನುವುದು ಎಲ್ಲಾ ಪ್ರಜ್ಞಾವಂತರ ವಿನಮ್ರ ಮನವಿ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಅಳಿದ ಮೇಲೆ: ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರದ ಸುತ್ತ…

Upayuktha

ಮರೆಯುವ ಮುನ್ನ ನೆನಪಿರಲಿ ಗೆಳೆತನ…

Upayuktha

ಯಾರನ್ನು, ಹೇಗೆ ಬೇಕಾದರೂ ಬೈಯ್ಯುವುದು ವಾಕ್‌ ಸ್ವಾತಂತ್ರ್ಯವೆ..?

Upayuktha