ಅಪರಾಧ ನಗರ ಸ್ಥಳೀಯ

ಕಾಲೇಜಿನಲ್ಲಿ ರ‍್ಯಾಗಿಂಗ್: ಕೇರಳ ಮೂಲದ 9 ವಿದ್ಯಾರ್ಥಿಗಳ ಬಂಧನ

ಮಂಗಳೂರು: ಮಂಗಳೂರಿನ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ರ‍್ಯಾಗಿಂಗ್ ಘಟನೆ ನಡೆದಿದ್ದು, ಈ ಕೃತ್ಯ ಎಸಗಿದ 9 ಮಂದಿ ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ ಕಾಲೇಜಿನ ಮೊದಲ ವರ್ಷದ ಬಿ- ಫಾರ್ಮಸಿ ಕಲಿಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ರ‍್ಯಾಗಿಂಗ್ ಗೆ ಒಳಗಾಗಿದ್ದ. ಅದೇ ಕಾಲೇಜಿನ ದ್ವಿತೀಯ ಮತ್ತು ತೃತೀಯ ವರ್ಷದ ಬಿ.ಫಾರ್ಮ್ ವಿದ್ಯಾರ್ಥಿಗಳು ರಾಗಿಂಗ್ ನಡೆಸಿದ್ದಾರೆ. ಆರೋಪಿಗಳು ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.

ಕಿರಿಯ ವಿದ್ಯಾರ್ಥಿಗೆ ತಲೆಕೂದಲು ಮತ್ತು ಮೀಸೆ ತೆಗೆಸಿ ಬರುವಂತೆ ರ‍್ಯಾಗಿಂಗ್ ಮಾಡಿದ್ದು ಓರ್ವ ಆತನ ಕೆನ್ನೆಗೆ ಬಾರಿಸಿದ್ದಾನೆ.

ರಾಗಿಂಗ್ ಗೆ ಒಳಗಾಗಿರುವ ವಿದ್ಯಾರ್ಥಿ ಸುಮಾರು 2 ಲಕ್ಷ ರೂಪಾಯಿ ಶುಲ್ಕ ಕಟ್ಟಿ ಕಾಲೇಜಿಗೆ ದಾಖಲಾಗಿದ್ದ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಯನ್ನು ಪಿಜಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿ ಪೋಲಿಸರಿಗೆ ದೂರು ನೀಡಿದ್ದು, ಪೊಲೀಸರು ತಕ್ಷಣವೇ ರ‍್ಯಾಗಿಂಗ್‌ ಮಾಡಿದ 9 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ಮಂಗಳೂರು ಕಮಿಷನರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ‌.

ರ‍್ಯಾಗಿಂಗ್‌ ಮಾಡುವ ವಿದ್ಯಾರ್ಥಿಗಳಿಗೆ ವಾರ್ನಿಂಗ್ ಮಾಡಿದ ಕಮಿಷನರ್

ಮಂಗಳೂರಿನ ಯಾವುದೇ ಕಾಲೇಜುಗಳಲ್ಲಿ ಇನ್ನು‌ ಮುಂದೆ ರ‍್ಯಾಗಿಂಗ್‌ ಆಗಬಾರದು. ಈಗಾಗಲೇ ರ‍್ಯಾಗಿಂಗ್‌ ಮಾಡಿದ 9 ವಿದ್ಯಾರ್ಥಿಗಳನ್ನು ಬಂಧಿಸಿದ್ದೇವೆ. ಕಾಲೇಜಿನಲ್ಲಿ ರ‍್ಯಾಗಿಂಗ್‌ ಮಾಡಿ ಇನ್ನೊಬ್ಬ ವಿದ್ಯಾರ್ಥಿಯ ಜೀವಕ್ಕೆ ಅಪಾಯ ತರಬೇಡಿ. ಇದರ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಕೂಡ ಎಚ್ಚರಿಕೆ ವಹಿಸಬೇಕು. ಉಡಾಫೆಯ ಉತ್ತರವನ್ನು ಕೊಡಬೇಡಿ ಎಂದು ಕಾಲೇಜ್ ಆಡಳಿತ ಮಂಡಳಿಗೆ ಕಮಿಷನರ್ ಎಚ್ಚರಿಕೆ ನೀಡಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮುಳ್ಳೇರಿಯಾ: ನಿವೃತ್ತ ಶಿಕ್ಷಕರಿಗೆ ಸನ್ಮಾನ

Upayuktha

‘ಅನುವಾದ ಕ್ಷೇತ್ರದ ಉದ್ಯೋಗಾವಕಾಶಗಳ ಕಡಗೆ ಗಮನ ಅಗತ್ಯ’

Upayuktha

ಸಿರಿ ತೋಟಗಾರಿಕೆ ತರಬೇತಿ ಕಾರ್ಯಕ್ರಮ

Upayuktha