ದೇಶ-ವಿದೇಶ

ಅಮಾನತುಗೊಂಡ ಸದಸ್ಯರಿಗೆ ಚಹಾ ನೀಡಿ ಸತ್ಕರಿಸಿದ ರಾಜ್ಯಸಭೆ ಉಪಾಧ್ಯಕ್ಷರು; ಪ್ರಧಾನಿ ಮೋದಿ ಮೆಚ್ಚುಗೆ

ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡು ಸಂಸತ್ ಆವರಣದಲ್ಲಿ ರಾತ್ರಿ ವೇಳೆಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರಿಗೆ ಖುದ್ದಾಗಿ ರಾಜ್ಯಸಭೆಯ ಉಪಸಭಾಧ್ಯಕ್ಷ ಹರಿವಂಶ್ ಅವರು ಚಾಯ್ ನೀಡಿ ಮಾತುಕತೆ ನಡೆಸಿದರು.

ಹರಿವಂಶ್ ಅವರ ಈ ನಡೆ ನುಡಿಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು,

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹರಿವಂಶ್ ಅವರ ನಡೆ ಸ್ಪೂರ್ತಿದಾಯಕವಾದದ್ದು, ಮುತ್ಸದ್ದಿ ನಡೆ ಎಂದು ಬಣ್ಣಿಸಿ, ಪ್ರತಿಯೊಬ್ಬ ಪ್ರಜಾಪ್ರಭುತ್ವದ ಪ್ರೇಮಿಯೂ ಹೆಮ್ಮೆಪಡುವಂಥದ್ದಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಉಪಸಭಾಧ್ಯಕ್ಷರ ಮೇಲೆ ದಾಳಿ ನಡೆಸಲು ಮುಂದಾದ 8 ಅಮಾನತುಗೊಂಡ ಸದಸ್ಯರು ಸೇರಿ ಅವಮಾನ ಮಾಡಿದವರಿಗೆ ಸ್ವತಃ ಹರಿವಂಶ್ ಅವರೇ ಟೀ ನೀಡುವುದು ಹರಿವಂಶ್ ಅವರ ದೊಡ್ಡ ಮನಸ್ಸನ್ನು, ವಿನಮ್ರ ಮನಸ್ಸನ್ನು ತೋರುತ್ತದೆ ಎಂದು ಹೇಳಿದ್ದಾರೆ.

ಶತಮಾನಗಳಿಂದ ಬಿಹಾರ ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸುತ್ತಿದೆ. ಈ ಅದ್ಭುತ ನೀತಿಗಳ ಸಾಲಿನಲ್ಲಿ ಹರಿವಂಶ್ ಅವರು ತಮ್ಮ ಮುತ್ಸದ್ದಿತನದಿಂದ ಪ್ರಜಾಪ್ರಭುತ್ವದ ಪ್ರೇಮಿಗಳು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಭಾನುವಾರದಂದು ರಾಜ್ಯಸಭೆಯಲ್ಲಿ 2 ಮಸೂದೆಗಳ ಅಂಗೀಕಾರದ ವೇಳೆ ರಾಜ್ಯಸಭೆಯಲ್ಲಿ ಸಭಾಧ್ಯಕ್ಷರ ಮೈಕ್ ಕಿತ್ತು, ರೂಲ್ ಬುಕ್ ನ್ನು ಹರಿದು ದುರ್ವರ್ತನೆ ತೋರಿದ 8 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಇದನ್ನು ವಿರೋಧಿಸಿ ಸಂಸತ್ ಸದಸ್ಯರು ಸಂಸತ್ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.

Related posts

ರಫೇಲ್‌ ಡೀಲ್: ತನಿಖೆ ನಡೆಸಲು ಯಾವುದೇ ಆಧಾರವಿಲ್ಲ ಎಂದ ಸುಪ್ರೀಂ ಕೋರ್ಟ್, ಎಲ್ಲ ಅರ್ಜಿಗಳ ವಜಾ

Upayuktha

ಪಂಜಾಬ್ ಗ್ರಾಮದೊಳಗೆ ಶಸ್ತ್ರಾಸ್ತ್ರ ಬೀಳಿಸಿದ ಪಾಕ್ ಡ್ರೋನ್‌ಗಳು

Upayuktha

ಶಬರಿಮಲೆ ತೀರ್ಪು ಬಲವಂತ ಜಾರಿಗೆ ಕೇರಳ ಸರಕಾರಕ್ಕೆ ನಿರ್ದೇಶನ ನೀಡುವುದಿಲ್ಲ: ಸುಪ್ರೀಂ ಕೋರ್ಟ್

Upayuktha

Leave a Comment