ಕಲೆ ಸಂಸ್ಕೃತಿ ನಗರ

ನೃತ್ಯದ ಮೂಲಕ ಪರಿವರ್ತನೆ ತರುವ ಪ್ರಯತ್ನದ ರೂಪಕ- PURPOSE

ಜ.24ರಂದು ಬೆಂಗಳೂರಿನ ರಾಮಮೂರ್ತಿ ನಗರದ ವಿನಾಯಕ ನಗರದ ‘ಬೇರು’ ಆರ್ಟ್‌ ಸ್ಪೇಸ್‌ನಲ್ಲಿ
ತಪ್ಪದೇ ವೀಕ್ಷಿಸಿ

ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಹಲವರು ಧ್ವನಿ ಎತ್ತಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇಲ್ಲಿ ನೃತ್ಯ ಕಲಾವಿದೆಯೊಬ್ಬರು, ತಾವು ಸ್ವತಃ ಸಂಯೋಜಿಸಿರುವ ನೃತ್ಯದ ಮೂಲಕ ಇದೇ ಸಂದೇಶವನ್ನು ಜನ ಸಾಮಾನ್ಯರಿಗೆ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಈ ವಿನೂತನ ನೃತ್ಯ ರೂಪಕವೇ – “PURPOSE”.

ಪುರುಷರ ಅಧೀನದಲ್ಲಿ ಸಿಲುಕಿ ತಮ್ಮ ಸಾಮರ್ಥ್ಯ ಮತ್ತು ಆತ್ಮ ಬಲದ ಬಗ್ಗೆ ವಿಶ್ವಾಸವನ್ನು ಕಳೆದು ಕೊಂಡಿರುವ ಸ್ತ್ರೀಯರ ನಿಜ ಶಕ್ತಿಯನ್ನು ಲೋಕಕ್ಕೆ ತಿಳಿಸುವುದೇ ಈ ನೃತ್ಯದ ಉದ್ದೇಶ. ಈ ಸಂದೇಶ ಭರಿತ ನೃತ್ಯ ರೂಪಕವನ್ನು ನಿರ್ದೇಶಿಸಿರುವವರು ಸೋನಿಯಾ ಸೋನಿ ಅವರು. ಮೂಲತಃ ಅಟ್ಟಕ್ಕಲರಿ ಪದವೀಧರರಾಗಿರುವ ಇವರು ಭರತನಾಟ್ಯ, ಕಂಟೆಂಪರರಿ, ಹಿಪ್ ಹಾಪ್ ಇತ್ಯಾದಿ ನೃತ್ಯ ಶೈಲಿಯಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ದೇಶಿ ಹಾಗೂ ವಿದೇಶಿ ನೃತ್ಯ ತಂಡದ ಮಾರ್ಗದರ್ಶನದಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ.

ಇವರ ಕಲ್ಪನೆಯ ಕೂಸಾದ- “PURPOSE” ಮಾಯಾ ಏಂಜಲೋ ಅವರ “STILL I RISE” ಎಂಬ ಕವನದ ಮುಖ್ಯ ಅಂಶಗಳನ್ನು ಒಳಗೊಂಡಿದೆ. ಶೋಷಣೆ ಎನ್ನುವುದು ಈ ಸಮಾಜಕ್ಕೆ ಅಂಟಿಕೊಂಡಿರುವ ಭೂತ. ಆದರೆ ಬೇರೆ ಬೇರೆ ಕಾರಣಗಳಿಂದ ಈ ಶೋಷಣೆಯು ಬೆಳಕಿಗೆ ಬರದೇ ಅಲ್ಲೇ ಆರಿ ಹೋಗುತ್ತಿವೆ. ಇದು ಭ್ರಷ್ಟಾಚಾರದಂತಹ ಕೆಟ್ಟ ಪದ್ಧತಿಗೆ ಬುನಾದಿಯಾಗುತ್ತಿದ್ದು ಒಳ್ಳೆತನವು ಹಲವು ಬಾರಿ ದುರ್ಬಳಕೆಯಾಗುತ್ತಿದೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಈ ಸಮಾಜವು ಅನುಭವಿಸುತ್ತಿರುವ ಶೋಷಣೆಯನ್ನು ಬೆಳಕಿಗೆ ತಂದು, ಅದಕ್ಕೆ ತಕ್ಕ ಶಿಕ್ಷೆ ವಿಧಿಸಿ, ಒಳ್ಳೆತನದಲ್ಲಿ ನಡೆಯುವುದು ನಮ್ಮ ಕರ್ತವ್ಯ. ಈ ಬದಲಾವಣೆ ಅನ್ನುವುದು ಒಂದು ದಿನದಲ್ಲಿ ಆಗುವುದಿಲ್ಲ. ಆದರೆ ಹಂತ ಹಂತವಾಗಿ ನಡೆಯುವ ಈ ಪರಿವರ್ತನೆ ಶಾಶ್ವತವಾದದ್ದು.

ಪ್ರಸ್ತುತ ನೃತ್ಯವು “ಅಟ್ಟಕ್ಕಲರಿ ಸೆಂಟರ್ ಫಾರ್ ಮೂಮೆಂಟ್ ಆರ್ಟ್ಸ್” ಸಂಸ್ಥೆಯ ಸಹಕಾರದಲ್ಲಿ ಮೂಡಿ ಬಂದಿದ್ದು ಇದೇ ತಿಂಗಳ 24ರಂದು ಸಂಜೆ 7:30 ಕ್ಕೆ “ಬೇರು” ನೃತ್ಯ ಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ. ಟಿಕೆಟ್ ಬುಕ್ ಮಾಡಲು ಈ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ :https://www.meraevents.com/event/purpose?ucode=organizer

ದಿನಾಂಕ ಮತ್ತು ಸಮಯ: Sunday, 24th Jan 2021 | 07:30 PM to 08:30 PM IST

ವಿಳಾಸ:
Beru Art Space, 3rd Main Road, 14th Cross, Vinayaka Nagar, Ramamurthy Nagar, Hoysala Nagar, Bengaluru, Karnataka, India

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮನಪಾ ಚುನಾವಣೆ: ಮಂದಗತಿಯ ಮತದಾನ

Upayuktha

ಪಾವಂಜೆ ಮೇಳ: ಹೀಗೊಂದು ಜಿಜ್ಞಾಸೆ

Upayuktha

ಮಂಗಳೂರಿನಲ್ಲಿ ಡಾ. ಎಸ್‌ಪಿಬಿ ಲೈವ್ ಕನ್ಸರ್ಟ್‌ ನಾಳೆ (ಜ.19)

Upayuktha