ಓದುಗರ ವೇದಿಕೆ ಪ್ರಮುಖ

ಪುಲ್ವಾಮಾ ಉಗ್ರ ದಾಳಿಗೆ ಒಂದು ವರ್ಷ: ಹುತಾತ್ಮ ಯೋಧರಿಗೊಂದು ಶ್ರದ್ಧಾ ನಮನ

(ಚಿತ್ರ ಕೃಪೆ: ಸ್ವರಾಜ್‌ ಡಾಟ್ ಕಾಮ್)

ಫೆಬ್ರವರಿ 14 ಅಂದ ಕೂಡಲೇ ನೆನಪಿಗೆ ಬರುವಂತಹದು ಪ್ರೇಮಿಗಳ ದಿನಾಚರಣೆ. ವರ್ಷ ಪೂರ್ತಿ ಅದುಮಿಟ್ಟುಕೊಂಡು ಪ್ರೀತಿಯನ್ನು ತನ್ನ ಬದುಕಿನಲ್ಲಿ ಸಿಹಿ ಕಹಿ ಎರಡರಲ್ಲೂ ಪಾಲುದಾರರಾಗುವ ವ್ಯಕ್ತಿಗೆ ತೋರ್ಪಡಿಸುವ ದಿನ. ಆದರೆ ಇದೇ ದಿನ ಕಳೆದ ವರ್ಷ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಯಾಗಿ 40 ಜನ ವೀರ ಯೋಧರು ತಮ್ಮ ಪ್ರಾಣವನ್ನೇ ಈ ನಮ್ಮ‌ ತಾಯ್ನಾಡಿಗೆ ಅರ್ಪಿಸಿದ್ದರು.

ಈ ಜೀವದಾನವಾಗಿದ್ದು ವಿರೋಧಿಗಳು ನಡೆಸಿದ ಯುದ್ದದಿಂದಲ್ಲ ಬದಲಾಗಿ ನಮ್ಮ ಯೋಧರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಿರುವಾಗ ಹಿಂಬಾಗಿಲಿನಿಂದ ಬರುವಂತೆ ಹೇಡಿ ಶತ್ರುಗಳು ನಡೆಸಿದ್ದ ವಿಧ್ವಂಸಕ ಕೃತ್ಯ. ನಾವು ನೀವೆಲ್ಲರೂ ಘಟನೆ ಸಂಭವಿಸಿದ ದಿನ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿದ್ದೆವು ಅವರ ಪತ್ನಿ ಮಕ್ಕಳು ಹಾಗೂ ಹೆತ್ತವರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದೆವು.

ಆದರೆ ಅದು ಕೇವಲ ಒಂದೆರಡು ದಿನ ಅದಾದ ನಂತರ ಪುಲ್ವಾಮಾದಂತಹ ಒಂದು ದುರ್ಘಟನೆ ನಡೆದಿದೆಯೇ ಎಂದು ಯೋಚಿಸಬೇಕಾದ ಪರಿಸ್ಥಿತಿಯಲ್ಲಿ ನಮ್ಮ ಬದುಕು ಸಾಗಿತ್ತು. ಏಕೆಂದರೆ ಮನುಷ್ಯ ಸಹಜ ಗುಣ ಮರೆವು. ಮತ್ತೆ ಹುತಾತ್ಮರಾದವರು ಬೇರೆಯವರು. ಯೋಧರು ವರ್ಷದ ಮುನ್ನೂರ ಅರವತ್ತೈದು ದಿನವೂ ನಮ್ಮ ಸುರಕ್ಷತೆಗಾಗಿ ಮಳೆ, ಚಳಿ, ಬಿಸಿಲು ಹವಾಮಾನ ವೈಪರೀತ್ಯ ಯಾವುದನ್ನು ಲೆಕ್ಕಿಸದೆ ತನ್ನ ಪರಿವಾರದ ಬಗೆಗೂ ಹೆಚ್ಚು ಚಿಂತಿಸದೆ ಯಾವುದೋ ದುರ್ಗಮ ಹಿಮ ಪರ್ವತದಲ್ಲಿ ಬದುಕುತ್ತಾರೆ. ಅವರು ರಕ್ಷಿಸುತ್ತಿರುವ ತಾಯಿ ಮಡಿಲಲ್ಲಿ ನಾವು ಬೆಚ್ಚಗೆ ಬದುಕುತ್ತಿದ್ದೇವೆ.

ಒಬ್ಬ ಪ್ರೇಮಿ ಅವನ ಅಥವಾ ಅವಳ ಪ್ರೇಮಿಯನ್ನು ಯಾವಾಗ ಬೇಕಾದರೂ ಭೇಟಿಯಾಗಬಹುದು ಹಾಗೂ ತನ್ನ ಪ್ರೀತಿಯನ್ನು ಹೇಳಬಹುದು ಕಾರಣ ಪ್ರೀತಿಯನ್ನು ಸಂಭ್ರಮಿಸಲು ಅದು ಒಂದು ದಿನ ಬಂದು ಹೋಗುವ ಜಾತ್ರೆಯಲ್ಲ. ಬದುಕಿನುದ್ದಕ್ಕೂ ನಡೆಯುವ ಸುಂದರ ಯಾತ್ರೆ. ಆದರೆ ಯೋಧರ ಬಲಿದಾನಗಳಿಗೆ ವರ್ಷದಲ್ಲಿ ಎಷ್ಟು ದಿನ ನಾವು ನೆನೆಯುತ್ತೇವೆ ಹಾಗೂ ಅವರ ಬಲಿದಾನಕ್ಕೆ ಸಮರ್ಪಕವಾದ ಗೌರವ ಅರ್ಪಿಸುತ್ತೇವೆ. ಯೋಧರೂ ನಮ್ಮೆಲ್ಲರ ಹಾಗೆ ಒಳ್ಳೆಯ ಜೀವನ ನಡೆಸಬೇಕು ಎಂದು ಕನಸು ಕಂಡವರೇ.

ತಮ್ಮ ಮಗುವಿನ ಚಿಕ್ಕ ನಟನೆಯನ್ನು ಜಾಲತಾಣಗಳಲ್ಲಿ ಹರಿದುಬಿಟ್ಟು ಮೆಚ್ಚುಗೆಗಳಿಸುವ ನಮ್ಮಗಳ‌ ನಡುವೆ, ತನ್ನ ಹೆತ್ತವರನ್ನು, ಜೀವನಪೂರ್ತಿ ನಿನ್ನ ಜೊತೆ ಇರುವೆ ಎಂದು ಕೈಹಿಡಿದ ಹೆಂಡತಿಯನ್ನು, ಇನ್ನೂ ಪ್ರಪಂಚ ಏನು ಎಂಬುದನ್ನು ಅರಿಯದ ಹಸುಗೂಸನ್ನು ಬಿಟ್ಟು ದೂರದ ಊರಿಗೆ ಹೋಗಿ ಮತ್ತೆ ಹಿಂದಿರುಗುವ ಖಚಿತತೆ ಇಲ್ಲದೆ ಬದುಕುವ ನಮ್ಮ ಯೋಧರದು. ಅವರ ಎಷ್ಟು ನಿಸ್ವಾರ್ಥ ಸೇವೆಯನ್ನು ನೆನೆಯೋಣ. ಹಾಗಾಗಿ ಇಂದಿಗೆ ವರ್ಷದ ಹಿಂದೆ ನಮ್ಮನ್ನಗಲಿ ಹುತಾತ್ಮರಾದ ಯೋಧರನ್ನು ಕೂಡ ಈ ಪ್ರೇಮಿಗಳ ದಿನಾಚರಣೆಯ ಗುಂಗಿನಲ್ಲಿ ನೆನೆದು ಅವರ ಸೇವೆಯನ್ನು ಪ್ರಶಂಸಿಸುವುದು ನಮ್ಮ ಕರ್ತವ್ಯ ಕೂಡ ಹೌದು.

– ಪ್ರದೀಪ ಶೆಟ್ಟಿ, ಬೇಳೂರು

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬೆಳ್ತಂಗಡಿ: ಸಂಚಾರಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಗಿ ಓಡಿಯಪ್ಪ ಗೌಡ ನೇಮಕ

Sushmitha Jain

‘ಎನ್‌ಪಿಆರ್‌ ಬಡವರ ಮೇಲಿನ ತೆರಿಗೆ’ ಎಂದ ರಾಹುಲ್‌ ‘ವರ್ಷದ ಸುಳ್ಳುಗಾರ;: ಬಿಜೆಪಿ ತಿರುಗೇಟು

Upayuktha

ಲಾಕ್‌ಡೌನ್ 4.0 ಮೇ 31ರ ವರೆಗೆ ಜಾರಿ: ಹೊಸ ಮಾರ್ಗಸೂಚಿ ಬಿಡುಗಡೆ

Upayuktha