ಲೇಖನಗಳು ಶಿಕ್ಷಣ

ಸಾರ್ವಜನಿಕ ಆಡಳಿತದ ಪಾಠ- 1

“ಆಡಳಿತ ಒಂದು ಕಲೆ”. ನಾಗರಿಕ ಸೇವಾ ಆಡಳಿತವಿರಬಹುದು, ರಾಜಕೀಯ ಕಾರ್ಯಾಂಗದ ಆಡಳಿತವಿರಬಹುದು; ನೀವು ಆಡಳಿತಗಾರನಾಗಿ ಯಶಸ್ವಿಯಾಗಬೇಕಾದರೆ ಉತ್ತಮ ನಾಯಕತ್ವದ ಕಲೆಯನ್ನು ತಿಳಿದಿರಲೇಬೇಕು. ಹಾಗಂತ ಸಾವ೯ಜನಿಕ ಆಡಳಿತ ಪಠ್ಯ ಓದಿದ ತಕ್ಷಣವೇ ನಾವು ಆಡಳಿತದಲ್ಲಿ ಪರಿಣಿತರಾಗುತ್ತೇವೆ ಅನ್ನುವುದು ತಪ್ಪು. ಸಿದ್ಧಾಂತವೇ ಬೇರೆ ವಾಸ್ತವಿಕತೆಯೇ ಬೇರೆ. ಅನುಭವಜನ್ಯ ಪಾಠವೂ ಹೌದು.

ಕೆಲವರಿಗೆ ಮನಸ್ಸಿನಲ್ಲಿ ಇರುತ್ತದೆ ಎಲ್ಲವೂ ನನ್ನಿಂದಲೇ ಆಗಬೇಕು, ಜನ ನನ್ನನ್ನು ಸದಾ ನೆನಪಿಸಿಕೊಳ್ಳಬೇಕು. ಹಾಗಂತ ಇಂತಹ ತುಡಿತ ತಪ್ಪಲ್ಲ ಆದರೆ ಇದನ್ನು ಎಲ್ಲಿಯೂ ಪ್ರಕಟ ಪಡಿಸುವಂತಿರಬಾರದು. ಅದನ್ನು ತುಂಬಾ ಕಲಾತ್ಮಕವಾಗಿ ಆಡಳಿತದಲ್ಲಿ ಅಳವಡಿಸಿ ನಾಯಕತ್ವ ಮುನ್ನಡೆಸಬೇಕು.

1.ಉದಾ. ಶಾಲೆಯಲ್ಲಿ ಒಬ್ಬರು ಹೆಡ್‌ ಮಾಸ್ಟರ್‌ ಇದ್ದಾರೆ ಅಂತ ಇಟ್ಟು ಕೊಳ್ಳಿ, ಆ ಹೆಡ್‌ ಮಾಸ್ಟರ್‌ಗೆ ಒಂದೇ ಒಂದು ಗಾಂಗ್ರಾಣಿ (ಬಯಕೆ) ಅಂದರೆ ಇಡಿ ಶಾಲೆಯಲ್ಲಿ ವಿದ್ಯಾರ್ಥಿಗಳು ನನ್ನ ಹೆಸರೇ ಹೇಳಬೇಕು, ನನ್ನನ್ನು ನೇೂಡಿಯೇ ಹೆದರಿಕೊಳ್ಳಬೇಕು. ಶಾಲೆ ಶಿಸ್ತು ನನ್ನಿಂದಲೇ ಸ್ಥಾಪನೆ ಆಗಿದೆ ಅನ್ನುವ ಕೀರ್ತಿ ನನಗೆ ಬೇಕು… ಹಾಗಾಗಿ ಆ ಹೆಡ್‌ ಮಾಸ್ಟರ್‌ ಶಾಲೆಯ ಎಲ್ಲಾ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ತಾವೇ ಹೆಗಲು ಕೊಡುವುದು… ಎಲ್ಲಿಯೂ ಕೂಡಾ ತನ್ನ ಸಹ ಶಿಕ್ಷಕರರಿಗೆ ಯಾವ ಜವಾಬ್ದಾರಿಯನ್ನು ನೀಡುತ್ತಿರಲಿಲ್ಲ.

2. ಕೊನೆಗೆ ಇದರ ಪರಿಣಾಮ ಏನಾಯಿತು ನೇೂಡಿ. ಸಹ ಶಿಕ್ಷಕರು ಕೂಡಾ ಆಡಳಿತಾತ್ಮಕ ಸಮಸ್ಯೆಗಳು ಬಂದಾಗ ಹೆಡ್‌ ಮಾಸ್ಟರ್‌ ಕಡೆಗೆ ಕೆೈ ಮಾಡುವುದು.. ಮೇಸ್ಟರ ಎದುರಿನಲ್ಲಿ ಮಕ್ಕಳು ಜಗಳ ಮಾಡಿಕೊಂಡಾಂಗ ಆ ಶಿಕ್ಷಕರು ಹೇಳುವುದೇನು ಗೊತ್ತೇ? “ಸ್ವಲ್ಪ ಹೊತ್ತು ಸುಮ್ಮನಿರೊ.. ಈಗ ಹೆಡ್ ಮಾಸ್ಟರ್‌ ಬರುತ್ತಾರೆ”. ಅದಕ್ಕೆ ಮಕ್ಕಳು ಹೇಳುವುದು “ನೀವು ಸುಮ್ಮನಿರಿ ಸರ್, ಹೆಡ್‌ ಮಾಸ್ಟರ್‌ ಬಂದ ಮೇಲೆ ನೇೂಡಿದರಾಯಿತು”..

3. ಈ ಪರಿಸ್ಥಿತಿ ಶಾಲೆಯಲ್ಲಿ ಬರಲು ಕಾರಣ ಯಾರು? ನಾಯಕತ್ವದ ಗುಣ ದೇೂಷವಿರುವ ಹೆಡ್ ಮಾಸ್ಟರ್‌ ರೇ ಮೂಲ ಕಾರಣ. ತನ್ನ ಸಹದ್ಯೊಗಿಗಳಿಗೆ ಸ್ವಲ್ಪವೂ ಜವಾಬ್ದಾರಿ ನೀಡದೇ ಎಲ್ಲವನ್ನೂ ತಾನೇ ನಿಭಾಯಿಸುತ್ತೇನೆ ಎಂಬ ಹುಂಬತನ. ಉತ್ತಮ ನಾಯಕತ್ವ ಅಂದರೆ ಅಧಿಕಾರ ಜವಾಬ್ದಾರಿ ತನವನ್ನು ಕೆಳಸ್ತರದವರಿಗೆ ನಿಯೇೂಜಿಸ ಬೇಕಿತ್ತು. ಮೇಲೆ ಕೂತ ಹೆಡ್‌ ಮಾಸ್ಟರ್‌ ತಾನು ನೀಡಿದ ಅಧಿಕಾರವನ್ನು ಕೆಳಗಿನ ಅಧಿಕಾರಿಗಳು ಯಾವ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ ಅನ್ನುವುದನ್ನು ವೀಕ್ಷಿಸಿ ತಪ್ಪಿದ್ದರೆ ಮಾಗ೯ದಶ೯ನ ಮಾಡಿ ಎಚ್ಚರಿಸುವ ಕೆಲಸ ಮೇಲೆ ಕೂತ ಅಧಿಕಾರಿಗಳು ಮಾಡಬೇಕು. ಅದನ್ನು ಬಿಟ್ಟು ನೀವೇ ದಿನ ನಿತ್ಯವೂ ಫ್ರಂಟ್ ಲೆೈನ್ ನಲ್ಲಿ ನಿಂತಾಗ ನಿಮ್ಮ ಸಬ್ ಆಡಿ೯ನೇಟು ತಮ್ಮ ಜವಾಬ್ದಾರಿಯನ್ನೆಲ್ಲ ಮರೆತು ಕೆೈ ಕಟ್ಟಿ ಇನ್ನೂ ಹಿಂದಕ್ಕೆ ಹೇೂಗಿ ನಿಲ್ಲುತ್ತಾರೆ ಇದು ಸಹಜ ಕೂಡಾ. ಆಡಳಿತ ಅನ್ನುವುದು ಒಂದು ಸಾಂಘಿಕ ಕೆಲಸ (team work) ಅನ್ನುವುದು ಸಾವ೯ಜನಿಕ ಆಡಳಿತ ಶಾಸ್ತ್ರ ಹೇಳುವ ಮೊದಲ ಪಾಠ.

2ನೇ ಪಾಠ ಮುಂದಿನ ಕಂತಿನಲ್ಲಿ. ಪ್ರತಿಕ್ರಿಯೆಗೆ ಸದಾ ಸ್ವಾಗತ…

-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕೊರೊನಾ ನಂತರದ ಆರ್ಥಿಕತೆ: ವಲಸೆ ಕಾರ್ಮಿಕರ ಪುನಶ್ಚೇತನಕ್ಕೆ ಕಾಯಕಲ್ಪ ಆಗಬೇಕು

Upayuktha

ಪುಸ್ತಕ ವಿಮರ್ಶೆ: ಸಮಾಜಮುಖಿ, ಆರೋಗ್ಯಪೂರ್ಣ ಧೋರಣೆಯ ‘ಸುರಕ್ಷಾ- ದಂತ ಆರೋಗ್ಯ ಮಾರ್ಗದರ್ಶಿ’

Upayuktha

ನೆನಪಿನ ಬುತ್ತಿ: ಬಡತನ ಕಲಿಸುವ ಮಾನವೀಯತೆಗೆ ಬೆಲೆ ಕಟ್ಟಲಾದೀತೆ…?

Upayuktha