ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

‘ರಾಮಾಯಣ ಸಿದ್ಧ’ ಬಿ.ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣೆ

ಪೆರ್ಲ: ಶ್ರೀ ಮದ್ವಾಲ್ಮೀಕಿ ರಾಮಾಯಣದ 108 ಪಾರಾಯಣ ಮಾಡಿ ವಿಶೇಷವಾಗಿ ಸಾಧನೆ ಮಾಡಿದ ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯದ ಕಾಟುಕುಕ್ಕೆ ಘಟಕದ ಗುರಿಕ್ಕಾರರಾಗಿರುವ ಶ್ರೀ ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣಾ ಕಾರ್ಯಕ್ರಮವು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಂತೆ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ದಿನಾಂಕ 26-09-2020 ಶನಿವಾರದಂದು ಸಂಪನ್ನವಾಯಿತು.

ಕಾರ್ಯಕ್ರಮವು ನಿಶ್ಚಿತ ಆಮಂತ್ರಿತರನ್ನೊಳಗೊಂಡು ಕೋವಿಡ್ ಕಾನೂನಿನ ಇತಿಮಿತಿಯಲ್ಲಿ ಜರಗಿತು. ಧ್ವಜಾರೋಹಣ ಶಂಖನಾದವಾಗಿ ಗುರುವಂದನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.

ಮಹಾ ಮಂಡಲ ಮುಷ್ಠಿ ಭಿಕ್ಷಾ ಪ್ರಧಾನರಾದ ಶ್ರೀಕೃಷ್ಣ ಭಟ್ಟ ಮೀನಗದ್ದೆ ಅವರು ಗೋಪೂಜೆ ನೆರವೇರಿಸಿದರು. ಬಳಿಕ ಶ್ರೀರಾಮದೇವರ ಪೂಜೆ, ಗೋಪಾಲಕೃಷ್ಣ ಪೂಜೆ ಇವು ಶಾಸ್ತ್ರೋಕ್ತವಾಗಿ ಜರಗಿದವು. ಶ್ರೀಯುತ ಬಿ ವಿ ನಾರಾಯಣ ಭಟ್ಟರು ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣದ ಶ್ರೀ ರಾಮ ಪಟ್ಟಾಭಿಷೇಕ ಸರ್ಗವನ್ನು ಪಾರಾಯಣ ಮಾಡಿದರು.

ಬಳಿಕ ಜರಗಿದ ಸನ್ಮಾನ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಳ್ಳೇರಿಯಾ ಮಂಡಲಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.

ಮಹಾಮಂಡಲ ಧರ್ಮಕರ್ಮ ವಿಭಾಗದ ಸಹಕಾರ್ಯದರ್ಶಿ ವೇ ಮೂ ಕೇಶವಪ್ರಸಾದ ಭಟ್ಟ ಕೂಟೇಲು ಇವರು ದಿಕ್ಸೂಚಿ ಮಾತುಗಳನ್ನಾಡಿ ಶ್ರೀಮದ್ವಾಲ್ಮೀಕಿ ರಾಮಾಯಣದ ವಿಶೇಷತೆ, ಔಚಿತ್ಯ, ಉದ್ದೇಶ, ಪರಿಣಾಮ, ಫಲ ಇವುಗಳ ಬಗ್ಗೆ ವೇದದ ಶಾಸ್ತ್ರೀಯ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.

ಶ್ರೀಯುತ ಬಿ ವಿ ನಾರಾಯಣ ಭಟ್ಟ ಮತ್ತು ಶ್ರೀಮತಿ ಶೈಲಾ ಯನ್ ಭಟ್ ಇವರನ್ನು ಶಾಲುಹೊದೆಸಿ ಶ್ರೀಗಂಧ ಹಾರಾರ್ಪಣೆ ಮಾಡಿ ಫಲ, ಅಭಿನಂದನಾ ಪತ್ರ ಇವುಗಳನ್ನಿತ್ತು ಗೌರವಿಸಲಾಯಿತು. ದಂಪತಿಗಳಿಗೆ ಮಾತೆಯರು ತಿಲಕವಿಟ್ಟು ಆರತಿ ಬೆಳಗಿದರು.

ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲ ವಿದ್ಯಾರ್ಥಿವಾಹಿನೀ ಸಂಘಟನಾ ನೇತೃತ್ವದಲ್ಲಿ ಕುಮಾರಿ ದಿವ್ಯಾ ಭಾರತಿ, ಒಡಿಯೂರು ಮನೆ, ಕನ್ಯಾನ ವಲಯ, ಮಂಗಳೂರು ಮಂಡಲ ಇವರು ರಚಿಸಿದ ಬಿ ವಿ ನಾರಾಯಣ ಭಟ್ಟರ ಭಾವ ಚಿತ್ರವನ್ನು ಗೌರವ ಪೂರ್ಣವಾಗಿ ಅವರಿಗೆ ಸಮರ್ಪಣೆ ಮಾಡಿದರು.

ಈ ಕುರಿತಾದ ಮಾಹಿತಿಯನ್ನು ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಅವರು ವಿವರಿಸಿದರು. ಕುಮಾರಿ ದಿವ್ಯಾ ಭಾರತಿ ಇವರಿಗೆ ಮಹಾ ಮಂಡಲ ಮಾತೃತ್ವಂ ಸಂಚಾಲಕಿ ಈಶ್ವರಿ ಬೇರ್ಕಡವು, ಮಂಡಲ ಮಾತೃ ವಿಭಾಗ ಪ್ರಧಾನೆ ಶ್ರೀಮತಿ ಕುಸುಮಾ ಪೆರ್ಮುಖ ಇವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿದರು.

ಮಾಹಾ ಮಂಡಲ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಮಹಾಮಂಡಲ ಶಾಸನತಂತ್ರದ ಗುರುಸಂಪರ್ಕ ಶ್ರೀಸಂಯೋಜಕರು ಹಾಗೂ ಮುಳ್ಳೇರಿಯಾ ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ, ಶ್ರೀ ಶಿವಪ್ರಸಾದ ವರ್ಮುಡಿ, ಶ್ರೀ ಜಯದೇವ ಖಂಡಿಗೆ ಇವರು ಅಭಿನಂದನಾ ಭಾಷಣ ಮಾಡಿದರು.

ಸನ್ಮಾನಿತರಾದ ಶ್ರೀ ಬಿ ವಿ ನಾರಾಯಣ ಭಟ್ಟರು ರಾಮಾಯಣ ಪಾರಾಯಣದ ಸಂದರ್ಭದ ಅನುಭವ ಮತ್ತು ಸನ್ಮಾನಿಸಿದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಗೋಶಾಲಾ ಆಡಳಿತ ಮಂಡಳೀಯ ಕಾರ್ಯದರ್ಶಿ ಶ್ರೀ ಕೃಷ್ಣ ಪ್ರಸಾದ ಬನಾರಿ ಇವರು ಗೋಶಾಲೆಯ ಬಗ್ಗೆ ಮಾಹಿತಿಗಳನ್ನಿತ್ತರು.

ಕುಂಬಳೆ ವಲಯಾಧ್ಯಕ್ಷರಾದ ಬಾಲಕೃಷ್ಣ ಶರ್ಮ ಇವರು ಧನ್ಯವಾದವನ್ನಿತ್ತರು. ಎಣ್ಮಕಜೆ ವಲಯ ಕಾರ್ಯದರ್ಶಿ ಶಂಕರಪ್ರಸಾದ ಕುಂಚಿನಡ್ಕ ಇವರು ಸಭಾ ನಿರೂಪಣೆ ಮಾಡಿ ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ಸಂಯೋಜನೆ ಮಾಡಿದರು. ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ, ಮಂಡಲ, ವಲಯ ಹಾಗೂ ಗೋಶಾಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಜ.12: ಪುತ್ತೂರಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Upayuktha

ಶುಕ್ರವಾರವೂ ಬಿಗಿ ನಿರ್ಬಂಧ: ದ.ಕ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ

Upayuktha

ರೇಡಿಯೋ ಪಾಂಚಜನ್ಯದಲ್ಲಿ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಬೆಳಕು’

Upayuktha

Leave a Comment