ಕಲೆ-ಸಾಹಿತ್ಯ ನಗರ ಸ್ಥಳೀಯ

ರಾಜ್ಯೋತ್ಸವ ವಿಶೇಷ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಕವನ ರಚನೆ-ವಾಚನ ಸ್ಪರ್ಧೆ

ಮಂಗಳೂರು: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ನೋಂ) ಕೇಂದ್ರ ಸಮಿತಿ, ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ತಾಲ್ಲೂಕು ಘಟಕ, ಪುತ್ತೂರು ಪ್ರಾಯೋಜಕತ್ವದಲ್ಲಿ 33ನೇ ಅಂತಾರಾಜ್ಯ ಮಟ್ಟದ ಅಂತರ್ಜಾಲ ಆಧಾರಿತ ಸಾಪ್ತಾಹಿಕ ಸಾಹಿತ್ಯಿಕ ಸ್ಪರ್ಧೆ ಅ.24, 25 ಮತ್ತು 26ರಂದು ನಡೆಯಲಿದೆ.

‘ಕನ್ನಡ ನಾಡು ನುಡಿ ಸಂಸ್ಕೃತಿ’ ಎಂಬ ವಿಷಯದಲ್ಲಿ ಕವನ ರಚನೆ ಮತ್ತು ವಾಚನ ಸ್ಪರ್ಧೆ ಆಯೋಜಿಸಲಾಗಿದೆ. ಸಮಯ: ರಾತ್ರಿ 7ರಿಂದ 10 ಗಂಟೆ.

ನಿಬಂಧನೆಗಳು/ ಸೂಚನೆಗಳು ಈ ಕೆಳಗಿನಂತಿವೆ:

01. ನಾಡ ಭಕ್ತಿಯ ಕವಿತೆಗಳು 16 ಸಾಲುಗಳ ಮಿತಿಯಲ್ಲಿ ಇರಬೇಕು.

02. ಒಬ್ಬರು ಒಂದು ಸ್ವರಚಿತ ನಾಡ ಭಕ್ತಿ ಕವಿತೆಯನ್ನು ಮಾತ್ರ ಕಳಿಸುವುದು.

03. ಕನ್ನಡ ನಾಡು, ನುಡಿ ಸಂಸ್ಕೃತಿ ಬಗೆಗಿನ ಕವಿತೆಗಳಾಗಿರಬೇಕು.

04. ಅಕ್ಷರ ದೋಷವಿಲ್ಲದ ಮುದ್ರಣ ರೂಪದಲ್ಲಿ ಕಳಿಸಬೇಕು.

05. ನಾಡ ಭಕ್ತಿ ಕವಿತೆಯ ಮುದ್ರಣ ರೂಪ, ವಾಚನದ ಧ್ವನಿ ಸುರುಳಿ (ಆಡಿಯೋ) ಮತ್ತು ಸ್ವಪರಿಚಯದ 30 ಸೆಕೆಂಡ್‌ಗಳಿಗೆ ಮೀರದ ವಿಡಿಯೋ ತುಣುಕುಗಳನ್ನು ಇಲ್ಲಿ ನೀಡಲಾಗಿರುವ ಸಂಪರ್ಕ ಸಂಖ್ಯೆಗಳಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಅ.24ರ ಸಂಜೆ 5ರ ಒಳಗೆ ಕಳಿಸಬೇಕು.

೦6. ಮೊದಲ ಮೂರು ಸ್ಥಾನ ಪಡೆಯುವ ನಾಡ ಭಕ್ತಿ ಕವಿತೆಗಳಿಗೆ ನಗದು ಬಹುಮಾನಗಳಿದ್ದು ಪ್ರಥಮ ₹ 501, ದ್ವಿತೀಯ ₹ 401 ಮತ್ತು ತೃತೀಯ ₹ 301ರಂತೆ ವಿಜೇತರಿಗೆ ಆನ್ಲೈನ್ ಮೂಲಕ ಸಂದಾಯ ಮಾಡಲಾಗುವುದು.

07. ನಂತರದ 10 ಕವಿತೆಗಳನ್ನು ‘ಟಾಪ್-10’ ಎಂದು ಆಯ್ಕೆ ಮಾಡಿ ಪುಸ್ತಕ ರೂಪದ ಬಹುಮಾನ ನೀಡಲಾಗುತ್ತದೆ.

08. ಆನಂತರದ 10 ಕವಿತೆಗಳಿಗೆ ತೀರ್ಪುಗಾರರ ‘ಮೆಚ್ಚುಗೆ’ಯ ಗೌರವಕ್ಕೆ ಆಯ್ಕೆ ಮಾಡಲಾಗುವುದು.

09. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಪ್ರಶಂಸಾ ಪತ್ರಗಳನ್ನು ನೀಡಲಾಗುವುದು.

10. ಸೂಚನೆಗಳನ್ನು ತಪ್ಪದೆ ಅರ್ಥೈಸಿಕೊಂಡು ಭಾಗವಹಿಸುವುದು.

11. ನಿರ್ಣಾಯಕರ ತೀರ್ಮಾನಕ್ಕೆ ಸ್ಪರ್ಧಿಗಳು ಬದ್ಧರಾಗಿರುವುದು.

12. ಗೊಂದಲಗಳನ್ನು ಆಯೋಜಕರ ಸಂಖ್ಯೆಗೆ ವೈಯಕ್ತಿಕವಾಗಿ ಕರೆ ಮಾಡಿ ಬಗೆ ಹರಿಸಿಕೊಳ್ಳಬಹುದು.

ಸಂಪರ್ಕ ಸಂಖ್ಯೆಗಳು:
(1) ಚಂದನಾ ಕೊಣಾಜೆ- 87621 62678
(2) ಪರಿಮಳಾ ಮಹೇಶ್- 81237 16968
(3) ಶಾಂತಾ ಪುತ್ತೂರು- 8277591731
(4) ಸಮುದ್ರವಳ್ಳಿ ವಾಸು- 9449311298
(5) ಕೊಟ್ರೇಶ್ ಎಸ್. ಉಪ್ಪಾರ್- 9739878197

ಆಸಕ್ತ ಕನ್ನಡ ಸಾಹಿತ್ಯ ಕೃಷಿಕರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ, ಸಿಎ ಎಸ್‌ಎಸ್‌ ನಾಯಕ್‌ ಹಾಗೂ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸುರೇಶ್ ನೆಗಳಗುಳಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಆದ್ಯಪಾಡಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ಉತ್ಸವ ನಾಳೆ

Upayuktha

ತಾಲೂಕು ಮಟ್ಟದಲ್ಲೂ ವಿಪತ್ತು ನಿರ್ವಹಣಾ ಪ್ರಾಧಿಕಾರ

Upayuktha

ವಿಟ್ಲ: ಆಟೋ ರಿಕ್ಷಾ ಅಪಘಾತ, ಗಾಯಗೊಂಡಿದ್ದ ಮಹಿಳೆ ಸಾವು

Upayuktha

Leave a Comment