ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‍ಗೆ ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ

ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‍ಗೆ ಮಂಗಳವಾರ ಇದೇ ಮೊದಲ ಬಾರಿಗೆ ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ ಆಗಮಿಸಿತು. ಅಂಬಿಕಾ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಶ್ರೀದೇವರನ್ನು ಬರಮಾಡಿಕೊಂಡರು. ಸುಮಾರು 10.45 ಗಂಟೆಗೆ ಕ್ಯಾಂಪಸ್‍ಗೆ ಆಗಮಿಸಿದ ದೇವರಿಗೆ ನೃತ್ಯ ಭಜನೆ, ಯಕ್ಷಗಾನವೇ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವೇದ ಮಂತ್ರಘೋಷ ಸಮೇತ ಪೂರ್ಣ ಕುಂಭ ಸ್ವಾಗತ ಕೋರಲಾಯಿತು.

ದೇವರ ಸವಾರಿಯ ಆಗಮನದ ಹಿನ್ನೆಲೆಯಲ್ಲಿ ಇಡಿಯ ಕ್ಯಾಂಪಸ್ ಅನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿವಿಧ ಅಂಬಿಕಾ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರುಗಳು, ಉಪನ್ಯಾಸಕ, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶ್ರೀ ದೇವರನ್ನು ಸಂಭ್ರಮದಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ನಟ್ಟೋಜ ಶಿವಾನಂದ ರಾವ್, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ನಟ್ಟೋಜ ಕುಟುಂಬಸ್ಥರು, ವಿದ್ಯಾರ್ಥಿಗಳ ಹೆತ್ತವರು, ಸಮಾಜದ ಗಣ್ಯರು ಉಪಸ್ಥಿತರಿದ್ದರು.

‘ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ ನಮ್ಮ ಕ್ಯಾಂಪಸ್‍ಗೆ ಆಗಮಿಸಿರುವುದು ನಮಗೆಲ್ಲ ಅಪಾರ ಖುಷಿ ಮತ್ತು ಧನ್ಯತೆ ತಂದಿದೆ. ನಮ್ಮ ವಿದ್ಯಾಲಯದ ಮಣ್ಣು ಪವಿತ್ರವೆನಿಸಿದೆ. ದೇವರ ಪೂಜೆಯ ಅವಕಾಶ ನಮ್ಮ ಕ್ಯಾಂಪಸ್‍ನಲ್ಲಿ ದೊರಕುವಂತಾದದ್ದು ನಮ್ಮೆಲ್ಲರ ಪುಣ್ಯವೇ ಸರಿ’ ಎಂಬುದು ಸಂಸ್ಥೆಯ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಗಾಳಿಯಿಂದ ಹರಡುವ ಸಾಂಕ್ರಾಮಿಕ ರೋಗ ತಡೆಗೆ ಕರವಸ್ತ್ರ ಬಳಸಿ: ಡಾ. ನಾರಾಯಣ ಪ್ರದೀಪ

Upayuktha

ಕವನ ಸಂಕಲನ ‘ಯಾನ’ ಬಿಡುಗಡೆ

Upayuktha

ಹಿಂದಿ ಜಾಗತಿಕ ಭಾಷೆಯಾಗಿ ಹೊರಹೊಮ್ಮಿದೆ: ಡಾ. ಮಂಗಲ್‌ ದೇಸಾಯಿ

Upayuktha