ಕ್ರಿಕೆಟ್ ದೇಶ-ವಿದೇಶ

ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಆಸ್ಪತ್ರೆ ದಾಖಲು

ನವದೆಹಲಿ: ಐಪಿಎಲ್ ಪಂಜಾಬ್ ಕಿಂಗ್ಸ್‌ ತಂಡದ ನಾಯಕರಾಗಿರುವ ಕನ್ನಡಿಗ ಕೆಎಲ್ ರಾಹುಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, (ಅಪೆಂಡಿಸಿಟಿಸ್) ತುತ್ತಾಗಿರುವ ರಾಹುಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶೀಘ್ರ ಶಸ್ತ್ರ ಚಿಕಿತ್ಸೆಗೂ ಒಳಗಾಗಲಿದ್ದಾರೆ.

ಕಳೆದ ರಾತ್ರಿ ಅಂದರೆ ಮೇ 1ರಂದು ಕೆಎಲ್ ರಾಹುಲ್‌ಗೆ ಕಿಬ್ಬೊಟ್ಟೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು, ಔಷಧಿಗೆ ಸ್ಪಂದಿಸದಿದ್ದಾಗ ಬಯೋ ಬಬಲ್‌ ಒಳಗಿದ್ದ ತುರ್ತು ಚಿಕಿತ್ಸಾ ವಿಭಾಗಕ್ಕೆ ಅವರನ್ನು ಕರೆದೊಯ್ದು ಪರಿಶೀಲಿಸಲಾಗಿತ್ತು. ಆಗ ಅವರಿಗೆ ಅಪೆಂಡಿಸಿಟಿಸ್ ಇರುವುದು ಪತ್ತೆಯಾಗಿದೆ.

ಈ ಬಗ್ಗೆ ಪಂಜಾಬ್ ಕಿಂಗ್ಸ್ ಟ್ವಿಟರ್ ಮೂಲಕ ಮಾಹಿತಿ ತಿಳಿಸಿದ್ದಾರೆ.

Related posts

ಮಧ್ಯಪ್ರದೇಶ ದ ಕಾಂಗ್ರೆಸ್ ಶಾಸಕಿ ಕಲಾವತಿ ಭುರಿಯಾ ನಿಧನ

Harshitha Harish

ಸ್ವಚ್ಛ ಭಾರತ ಅಭಿಯಾನ: ಪ್ರಧಾನಿ ಮೋದಿಗೆ ಜಾಗತಿಕ ಗೋಲ್ ಕೀಪರ್ ಪ್ರಶಸ್ತಿ

Upayuktha

ಹಿಮಾಚಲ ಪ್ರದೇಶದಲ್ಲಿ ಪ್ರಧಾನಿಯಿಂದ ಉದ್ಘಾಟನೆ; ಅಟಲ್ ಸುರಂಗ ಮಾರ್ಗ

Harshitha Harish