ಕ್ಯಾಂಪಸ್ ಕಲರವ ಲೇಖನಗಳು

ರಕ್ಷಾಬಂಧನ: ಅಂದದ ದಾರಕ್ಕೊಂದು ಚೆಂದದ ಅರ್ಥ…

ಅಂತೂ -ಇಂತೂ ಬಂದೇಬಿಟ್ಟಿತು ಅಣ್ಣ-ತಂಗಿಯರ ಪವಿತ್ರ ಬಂಧವನ್ನ ಪ್ರತಿನಿಧಿಸುವ ರಾಖಿ ಹಬ್ಬ. ಹೌದು, ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಂಬಂಧವನ್ನು ಗಟ್ಟಿಗೊಳಿಸಲೆಂದೇ ಒಂದೊಂದು ಹಬ್ಬಗಳು ಆಚರಣೆಗೆ ಬಂದಿವೆ. ಅಂತೆಯೇ ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಈ ರಕ್ಷಾ ಬಂಧನವೂ ಕೂಡ.

ಮೂಲತಃ ಉತ್ತರ ಭಾರತದ, ನೂರಾರು ವರ್ಷಗಳ ಇತಿಹಾಸವಿರುವ ಈ ಹಬ್ಬವನ್ನು ಈಗ ನಾವು ಸಂಭ್ರಮದಿಂದ ಆಚರಿಸುತ್ತೇವೆ. ತಂಗಿಯೊಬ್ಬಳು ತನ್ನ ಅಣ್ಣನ ಮುಂಗೈಗೆ ರಕ್ಷಾಬಂಧನ ಕಟ್ಟಿ ಆತನ ಆಶೀರ್ವಾದ ಪಡೆಯುತ್ತಾಳೆ. ಇಬ್ಬರೂ ಪರಸ್ಪರರ ರಕ್ಷಣೆಯನ್ನು ಆಶಿಸುವ ಸುಂದರ ಹಬ್ಬವೇ ಈ ರಕ್ಷಾಬಂಧನ ಅಥವಾ ರಕ್ಷೆಯ ಬಂಧನ. ಹೆಚ್ಚಾಗಿ ಅಣ್ಣನಾದವನು ತಂಗಿಗೆ ಉಡುಗೊರೆ ನೀಡಿ ಸಂಬಂಧವನ್ನು ಮತ್ತಷ್ಟು ಹತ್ತಿರವಾಗಿಸಿ ಸಂಭ್ರಮಿಸುತ್ತಾನೆ.

ಈ ಹಬ್ಬ ಬಂತೆಂದರೆ ಸಾಕು ಪ್ರತಿ ದಿನ ಮನೆಯಲ್ಲಿ ಕೋಳಿ ಜಗಳವಾಡುವ ಅಣ್ಣ-ತಂಗಿಯರಿಗೆ ಎಲ್ಲಿಲ್ಲದ ಖುಷಿ. ಅಂದಿನ ದಿನವೂ ಕೂಡ ಅಷ್ಟೇ ಸಂಭ್ರಮದಿಂದ ಕೂಡಿರುತ್ತದೆ. ಆದರೆ ಆಧುನಿಕ ಸಮಾಜದಲ್ಲಿ ಈ ಹಬ್ಬವೂ ಕೂಡ ಒಂದಿಷ್ಟು ಆಧುನೀಕರಣಗೊಂಡಿದೆ. ಈಗೆಲ್ಲ ಅಂಗಡಿ ಬಾಗಿಲಿನಲ್ಲಿ ನೇತಾಡುವ ಬಣ್ಣಬಣ್ಣದ ರಕ್ಷೆಗಳು ಕೇವಲ ನೋಡಲಷ್ಟೇ ಚಂದ. ಆದರೆ ಕೇಸರಿ ದಾರದಿಂದ ಮಾಡಿದ ರಕ್ಷೆಯಷ್ಟೇ ಈ ಹಬ್ಬದ ನಿಜವಾದ ರೂವಾರಿ.

ರಕ್ಷಾಬಂಧನದ ವಿಶೇಷವೆಂದರೆ ಇದು ಅಣ್ಣ-ತಂಗಿಯರಿಗಷ್ಟೇ ಸೀಮಿತವಾದ ಹಬ್ಬ. ಆದರೆ ಇಂದು‌ ಹಾಗಿಲ್ಲ. ಯಾರು ಬೇಕಾದರು ಕೈಗೊಂದು ಬಣ್ಣದ ದಾರ ಕಟ್ಟಿ ರಕ್ಷಾಬಂಧನ ಆಚರಿಸುತ್ತಾರೆ! ನಮ್ಮ ಆಚರಣೆ, ಸಂಸ್ಕೃತಿ ಉಳಿಸಿಬೇಕಿರುವುದೂ ನಮ್ಮ ಕರ್ತವ್ಯ. ಹಾಗಾಗಿ ನಾವು ರಾಖಿ ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸೋಣ. ಇಲ್ಲಿ ಆಧುನಿಕರಣದ ಕರಿ ನೆರಳು ಬೀಳದಿರಲಿ ಎಂದು ಆಶಿಸೋಣ.

ಎಲ್ಲಾ ಅಣ್ಣ-ತಂಗಿಯರಿಗೂ ರಕ್ಷಾ ಬಂಧನದ ಶುಭಾಶಯಗಳು…

– ನಯನ್ ಕುಮಾರ್
ಅಂತಿಮ ಬಿಎ (ಪತ್ರಿಕೋದ್ಯಮ)
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಆಳ್ವಾಸ್ ‘ಆರೋಗ್ಯ ರಕ್ಷಾ’ ಔಷಧ ವಿತರಣಾ ಕಾರ್ಯಕ್ರಮ

Upayuktha

ಔಷಧಿಗಳ ಔಷಧಿ ಪ್ರೋಬಯೋಟಿಕ್

Upayuktha

ನಿಟ್ಟೆ ಕ್ಯಾಂಪಸ್‍ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

Upayuktha
error: Copying Content is Prohibited !!