ಮಂಗಳೂರು: ಸುರತ್ಕಲ್ ಗುಡ್ಡಕೊಪ್ಳ ಕಡಲ ಕಿನಾರೆಗೆ ಪುತ್ತೂರು ಕಡೆಯಿಂದ ವಿಹಾರಕ್ಕೆ ಬಂದ ಯುವಕರು ಸ್ಥಳೀಯ ಮೊಗವೀರರ ಎಚ್ಚರಿಕೆಗೂ ಗಮನ ಕೊಡದೆ ಕಡಲಿಗಿಳಿದು ಅಲೆಯಲ್ಲಿ ಕೊಚ್ಚಿ ಹೋಗಲಾರಂಭಿಸಿದಾಗ ಸ್ಥಳೀಯ ಮೀನಾಗರ ಯುವಕರು ಅವರನ್ನು ರಕ್ಷಿಸಿ ಪಾರು ಮಾಡಿದ್ದಾರೆ.
ಇಂದು ಅಪರಾಹ್ನ ಈ ಘಟನೆ ನಡೆದಿದ್ದು, ಪುತ್ತೂರು ಕಡೆಯಿಂದ ಬಂದಿದ್ದ ಕೆಲವು ಯುವಕರು ಸ್ಥಳೀಯ ಮೊಗವೀರರ ಎಚ್ಚರಿಕೆಯನ್ನು ಲೆಕ್ಕಿಸದೆ ಕಡಲಿಗಿಳಿದರು. ಕೆಲವೇ ನಿಮಿಷಗಳಲ್ಲಿ ಬಂದ ಬೃಹತ್ ಅಲೆಯೊಂದು ಒಬ್ಬ ಯುವಕನನ್ನು ಕಡಲಿನ ಮಧ್ಯಕ್ಕೆ ಸೆಳೆದೊಯ್ದಿದೆ. ಕಡಲ ಮಧ್ಯೆ ಮುಳುಗಿದ್ದ ಡ್ರೆಜ್ಜರ್ ಅನ್ನು ಹಿಡಿದುಕೊಂಡು ಸಹಾಯಕ್ಕಾಗಿ ಅಂಗಲಾಚಿದ ಯುವಕನನ್ನು ಮೀನುಗಾರ ಸಾಹಸಿ ಯುವಕರು ಎಳದು ದಡಕ್ಕೆ ತಂದು ರಕ್ಷಿಸಿದ್ದಾರೆ.
ಕಡಲ ಮಧ್ಯೆ ಸಿಕ್ಕಿಬಿದ್ದ ಯುವಕರ ರಕ್ಷಣೆಗಾಗಿ ಕರಾವಳಿ ರಕ್ಷಣಾ ಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದರೂ ಅವರಿಗೆ ಯುವಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಆಗ ಮೊಗವೀರ ಯುವಕರಾದ ಯಾದವ ಶ್ರೀಯಾನ್ ಮತ್ತು ಸುಮನ್ ಅವರು ಈಜುತ್ತಾ ಡ್ರಜರ್ ಕಡೆಗೆ ಹೋಗಿ ಯುವಕನನ್ನು ಹಿಡಿದು ದಡಕ್ಕೆ ತಲುಪಿಸಿ ಬದುಕಿಸಿ ಸಾಹಸ ಮೆರೆದಿದ್ದಾರೆ.
ಮೊಗವೀರ ಯುವಕರ ಸಾಹಸಕ್ಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.