ಲೇಖನಗಳು

ರಾಮ ನವಮಿ

ಭಗವಂತನು ಲೀಲಾ ವಿಗ್ರಹಧಾರಿಯಾಗಿ ಶ್ರೀರಾಮ ನಾಮದಿಂದ ಭೂಮಿಯಲ್ಲಿ ಅವತರಿಸಿದ ದಿನವನ್ನು ರಾಮ ನವಮಿ ಎಂದು ಆಚರಿಸುತ್ತೇವೆ. ನಮ್ಮ ಹಾಗೆ ಶರೀರ ಅವಯವಗಳು, ಹುಟ್ಟು ಬಾಲ್ಯ ಕೌಮಾರಾದಿ ಅವಸ್ಥೆಗಳು, ಮರಣ ಈ ಎಲ್ಲವನ್ನು ರಾಮಾದಿ ಅವತಾರ ರೂಪಗಳಲ್ಲಿ ಕಂಡವರಿಗೆ ಭಗವಂತನೂ ಕೂಡ ನಮ್ಮಂತೆ ಎಂಬ ಭಾವ ಬರುವುದು ಸಹಜ. ಆದುದರಿಂದಲೇ ಮನುಷ್ಯನಾಗಿದ್ದವ ದೇವರ ಮಟ್ಟಕ್ಕೆ ಬೆಳೆದ ಶ್ರೀರಾಮ ಎಂದು ಹೇಳುತ್ತಾರೆ. ಆದರೆ ಇದು ಸರಿಯಲ್ಲ. ದೇವರೇ ಆದ ರಾಮ ಮನುಷ್ಯನಾಗಿ ನಟಿಸಿ ದೇವರೇ ಆಗಿ ಉಳಿದ. ‘ಪೂರ್ಣಮದಃ ಪೂರ್ಣಮಿದಂ ‘ . ಹಾಗಾಗಿಯೇ ರಾಮನು ಅಮೃತ. ಯಾವ ರೀತಿಯ ನಾಶವೂ ಅವನಿಗಿಲ್ಲ. ವಸ್ತುತಃ ವಾಯು ದೇವರನ್ನು ಅಮೃತ ಎಂದು ಉಪನಿಷತ್ತು ಹೇಳುತ್ತದೆ. ಅವರ ಜ್ಞಾನ ಯಾವತ್ತೂ ನಾಶವಾಗುವುದಿಲ್ಲ ಎಂಬ ಕಾರಣದಿಂದ. ಅದರಂತೆ ಭಗವಂತನ ಜ್ಞಾನಕ್ಕೂ ನಾಶವಿಲ್ಲ. ಶರೀರಕ್ಕೂ ನಾಶವಿಲ್ಲ. ಅವತಾರ ರೂಪಗಳಿಗೂ ನಾಶವಿಲ್ಲ. ಪರಾಧೀನನೂ ಅಲ್ಲ, ಅಪೂರ್ಣನೂ ಅಲ್ಲ. ಹೀಗಾಗಿ ಶ್ರೀರಾಮನು ಮುಖ್ಯವಾಗಿ ‘ಅಮೃತ’ ಎಂದು ರಾಮಸಂಹಿತೆ ನಿರೂಪಿಸಿದೆ.
ಅತಿರೋಹಿತವಿಜ್ಞಾನಾತ್ ವಾಯುರಪಿ ಅಮೃತ:ಸ್ಮೃತ: ಮುಖ್ಯಾಮೃತಃ ಸ್ವಯಂ ರಾಮಃ ಪರಮಾತ್ಮಾ ಸನಾತನಃ “ಎಂದು . ಹೀಗಾಗಿ ಮನೆ ಮನೆಗಳಲ್ಲಿ ಮಠ ಮಠಗಳಲ್ಲಿ ಶೀರಾಮ ದೇವರಿಗೆ ಈ ದಿನ ಪಂಚಾಮೃತ ಅಭಿಷೇಕ ನಡೆಯುತ್ತದೆ. ನಿತ್ಯ ಅಪ್ರಾಕೃತ ಅಮೃತನಿಗೆ ಪ್ರಾಕೃತವಾದ ಈ ಪಂಚಾಮೃತ ಅಭಿಷೇಕದ ಸಮಯದಲ್ಲಿ ಭಗವಂತನ ಈ ಅಮೃತತ್ವದ ಚಿಂತನೆ ನಡೆಸೋಣ. ಜಯ ಶ್ರೀ ರಾಮ.

ಬರಹ: ನಾರಾಯಣ ರೈ ಕುಕ್ಕುವಳ್ಳಿ

Related posts

ಕೋವಿಡ್-19 ಹಾಗೂ 19 ಮಿಥ್ಯಗಳು

Upayuktha

ಕೊಡಗಿನ ಸಾವಿನ ಮನೆಯಲ್ಲಿ ಸುಂದರ ಕತೆ ಕಟ್ಟಿದ ನೀಚರು.‌..!

Upayuktha News Network

ಕ್ಷಯರೋಗ ನಿರ್ಮೂಲನೆಗೆ ಸಮಯ ಮೀರುತ್ತಿದೆ, ಇರಲಿ ಜಾಗೃತಿ

Upayuktha