ಕತೆ-ಕವನಗಳು

ಮಕ್ಕಳ ಕವನ: ರಕ್ಷಾ ಬಂಧನ

ಪ್ರಾತಿನಿಧಿಕ ಚಿತ್ರ- ಪುಟಾಣಿ ಸಂಪ್ರೀತ್‌-ಸಂವೃತಾ ಮತ್ತು ಅದ್ವೈತ್‌- ಅವನಿ

ರಕ್ಷೆಯ ಕಟ್ಟಲು
ಬಂದಳು ತಂಗಿಯು
ಅಣ್ಣನ ಕೈಗಳಿಗೆ ||

ಬಲಗೈ ಹಿಡಿಯುತ
ಮುಂದಕೆ ಸೆಳೆಯುತ
ರಾಖಿಯ ತೋರಿದಳು||

ಕರವನು ಪಿಡಿಯುತ
ಕಟ್ಟಿಯೆ ಬಿಟ್ಟಳು
ಮಮತೆಯ ಸೂತ್ರವನು ||

ತಲೆಯನು ಎತ್ತುತ
ಹಣೆಯನು ಮುಟ್ಟುತ
ತಿಲಕವನಿರಿಸಿದಳು ||

ಅಣ್ಣನ ಪ್ರೀತಿಯ
ಉಡುಗೊರೆ ಪಡೆಯುತ
ತಂಗಿಯು ನಮಿಸಿದಳು ||

ಕಣ್ಮನ ಸೆಳೆಯುವ
ಸುಂದರ ರಾಖಿಯು
ಪ್ರೀತಿಯ ದ್ಯೋತಕವು||

ಇರಲೀ ಪ್ರೀತಿಯು
ಅನಂತ ಕಾಲಕು
ಕರುಳಿನ ಸಂಬಂಧ ||

ಹಗೆತನ ಮರೆಯುತ
ಜಗವನೆ ಗೆಲ್ಲಲು
‌‌ ರಾಖಿಯೆ ಸೋಪಾನ ||

ಎಲ್ಲಾ ಸೋದರಿಯರಿಗೂ ರಕ್ಷಾ ಬಂಧನದ ಶುಭಾಶಯಗಳು.
ಓಂ ಸ್ವಸ್ತಿ 🕉✡

✍ ವಿ.ಬಿ.ಕುಳಮರ್ವ, ಕುಂಬ್ಳೆ

Mobile No. 9446484585

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕವನ: ಬಾರೋ ವಿನಾಯಕ

Upayuktha

ಸಣ್ಣ ಕತೆ/ ಕ್ಲಿನಿಕ್ಕಿನ ಕತ್ತರಿ

Upayuktha

ಚೌತಿಯ ಸಡಗರ (ಮಕ್ಕಳ ಕವನ)

Upayuktha

Leave a Comment

error: Copying Content is Prohibited !!