ಚಂದನವನ- ಸ್ಯಾಂಡಲ್‌ವುಡ್

ರಾಘವೇಂದ್ರ ರಾಜ್‌ಕುಮಾರ್ ಮಗ, ಖ್ಯಾತ ನಿರ್ದೇಶಕ ರಾಜಮೌಳಿ ಯವರನ್ನು ಭೇಟಿ

ಬೆಂಗಳೂರು : ರಾಜ್‌ಕುಮಾರ್ ರವರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್ ಕುಮಾರ್, ಖ್ಯಾತ ನಿರ್ದೇಶಕ ರಾಜಮೌಳಿಯವರನ್ನು ಭೇಟಿ ಮಾಡಿದ್ದಾರೆ.


‘ಯುವ ರಣಧೀರ ಕಂಠೀರವ’ ಸಿನಿಮಾದಲ್ಲಿ ನಟಿಸಿರುವ ರಾಜ್ ಕುಮಾರ್ ಮೊಮ್ಮಗ ಯುವರಾಜ್ ಕುಮಾರ್, ಅವರ ಸಿನಿಮಾದ ಟೀಸರ್ ಅನ್ನು ರಾಜಮೌಳಿ ಅವರಿಗೆ ತೋರಿಸಿದ್ದಾರೆ. ಟೀಸರ್ ನೋಡಿದ ರಾಜಮೌಳಿ ಅವರು, ಯುವರಾಜ್ ಕುಮಾರ್‌ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಅವರು ಆರ್‌ಆರ್‌ಆರ್ ಸಿನಿಮಾದ ಸೆಟ್‌ನಲ್ಲಿ ರಾಜಮೌಳಿ ಯನ್ನು ಯುವರಾಜ್ ಕುಮಾರ್ ಭೇಟಿಯಾಗಿದ್ದಾರೆ. ಈ ಸಮಯದಲ್ಲಿ ಯುವ ರಣಧೀರ ಕಂಠೀರವ ಸಿನಿಮಾದ ನಿರ್ದೇಶಕ ಪುನೀತ್ ರುದ್ರನಾಗ್ ಸಹ ಜೊತೆಯಲ್ಲಿ ಇದ್ದಾರೆ.

ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಅದ್ಭುತವಾದ ಫೈಟ್ ದೃಶ್ಯವುಳ್ಳ ಟೀಸರ್ ಸಖತ್ ಗಮನ ಸೆಳೆದಿದೆ.

ಈ ಸಿನಿಮಾ ಯುವರಾಜ್‌ ಕುಮಾರ್ ಅವರ ಮೊದಲ ಸಿನಿಮಾ ಆಗಿದ್ದು, ಅವರ ಅಣ್ಣ ವಿನಯ್‌ರಾಜ್‌ಕುಮಾರ್ ಅವರು ನಾಯಕನಾಗಿ ನಟಿಸಿರುವ ಮೂರು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿವೆ.

Related posts

ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಿದ ಸೂಪರ್ ಸ್ಟಾರ್ ರಜನಿಕಾಂತ್

Harshitha Harish

ಮೇಘನಾ ರಾಜ್ ಮನೆಯಲ್ಲಿ ಮಗುವಿನ ತೊಟ್ಟಿಲು ಶಾಸ್ತ್ರದ ಕಾರ್ಯಕ್ರಮ

Harshitha Harish

ಸಿಂಹದ ಮರಿ ದತ್ತು ಪಡೆದ ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ

Harshitha Harish