ರಾಜ್ಯ

ಕನ್ನಡ ಸಾಹಿತ್ಯ ಸೇವೆಗೆ ಗೌರವ: ಡಾ. ಮುರಲೀ ಮೋಹನ ಚೂಂತಾರು ಅವರಿಗೆ ರಾಜೀವ್ ಗಾಂಧಿ ವಿವಿ ಪುರಸ್ಕಾರ

ಮಂಗಳೂರು: ಖ್ಯಾತ ದಂತ ವೈದ್ಯರು, ವೈದ್ಯ ಸಾಹಿತಿ ಡಾ. ಮುರಲೀ ಮೋಹನ ಚೂಂತಾರು ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಿಡಿರುವ ಅನುಪಮ ಸೇವೆಯನ್ನು ಗುರುತಿಸಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಗೌರವಿಸಲು ತೀರ್ಮಾನಿಸಿದೆ.

ಈ ಸಂಬಂಧ ಡಾ. ಚೂಂತಾರು ಅವರಿಗೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್‌. ಸಚ್ಚಿದಾನಂದ ಅವರು ಪತ್ರ ಬರೆದು ಈ ಗೌರವವನ್ನು ಸ್ವೀಕರಿಸಲು ಆಗಮಿಸುವಂತೆ ಆಮಂತ್ರಿಸಿದ್ದಾರೆ.

ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿಯ ಧನ್ವಂತರಿ ಸಭಾಂಗಣದಲ್ಲಿ ನವೆಂಬರ್ 5ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಡಾ. ಬಿ.ಡಿ ಸತ್ಯನಾರಾಯಣ, ಡಾ. ಮಹಾಬಲ ರಾಜು (ವೈದ್ಯಕೀಯ); ಡಾ. ಸಂತೋಷ್ ಎನ್. ಬೆಳವಾಡಿ (ಆಯುರ್ವೇದ). ಡಾ. ಕೆ. ಶಿವಪ್ರಸಾದ (ಹೋಮಿಯೋಪತಿ, ಡಾ. ವೃಂದಾ ಬೆಡೇಕರ್‌ (ಯೋಗ ಮತ್ತು ನ್ಯಾಚುರೋಪತಿ) ಹಾಗೂ ಪ್ರೊ. ಕೃಷ್ಣಮೂರ್ತಿ (ಶುಶ್ರೂಷ) ಅವರನ್ನೂ ರಾಜೀವ್ ಗಾಂಧಿ ಆರೋಗ್ಯ ವಿವಿ ಸನ್ಮಾನಿಸಲಿದೆ.

ಡಾ|| ಮುರಲೀ ಮೋಹನ್ ಚೂಂತಾರು-ವ್ಯಕ್ತಿ ಪರಿಚಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಗ್ಯ ಸಮಸ್ಯೆ ; ಆಸ್ಪತ್ರೆ ದಾಖಲು

Harshitha Harish

ರಾಜ್ಯಸಭಾ ಚುನಾವಣೆ: ಕರ್ನಾಟಕ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಕಣಕ್ಕೆ

Upayuktha

ಜ್ಯೋತಿಷರತ್ನ ವಳಕ್ಕುಂಜ ವೆಂಕಟರಮಣ ಭಟ್ಟರಿಗೆ ವಿದ್ವತ್ ಪ್ರಶಸ್ತಿ

Upayuktha News Network

Leave a Comment