ತಲಪಾಡಿ: ಕಿನ್ಯ ಕೇಶವ ಶಿಶು ಮಂದಿರದ ಅಭಿವೃದ್ಧಿ ಕಾರ್ಯದ ನಿಮಿತ್ತ ಹಾಗೂ ಲೋಕ ಕಲ್ಯಾಣಾರ್ಥ ನಡೆಸಿದ ರಾಮ ಕಥಾ ಕೀರ್ತನೆ ನೆರೆದ ನೂರಾರು ಜನರಿಗೆ ರಾಮನ ಆದರ್ಶತೆಯನ್ನು ಬೋಧಿಸಿ ಸಾತ್ವಿಕ ಜೀವನ ನಿರ್ವಹಣೆಗೆ ಪ್ರೇರೇಪಣೆ ಒದಗಿಸುವಲ್ಲಿ ಸಫಲವಾಯಿತು. ಒಂದು ವಾರ ಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ ನೆರೆದ ಜನತೆಗೆ ರಾಮ ಕಥಾ ಕೀರ್ತನೆ ಹಾಗೂ ಕಥಾ ಶ್ರವಣಕ್ಕೆ ಅವಕಾಶ ಒದಗಿಸಿತು.
108 ಕಾಯಿ ಗಣಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಸೀತಾ ಕಲ್ಯಾಣ ಹಾಗೂ ರಾಮ ಪಟ್ಟಾಭಿಷೇಕದ ಭಾಗಗಳನ್ನು ಆಯ್ದು ಕೀರ್ತನೆ ಹಾಗೂ ಕಥಾ ಉಪನ್ಯಾಸ ನೀಡಲಾಯಿತು.
ಶ್ರೀಮಾತಾ ಯೋಗಾಶ್ರಮ ನಿರೋಳಿಕೆಯ ಯೋಗಚಾರ್ಯ ಪುಂಡಾರೀಕಾಕ್ಷ ಬೆಳ್ಳೂರು ಕಥಾ ಕೀರ್ತನೆ ನಡೆಸಿದರು. ಹಾಡುಗಾರಿಕೆ ಹಾಗೂ ಹಾರ್ಮೋನಿಯಂನಲ್ಲಿ ಪ್ರಕಾಶ್ ಆಚಾರ್ಯ ಕುಂಟಾರು, ತಬಲಾದಲ್ಲಿ ಕೌಶಿಕ್ ಮಂಜನಾಡಿ ಸಹಕರಿಸಿದರು.