ಕ್ಯಾಂಪಸ್ ಸುದ್ದಿ

ಮಳೆಗಾಲದಲ್ಲೊಂದು ಬಣ್ಣ ಬಣ್ಣದ ಕೊಡೆಗಳ ಚಿತ್ತಾರ

(ಚಿತ್ರ ಕೃಪೆ: ಶಟರ್‌ಸ್ಟಾಕ್.ಕಾಂ)

ಆಹಾ! ಮಳೆಗಾಲ ಶುರುವಾದರೆ ಸಾಕು ಪ್ರತಿಯೊಬ್ಬರ ಕೈಗಳಲ್ಲಿ ಬಣ್ಣ ಬಣ್ಣದ ಕೊಡೆಗಳನ್ನು ಹಿಡಿದುಕೊಂಡು ಹೋಗುವ ಚಿತ್ತಾರಗಳನ್ನು ನೋಡಬಹುದು. ಒಬ್ಬರ ಕೊಡೆಯ ಮೇಲೆ ಒಬ್ಬರು ಕಣ್ಣು ಹಾಯಿಸಿಕೊಂಡು ಹೋಗುವುದು, ಆಮೇಲೆ ಅದೇ ಛತ್ರಿ ಬೇಕು ಅಂತ ಮಾರುಕಟ್ಟೆಗಳಿಗೆ ಹೋಗಿ ಖರೀದಿಸುವ ಜನರು, ಇನ್ನೊಂದೆಡೆ ತನ್ನ ಕೈ ಅಲ್ಲಿ ಕೊಡೆ ಇದ್ದರು, ತನ್ನ ಕೊಡೆ ಒದ್ದೆಯಾಗುವುದು ಬೇಡ ಅಂತ ನಮ್ಮ ಜೊತೆಗೆ ಇರುವವರ ಕೊಡೆಯ ಒಳಗಡೆ ಹೋಗಿ ಸೇರಿಕೊಂಡು ಮನೆಗೆ ತೆರಳುವ ಎಷ್ಟೋ ಜನರಿದ್ದಾರೆ. ತನ್ನ ಕೊಡೆ ಒದ್ದೆಯಾಗುವುದು ಬೇಡ ಅಂತ ಜಾಗ್ರತೆಯಿಂದ ಮರಳಿ ಮನೆಗೆ ಕೊಡೆಯನ್ನು ಹಾಗೇ ಹಿಡಿದುಕೊಂಡು ಹೋಗುವ ಜನರು ಇದ್ದಾರೆ. ಹೆಚ್ಚಾಗಿ ಬಣ್ಣ ಬಣ್ಣದ ಕೊಡೆಗಳು ಹುಡುಗಿಯರ ಕೈಗಳಲ್ಲಿ ಇರುವುದು. ಹುಡುಗರು ಅಂತಹ ಬಣ್ಣ ಬಣ್ಣದ ಕೊಡೆಗಳನ್ನು ಹಿಡಿದುಕೊಂಡು ಹೋಗುವುದು ಕಡಿಮೆ.

ಏನೋ ಒದ್ದೆಯಾದರೆ ಮನೆಯಲ್ಲಿ ಬೈಗುಳ ಸಿಗಬಹುದು ಎನ್ನುವ ಕಾರಣಕ್ಕೆ ಒಂದಿಷ್ಟು ಹುಡುಗರು ಕೊಡೆಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಅದರಲ್ಲೂ ಕೆಲವು ಹುಡುಗರು ಎಲ್ಲಿಗಾದರೂ ಹೋಗಬೇಕಿದ್ದಾರೆ ಕೊಡೆಗಳನ್ನು ಹಿಡಿದುಕೊಂಡು ಹೋಗುವುದಿಲ್ಲ ಒದ್ದೆಯಾದರೂ ಅಡ್ಡಿಯಿಲ್ಲ ಎಂದು ಕೊಡೆಗಳನ್ನು ಮನೆಯಲ್ಲಿಯೆ ಇಟ್ಟು ಬರುತ್ತಾರೆ. ಹುಡುಗಿಯಾರಿಗೆ ಆದರೆ ಬಣ್ಣ ಬಣ್ಣದ ಕಲರ್ ಫುಲ್ ಛತ್ರಿಗಳು, ಅದರಲ್ಲೂ ಡಿಸೈನ್ ಇರುವಂತಹ ಕೊಡೆಗಳನ್ನೇ ಖರೀದಿಸುವುದು.

ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಮುಗಿದ ಮೇಲೆ ಮಳೆಗಾಲ ಶುರುವಾಗುತ್ತದೆ ಶಾಲಾ – ಕಾಲೇಜುಗಳಿಗೆ ಹೊರಡುವಾಗ ಜೋರು ಮಳೆ ಬರಲು ಆರಂಭವಾಗುತ್ತದೆ. ಆಮೇಲೆ ಸಂಜೆಯ ಸಮಯಕ್ಕೆ ಶಾಲಾ ಕಾಲೇಜ್ ನಿಂದ ತೆರಳುವಾಗ ಮತ್ತು ಶುರುವಾಗುತ್ತದೆ. ಹೀಗೆ ಮಳೆಗಾಲದ ಸಮಯಕ್ಕೆ ಎಲ್ಲ ಮಕ್ಕಳಿಗೂ ಶಾಲಾ ಕಾಲೇಜುಗಳಿಗೆ ಹೋಗಲು ಆ ಮಳೆಗೆ ಒದ್ದೆಯಾಗಿಕೊಂಡು ಹೋಗುವುದು ಏನೋ ಒಂಥರಾ ಕಿರಿಕಿರಿ ಕೂಡ ಅನಿಸುತ್ತದೆ. ಬ್ಯಾಗ್ ಅಲ್ಲಿರುವ ಪುಸ್ತಕಗಳು ಒದ್ದೆಯಾಗುತ್ತದೆ ಎನ್ನುವ ಭಯ ಒಂದು ಕಡೆ ಇನ್ನೊಂದು ಕಡೆ ನಾವು ಒದ್ದೆಯಾದರೆ ಶೀತ, ಜ್ವರ ಬಂದು ಬಿಡುತ್ತದೆ ಎನ್ನುವ ಭಯ ಅದರಲ್ಲೂ ಅದನ್ನು ಲೆಕ್ಕ ಹಾಕದೆ ಶಾಲಾ ಕಾಲೇಜ್ ಗೆ ಮಕ್ಕಳು ಹೋಗುವುದನ್ನು ಬಿಡುವುದಿಲ್ಲ. ಒದ್ದೆಯಾದರು ಬೇಗ ಶಾಲೆಗಳಿಗೆ ತಲುಪಿ ಬಿಡುತ್ತಾರೆ.

ಆಮೇಲೆ ಸಂಜೆಯ ಸಮಯಕ್ಕೆಸರಿಯಾಗಿ ಮನೆಗೆ ತೆರಳುವ ಮಕ್ಕಳಿದ್ದಾರೆ. ಇನ್ನು ಒಂದಿಷ್ಟು ಮಕ್ಕಳು ಕೊಡೆ ಹಿಡಿದುಕೊಂಡು ಹೋಗದೆ ಯಾವುದೊ ಒಂದು ಅಂಗಡಿಯ ಎದುರು ನಿಂತು ನಮ್ಮ ಪರಿಚಯದವರು ಬಂದರೆ ಅವರ ಜೊತೆಗೆ ಹೋಗಬಹುದು ಎಂದು ಅಲ್ಲೇ ನಿಲ್ಲುವ ಮಕ್ಕಳು ಇದ್ದಾರೆ. ಕೆಲವೊಂದು ಮನೆಗಳಿಗೆ ಶಾಲೆಗಳು ಹತ್ತಿರ ಇರುತ್ತದೆ ಹಾಗೇ ಅವರು ಶಾಲೆಗೆ ಹೊರಡುವಾಗ ಮಳೆ ಬರುತ್ತೀರದಿದ್ದರೆ ಕೊಡೆ ಹಿಡಿದುಕೊಂಡು ಹೋಗುವುದಿಲ್ಲ ಆಮೇಲೆ ಶಾಲೆ ಬಿಡುವ ಸಮಯಕ್ಕೆ ಮಕ್ಕಳ ಮನೆಯವರು ಹೋಗಿ ಅವರನ್ನು ಕರೆದುಕೊಂಡು ಬರುವುದು. ಅಂತೂ ಮನೆಯವರು ಮಕ್ಕಳನ್ನು ಒದ್ದೆಯಾಗಲು ಬಿಡುವುದಿಲ್ಲ. ಆದರೆ ಮಕ್ಕಳು ಮಳೆಗೆ ಒದ್ದೆಯಾಗಿಕೊಂಡು ಕೆಸರಿನಲ್ಲಿ ಆಟ ಆಡಿಕೊಂಡು ಮನೆಗೆ ಬರುವುದು. ಇದೆಲ್ಲ ಮಕ್ಕಳಿಗೆ ಮಜಾ ಆಗುತ್ತದೆ. ಮಳೆಗಾಲದಲ್ಲಿ ಮನೆಯವರಿಗೆ ಬೇರೆಯೇ ಚಿಂತೆ ಇದ್ದರೆ, ಮಕ್ಕಳಿಗೆ ಇಲ್ಲಿ ನೀರಿನ ಜೊತೆ ಆಡುವುದೇ ಒಂಥರ ಖುಷಿಯನ್ನು ನೀಡುತ್ತದೆ.

-ರಸಿಕ ಮುರುಳ್ಯ
ದ್ವಿತೀಯ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು ನೆಹರು ನಗರ, ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಪರಸ್ಪರ ನೆರವಾಗುವ ಮನೋಭಾವ ಅಭಿವೃದ್ಧಿಗೆ ಪೂರಕ: ಡಾ. ಶಾಲಿನಿ ರಜನೀಶ್

Upayuktha

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ

Upayuktha

ಫಿಲೋಮಿನಾ ಸ್ನಾತಕೋತ್ತರ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ

Upayuktha

Leave a Comment