ರಾಜ್ಯ

ವನವಾಸಿ ಕಲ್ಯಾಣ ಅಖಿಲ ಭಾರತ ಅಧ್ಯಕ್ಷರಾಗಿ ರಾಮಚಂದ್ರ ಖರಾಡೆ

ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವನವಾಸಿ ಕಲ್ಯಾಣ ವಿಭಾಗದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ರಾಮಚಂದ್ರ ಖರಾಡೆ ನೇಮಕಗೊಂಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು (ಭಾನುವಾರ) ನಡೆದ ವನವಾಸಿ ಕಲ್ಯಾಣ ಸಮಿತಿಯ ಅಖಿಲ ಭಾರತ ಬೈಠಕ್‌ನಲ್ಲಿ ಈ ಘೋಷಣೆಯಾಗಿದೆ.

ರಾಮಚಂದ್ರ ಖರಾಡೆಯವರು ಈ ತನಕ ಸಮಿತಿಯ ರಾಜಸ್ಥಾನ ರಾಜ್ಯದ ಅಧ್ಯಕ್ಷರಾಗಿದ್ದರು.

ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಜಗದೇವ್ ರಾಮ್ ಉರವ್ ಜೀ ಇತ್ತೀಚೆಗೆ ನಿಧನರಾಗಿದ್ದರು. ಅವರ ಸ್ಥಾನಕ್ಕೆ ಖರಾಡೆಯವರ ನೇಮಕವಾಗಿದೆ ಎಂದು ವನವಾಸಿ ಕಲ್ಯಾಣದ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಹೆಗಡೆ ಮತ್ತು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಎಪ್ಪತ್ತರ ಸಂಭ್ರಮದಲ್ಲಿ ಸುಧಾಮೂರ್ತಿ

Harshitha Harish

ಕೋವಿಡ್‌ 19 ಅಪ್ಡೇಟ್ಸ್‌: ರಾಜ್ಯದಲ್ಲಿಂದು 149 ಹೊಸ ಕೊರೊನಾ ಕೇಸ್

Upayuktha

ಮಧ್ಯಾಹ್ನದ ಸುದ್ದಿ: ರಾಜ್ಯದಲ್ಲಿ ಇಂದು 23 ಮಂದಿಗೆ ಕೊರೊನಾ ಪಾಸಿಟಿವ್

Upayuktha