ದೇಶ-ವಿದೇಶ ನಿಧನ ಸುದ್ದಿ

ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್‌ ನಿಧನ

ರಾಜ್ಯಸಭಾ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್‌ (ಚಿತ್ರ ಕೃಪೆ: ಎನ್‌ಡಿಟಿವಿ)

ಹೊಸದಿಲ್ಲಿ:

ರಾಜ್ಯಸಭಾ ಸದಸ್ಯ ಅಮರ್ ಸಿಂಗ್ (64) ಈಗ ಸ್ವಲ್ಪ ಹೊತ್ತಿಗೆ ಮುಂಚೆ ನಿಧನರಾದರು. ಕಳೆದ ಹಲವು ತಿಂಗಳುಗಳಿಂದ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದ ಅವರು ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅವರು ಪತ್ನಿ ಪಂಕಜಾ ಮತ್ತು ಅವಳಿ ಪುತ್ರಿಯರನ್ನು ಅಗಲಿದ್ದಾರೆ.

2013ರಲ್ಲಿ ಅಮರ್ ಸಿಂಗ್‌ ದುಬೈಗೆ ತೆರಳಿದ್ದಾಗ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದರು. ಕಿಡ್ನಿ ಕಸಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಅವರು 2016ರಲ್ಲಿ ರಾಜಕೀಯಕ್ಕೆ ಮರಳಿದ್ದರು.

2020ರ ಮಾರ್ಚ್‌ನಲ್ಲಿ ಅಮರ್ ಸಿಂಗ್ ನಿಧನರಾದರು ಎಂದು ಒಮ್ಮೆ ವದಂತಿ ಹರಡಿತ್ತು. ಆಗ ಸ್ವತಃ ಅವರೇ ‘ಟೈಗರ್ ಜಿಂದಾ ಹೈ’ ಎಂಬ ಸಂದೇಶದೊಂದಿಗೆ ಸ್ಪಷ್ಟನೆ ನಿಡಿದ್ದರು.

ಮುಲಾಯಂಸಿಂಗ್ ನೇತೃತ್ವದ ಸಮಾಜವಾದಿ ಪಕ್ಷದಲ್ಲಿ ದೀರ್ಘಕಾಲ ಪ್ರಮುಖ ನಾಯಕರಾಗಿದ್ದರು. ಇತ್ತೀಚೆಗೆ ಸಮಾಜವಾದಿ ಪಕ್ಷದ ಆಂತರಿಕ ರಾಜಕೀಯಗಳ ಕಾರಣದಿಂದ ಪಕ್ಷದಿಂದ ದೂರವಾಗಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಶಾರದಾ ರಮೇಶ್ ರಾವ್ ನಿಧನ

Upayuktha

ಹೋಳಿ ರಜೆ: ಮಾ.11ರ ವರೆಗೆ ಸಂಸತ್ ಕಲಾಪ ಮುಂದೂಡಿಕೆ

Upayuktha

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಗೆ ಕೇಂದ್ರ ಅನುಮೋದನೆ; ಎನ್‌ಸಿರ್‌ ಗೂ ಎನ್‌ಪಿಆರ್‌ಗೂ ಸಂಬಂಧವಿಲ್ಲ

Upayuktha
error: Copying Content is Prohibited !!