ನಗರ ಸ್ಥಳೀಯ

‘ರಾಜಕುಮಾರ್- ಪಂಚಪದಿ’: ಕೊಳದ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿಯವರಿಂದ ಲೋಕಾರ್ಪಣೆ

ಬೆಂಗಳೂರು: ವರನಟ ಡಾ.ರಾಜಕುಮಾರ್ ಸಾಧನಾ-ಸಂಪತ್ತನ್ನು ಮನದುಂಬಿಸಿಕೊಡುವ ಮಂಜುನಾಥ್ ಹಾಲುವಾಗಿಲು ಅವರ ‘ರಾಜಕುಮಾರ್- ಪಂಚಪದಿ’ ಕೃತಿಯನ್ನು ನಗರದಲ್ಲಿ ಇಂದು ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ ಅವರು ಜಲಕಂಠೇಶ್ವರ ಸನ್ನಿಧಿಯಲ್ಲಿ ಲೋಕಾರ್ಪಣೆಗೊಳಿಸಿದರು.

ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಅಣ್ಣಾವ್ರು ನಟಿಸಿರುವ 209 ಚಿತ್ರಗಳ ಕಥಾ ಸಾರಾಂಶವನ್ನು ಅವರ ನಾಮಧೇಯಕ್ಕೆ ಹೊಂದಿಸಿ ಪಂಚಪದಿ ಪದ್ಯರೂಪದಲ್ಲಿ ಹೊರಬಂದಿರುವ ಈ ಪುಸ್ತಕ ಹೊಸರೀತಿಯ ಪ್ರಯೋಗ. ಡಾ.ರಾಜಕುಮಾರ್ ರಂಗಭೂಮಿ ನಂತರ ಚಲನಚಿತ್ರ ನಟನೆಯ ಆರಂಭದ ದಿನಗಳಲ್ಲಿ ಆಗಿನ ಮದ್ರಾಸ್ ನಲ್ಲಿ ಚಿತ್ರೀಕರಣದ ನಂತರ ಹೆಚ್ಚಾಗಿ ಆಶ್ರಯ ಪಡೆದಿದ್ದು ಈ ಕೊಳದ ಮಠದ ಆವರಣದಲ್ಲೆ ಎಂದು ಶ್ರೀ ನೆನೆಪಿಸಿಕೊಂಡರು.

ಏಕಕಾಲದಲ್ಲಿ ನಾಡಿನಾದ್ಯಂತ ನಾನಾ ಕ್ಷೇತ್ರದ 100 ಗಣ್ಯರು ಈ ಕೃತಿ ಬಿಡುಗಡೆಗೊಳಿಸಿ ವಿಶ್ವದಾಖಲೆಯಾಗಿ ಮಾಡಿದರು. ಸ್ನೇಹ ಬುಕ್ ಹೌಸ್‍ನ ಪರಶಿವಪ್ಪ ಈ ಹೊತ್ತಿಗೆ ಪ್ರಕಟಿಸಿದ್ದಾರೆ. ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಡಾ.ಗುಣವಂತ ಮಂಜು ಹಾಗೂ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ‘ಪಯಣ’ ಕಾರ್ಯಕ್ರಮ

Upayuktha

ಶ್ರವಣ ಸಾಧನಗಳ ಉಚಿತ ದುರಸ್ತಿ ಶಿಬಿರ ಜ.27ರಿಂದ 31ರ ವರೆಗೆ

Upayuktha

ಕಾರು‌ ಅಪಘಾತ: ಶಾಸಕ ರಾಮದಾಸ್ ಅಪಾಯದಿಂದ ಪಾರು

Upayuktha

Leave a Comment