ನಗರ ಪ್ರಮುಖ ಸ್ಥಳೀಯ

ಮಂಗಳೂರು ಸುತ್ತಮುತ್ತ ಮಳೆಯಿಂದ ಅಪಾರ ಹಾನಿ, ಭೂಕುಸಿತ, ರಸ್ತೆ ಕಡಿತ

ಮಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವೆಡೆ ಪ್ರವಾಹ, ಭೂಕುಸಿತಗಳು ಉಂಟಾಗಿವೆ.

ಮಂಗಳೂರಿನ ಬಜಪೆ ಸಮೀಪ ಆದ್ಯಪಾಡಿ-ಕೆಂಜಾರ್‌ ರಸ್ತೆಯಲ್ಲಿ ಭಾರೀ ಗುಡ್ಡವೊಂದು ಕುಸಿದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ನೀರುಮಾರ್ಗ ಪ್ರದೇಶದಲ್ಲಿ ರಸ್ತೆಯೇ ಕೊಚ್ಚಿಹೋಗಿದೆ. ಕಾಂಕ್ರೀಟ್ ರಸ್ತೆ ಮತ್ತು ಡಾಂಬರು ರಸ್ತೆ ಸಂಧಿಸುವ ಜಾಗದಲ್ಲಿ ಸುಮಾರು 5 ಮೀಟರ್ ಅಗಲಕ್ಕೆ ರಸ್ತೆ ಕೊಚ್ಚಿಹೋಗಿದೆ.

ನಗರದ ಕದ್ರಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಎಂಬವರ ಮನೆ ಕುಸಿದಿದೆ. ಎನ್‌ಎಂಪಿಟಿಯಲ್ಲಿ ಒಂದು ಬೋಟು ಮುಳುಗಡೆಯಾದ ಮಾಹಿತಿ ಬಂದಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ 51ನೇ ಅಳಪೆ ಉತ್ತರ ವಾರ್ಡಿನ ಸರಿಪಲ್ಲ- ಕನ್ನಗುಡ್ಡೆ ಪ್ರದೇಶದಲ್ಲಿ ದಾಮೋದರ್ ಎಂಬುವರ ವಾಸ್ತವ್ಯದ ಮನೆ ಭಾರೀ ಮಳೆಗೆ ಶನಿವಾರ ರಾತ್ರಿ ಸಂಪೂರ್ಣವಾಗಿ ಧರೆಶಾಯಿಯಾಗಿದೆ. ಮನೆಯ ಹಿಂದಿನ ಗುಡ್ಡೆ ಕುಸಿದ್ದು ಮನೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಮ.ನ.ಪಾ ಮಹಾಪೌರರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬ ವರ್ಗಕ್ಕೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆಹಾನಿ: ಇನ್ನಷ್ಟು ಚಿತ್ರಗಳು

ಎಲ್ಲೆಡೆ ಎಡೆಬಿಡದೆ ಮಳೆ ಸುರಿಯುತ್ತಿದ್ದು ಉಡುಪಿ-ಮಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳು ಮುಂದೂಡಲಾಗಿದೆ. ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ. ಪಿ.ಎಲ್. ಧರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆ, ಮಳೆ, ಮಳೆ…. ತೊಯ್ದು ತೊಪ್ಪೆಯಾದ ಕರಾವಳಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಗೃಹರಕ್ಷಕರಿಗೆ ಮೂಲ ಅಗ್ನಿಶಮನ, ಪ್ರಥಮ ಚಿಕಿತ್ಸೆ ತರಬೇತಿ

Upayuktha

ಕನ್ನೆಪ್ಪಾಡಿ ಶ್ರೀಮಹಿಷಾಂದಯ ಕೊರಗಜ್ಜ ದೇವಸ್ಥಾನದಲ್ಲಿ ಪುದ್ವಾರ್ ಕಾರ್ಯಕ್ರಮ

Upayuktha

ಕೊರೊನಾ ತಡೆ: ಸಂಚಾರ ನಿರ್ಬಂಧ ಪ್ರಶ್ನಿಸಿ ಪೊಲೀಸರಿಗೆ ಬೆದರಿಕೆ ಹಾಕಿದ ಪೆರ್ಲದ ವ್ಯಕ್ತಿ ಬಂಧನ

Upayuktha

Leave a Comment