ಕತೆ-ಕವನಗಳು ಕಲೆ-ಸಾಹಿತ್ಯ

🙏 ರಕ್ಷಾ ಬಂಧನ 🙏

🙏 ರಕ್ಷಾ ಬಂಧನ 🙏
~~~~~
( ಮಕ್ಕಳ ಕವನ)
ರಕ್ಷೆಯ ಕಟ್ಟಲು
ಬಂದಳು ತಂಗಿಯು
ಅಣ್ಣನ ಕೈಗಳಿಗೆ ||

ಬಲಗೈ ಹಿಡಿಯುತ
ಮುಂದಕೆ ಸೆಳೆಯುತ
ರಾಖಿಯ ತೋರಿದಳು||

ಕರವನು ಪಿಡಿಯುತ
ಕಟ್ಟಿಯೆ ಬಿಟ್ಟಳು
ಮಮತೆಯ ಸೂತ್ರವನು ||

ತಲೆಯನು ಎತ್ತುತ
ಹಣೆಯನು ಮುಟ್ಟುತ
ತಿಲಕವನಿರಿಸಿದಳು ||

ಅಣ್ಣನ ಪ್ರೀತಿಯ
ಉಡುಗೊರೆ ಪಡೆಯುತ
ತಂಗಿಯು ನಮಿಸಿದಳು ||

ಕಣ್ಮನ ಸೆಳೆಯುವ
ಸುಂದರ ರಾಖಿಯು
ಪ್ರೀತಿಯ ದ್ಯೋತಕವು||

ಇರಲೀ ಪ್ರೀತಿಯು
ಅನಂತ ಕಾಲಕು
ಕರುಳಿನ ಸಂಬಂಧ ||

ಹಗೆತನ ಮರೆಯುತ
ಜಗವನೆ ಗೆಲ್ಲಲು
‌‌ ರಾಖಿಯೆ ಸೋಪಾನ ||

ಎಲ್ಲಾ ತಂಗಿಯರಿಗೂ ರಕ್ಷಾ ಬಂಧನದ ಶುಭಾಶಯಗಳು.
ಓಂ ಸ್ವಸ್ತಿ 🕉✡

✍🏼 ವಿ.ಬಿ.ಕುಳಮರ್ವ, ಕುಂಬ್ಳೆ.

Related posts

ಪಾಂಡಿತ್ಯ, ಕಾವ್ಯಶಕ್ತಿ, ದೈವತ್ವದ ಶ್ರೀ ಜಗನ್ನಾಥದಾಸರು

Upayuktha

ನವರಾತ್ರಿ ಹಬ್ಬ

Harshitha Harish

ಪುಸ್ತಕ ಪರಿಚಯ: ವಸುಧೇಂದ್ರರ ಕಾದಂಬರಿ ‘ತೇಜೋ ತುಂಗಭದ್ರಾ’

Upayuktha