ಅಪಘಾತ- ದುರಂತ ದೇಶ-ವಿದೇಶ

ದುರಂತ: ದೇವಸ್ಥಾನಕ್ಕೆ ಹೊರಟ 40ಜನರಿದ್ದ ದೋಣಿ ಮುಳುಗಡೆ;12ಮಂದಿ ನಾಪತ್ತೆ

ರಾಜಸ್ಥಾನ: ಕ್ಷೇತ್ರದ ದರ್ಶನಕ್ಕೆ ಹೊರಟಾಗ ನಲವತ್ತು ಮಂದಿ ಭಕ್ತರಿದ್ದ ದೋಣಿಯೊಂದು ಮುಳುಗಿ, ಇಪ್ಪತ್ತಕ್ಕೂ ಹೆಚ್ಚು ಮಂದಿ ಈಜಿ ದಡವನ್ನು ಸೇರಿದ್ದರು. ಮಕ್ಕಳು ಮಹಿಳೆಯರು ಸೇರಿ ಸುಮಾರು ಹನ್ನೆರಡು ಮಂದಿ ನಾಪತ್ತೆಯಾಗಿರುವ ಘಟನೆ ರಾಜಸ್ಥಾನದ ಚಂಬಲ್ ನದಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ರಾಜಸ್ಥಾನದ ಬುಂಡಿ ಜಿಲ್ಲೆಯ ದಿಬ್ರಿಯಲ್ಲಿರುವ ಕಮಲೇಶ್ವರ್ ಮಹಾದೇವ ದೇವಸ್ಥಾನಕ್ಕೆ ತೆರಳಲು  ಸುಮಾರು ನಲವತ್ತು ಮಂದಿ ಭಕ್ತರು ಬೆಳಿಗ್ಗೆ ಸುಮಾರು 8.45ರ ಸುಮಾರಿಗೆ ದೋಣಿ ಹತ್ತಿದರು.

ಈ ದೋಣಿಯಲ್ಲಿ ಹೆಚ್ಚು ಜನರಿದ್ದ ಪರಿಣಾಮವಾಗಿ  ದೋಣಿ ಸಾಗುತಿದ್ದ ವೇಳೆಯಲ್ಲಿ ನದಿಯ ಮಧ್ಯದಲ್ಲಿ ದೋಣಿ ಮುಳುಗಿದೆ ಈ ಪರಿಣಾಮ ದೋಣಿಯಲ್ಲಿದವರು ನೀರಿಗೆ ಬಿದ್ದಿದ್ದಾರೆ.

ಅವಘಡದಲ್ಲಿ ಸ್ಥಳೀಯರು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದರು. ಕೆಲವರು ಈಜಿಕೊಂಡು ದಡ ಸೇರಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಸೇರಿ ಸುಮಾರು ಹನ್ನೆರಡು ಮಂದಿ ನಾಪತ್ತೆಯಾಗಿದ್ದಾರೆ. ಎಂದು ಕೋಟಾ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಶರದ್ ಚೌಧರಿ ಹೇಳಿದ್ದಾರೆ.

ದೋಣಿಯಲ್ಲಿ ಮುಳುಗಿ ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಈ ಕಾರ್ಯಾಚರಣೆಯಲ್ಲಿ ಸ್ಥಳೀಯರು ಹಾಗೂ ಎಸ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನೂ ತಿಳಿಯಬೇಕಾಗಿದೆ.

Related posts

ಭಾರತಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್‌ ಮತ್ತು ಬಳಗ: ಪ್ರಧಾನಿ ಮೋದಿ ಅವರಿಂದ ಭವ್ಯ ಸ್ವಾಗತ

Upayuktha

ಕೊರೊನಾ ನಿಯಂತ್ರಣ ಕ್ರಮ: ಉನ್ನತ ಮಟ್ಟದ ಸಚಿವರ ಸಭೆ

Upayuktha

ವಿಜಯ ದಶಮಿಯ ಶುಭದಿನದಂದು ಭಾರತೀಯ ವಾಯುಪಡೆ ಬತ್ತಳಿಕೆ ಸೇರಿದ ರಫೇಲ್‌ ಯುದ್ಧ ವಿಮಾನ

Upayuktha

Leave a Comment

error: Copying Content is Prohibited !!