ದೇಶ-ವಿದೇಶ

ಪುಲ್ವಾಮಾ : ಜೆಇಎಂ ಉಗ್ರರಿಬ್ಬರನ್ನು ಬಂಧಿಸಿದ ಭಾರತೀಯ ಸೇನೆ

ಪುಲ್ವಾಮಾ: ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜೈಶ್ ಇ ಮೊಹಮ್ಮದ್(ಜೆಇಎಂ) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ.

ಸ್ಥಳೀಯ ಪೊಲೀಸರ ಜೊತೆಸೇರಿ 42ನೇ ರಾಷ್ಟ್ರೀಯ ರೈಫಲ್(ಆರ್ ಆರ್) ಮತ್ತು ಸಿಆರ್ ಪಿಎಫ್ ಯೋಧರು ಅವಂತಿಪೋರದಲ್ಲಿ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ.

ಉಗ್ರರಿಗೆ ವಸತಿ, ಶಸ್ತ್ರಾಸ್ತ್ರಗಳ ರವಾನೆ ಮಾಡಲು ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ಶಿಝನ್ ಗುಲ್ಜರ್ ಮತ್ತು ವಸೀಂ ಉಲ್ ರೆಹಮಾನ್ ಶೇಕ್ ನನ್ನು ಬಂಧಿಸಿದರು.

ಈ ವೇಳೆ ಸ್ಫೋಟಕ ವಸ್ತುಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಭಯೋತ್ಪಾದಕ ಸಹಚರರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪಾಕಿಸ್ತಾನ ಮೂಲದ ಭಯೋತ್ಪಾದಕ ಕಮಾಂಡರ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಭಯೋತ್ಪಾದಕ ಸಹಚರರೊಬ್ಬರು ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಕೆಲವು ಭಯೋತ್ಪಾದಕ ಕಮಾಂಡರ್‌ಗಳನ್ನು ಭೇಟಿಯಾಗಿದ್ದರೂ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಐರಾವತ ಸಿನಿಮಾದ ನಟಿ ಊರ್ವಶಿ ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಯವರ ಭೇಟಿ

Harshitha Harish

ದೇಶದ್ರೋಹ ಪ್ರಕರಣ: ಪಾಕ್ ಮಾಜಿ ಅಧ್ಯಕ್ಷ ಮುಷರಫ್‌ಗೆ ಮರಣದಂಡನೆ

Upayuktha

ಅಮೆರಿಕದ ಕವಯಿತ್ರಿ ಲೂಯಿಸ್ ಗ್ಲುಕ್‌ಗೆ ಸಾಹಿತ್ಯ ನೊಬೆಲ್ ಪುರಸ್ಕಾರ

Upayuktha