ಕತೆ-ಕವನಗಳು

*ರಾಮ ಬಾರೊ*

ಚೈತ್ರ ಮಾಸದಿ
ಬರುವ ಹಬ್ಬವು
ರಾಮ ನವಮಿಯು ಪಾವನ
ದಿನವು ಸೆಳೆಯುವ
ಪುಣ್ಯ ನಾಮವು
ತೋರು ರಾಮನೆ ದರುಶನ

ದುಷ್ಟ ಶಿಕ್ಷಕ
ಶಿಷ್ಟ ರಕ್ಷಕ
ಪರಂಜ್ಯೋತಿಯು ರಾಮನು
ರಾಮ ಈಶ್ವರ
ಒಂದೆ ಎಂಬರು
ನಡತೆಯಿಂದಲೆ ಖ್ಯಾತನು..

ಗುಣ ಉದಾತ್ತ
ಕಾವ್ಯ ನಾಯಕ
ರಾಮ ಚಂದಿರ ದೇವನು..
ಮನುಜ ರೂಪದಿ
ಇಳೆಗೆ ಬಂದನು
ಮುಗುದೆ ಶಬರಿಗೆ ಒಲಿದನು..

ರಾಮ ಬಕುತರ
ಮನಕೆ ರಮಿಸುವ,
ಅಭಯ ನೀಡಲು ಶಕುತನು..
ಪ್ರಿಯನು ಪಾನಕ
ರಾಮ ತಾರಕ
ಮಂತ್ರ ಜಪಿಸುವ ಬಕುತನು..

ರಾಮನೊಲಿದರೆ ..
ಭಯವು ಇಲ್ಲವು..
ಮನಕೆ ಶಾಂತಿಯು ನೆಮ್ಮದಿ..
ರಾಮ ಧ್ಯಾನವು..
ಮನದಲಿದ್ದರೆ..
ತೊಲಗಿ ಅಳಿವುದು ಬೇಗುದಿ..

ರಾಮ ನಾಮದ
ಮಹಿಮೆ ಅಪಾರ..
ಎಂದು ಹಾಡಿದ ದಾಸರು..
ಧನ್ಯರಾದರು..
ಸ್ತುತಿಸಿ ನರ್ತಿಸಿ..
ದೇವನೊಲುಮೆಯ ಪಡೆದರು..

ರಾಮನಾಮವು..
ಕೇಳ್ವ ತಾಣವು..
ಪರಮ ಶಾಂತಿಯ ಧಾಮವು..
ರಾಮ ತಾರಕ ..
ಮಂತ್ರ ಪಠಣವು..
ಕಿವಿಯ ಹೊಕ್ಕರೆ ಪುಣ್ಯವು..

ಸೋಂಕು ರಾವಣ..
ಕತೆಯ ಮುಗಿಸಲು..
ರಾಮ ಬೇಗನೆ ಬರುವೆಯ…
ಲೋಕ ಶೋಕವ…
ಕಳೆಯೆ,ಹರುಷವ ..
ತರಲು,ರಾಮನೆ, ಬಾರೆಯ…

*ಗುಣಾಜೆ ರಾಮಚಂದ್ರ ಭಟ್*

Related posts

ಕವನ: ಸಾಧನಕೇರಿಯ ಸಾಧಕರು

Upayuktha

ಕವನ: ಕನಸು, ಆಗು ನನಸು

Upayuktha

ಕವನ: ಬಾ ಬಾರೇ ಶಾರ್ವರಿ

Upayuktha