ದೇಶ-ವಿದೇಶ ಪ್ರಮುಖ ಸಿನಿಮಾ-ಮನರಂಜನೆ

‘ರಾಮ’ನೇ ಕುಟುಂಬದ ಜತೆ ಕುಳಿತು ರಾಮಾಯಣ ವೀಕ್ಷಿಸುತ್ತಿರುವ ಫೋಟೋ ವೈರಲ್

ಹೊಸದಿಲ್ಲಿ: ಕೊರೊನಾ ವಿರುದ್ಧ ಸಮರದ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ ಕಾರಣ ಜನತೆಯ ಬೇಸರ ಕಳೆಯಲು ಹಾಗೂ ಭಾರತದ ಭವ್ಯ ಪರಂಪರೆಯ ದರ್ಶನ ಮಾಡಿಸಲು ದೂರದರ್ಶನದ ರಾಷ್ಟ್ರೀಯ ವಾಹಿನಿ ಕಳೆದ ಮೂರು ದಿನಗಳಿಂದ ರಾಮಾಯಣ, ಮಹಾಭಾರತ ಧಾರಾವಾಹಿಗಳನ್ನು ಮರುಪ್ರಸಾರ ಮಾಡುತ್ತಿದೆ.

1980-90ರ ದಶಕದಲ್ಲಿ ಮೊದಲ ಬಾರಿಗೆ ಪ್ರಸಾರವಾದ ಈ ಎರಡು ಪೌರಾಣಿಕ ಧಾರಾವಾಹಿಗಳು ಕಿರುತೆರೆಯ ಇತಿಹಾಸದಲ್ಲೇ ಅತ್ಯಧಿಕ ವೀಕ್ಷಕರು ಮತ್ತು ಜನಪ್ರಿಯತೆಯನ್ನು ಗಳಿಸಿ ದಾಖಲೆ ಸೃಷ್ಟಿಸಿವೆ.

ಅಂತಹ ಎರಡು ಮಹಾನ್ ಧಾರಾವಾಹಿಗಳು ಇಷ್ಟು ವರ್ಷದ ಬಳಿಕ ಮರುಪ್ರಸಾರವಾಗುತ್ತಿದ್ದರೂ ಜನಪ್ರಿಯತೆಯಲ್ಲಿ ಎಳ್ಳಷ್ಟೂ ಕಡಿಮೆಯಾಗಿಲ್ಲ.

ರಮಾನಂದ ಸಾಗರ್ ನಿರ್ಮಿತ ರಾಮಾಯಣ ಧಾರಾವಾಹಿಯಂತೂ ಪ್ರತಿ ಬಾರಿ ವೀಕ್ಷಿಸಿದಾಗಲೂ ಹೊಸತನ, ಹೊಸ ಅರ್ಥಗಳನ್ನು ನೀಡುತ್ತ ವೀಕ್ಷಕರನ್ನು ತ್ರೇತಾಯುಗದ ಕಾಲಕ್ಕೆ ಕರೆದೊಯ್ಯುತ್ತಿರುವುದು ನಿಜ.

ರಾಮಾಯಣ ಧಾರಾವಾಹಿಯಲ್ಲಿ ಭಗವಾನ್ ಶ್ರೀರಾಮನ ಪಾತ್ರ ನಿರ್ವಹಿಸಿದ ಖ್ಯಾತ ಕಲಾವಿದ ಅರುಣ್ ಗೋವಿಲ್ ಅವರು ಇಂದು ತಮ್ಮ ಕುಟುಂಬದವರ ಜತೆ ಕುಳಿತು ತಮ್ಮದೇ ಅಭಿನಯದ ಧಾರಾವಾಹಿಯನ್ನು ವೀಕ್ಷಿಸುತ್ತಿರುವ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅರುಣ್ ಗೋವಿಲ್ ಅವರು ಪತ್ನಿ, ಮಕ್ಕಳು, ಮೊಮ್ಮಕ್ಕಳ ಸಹಿ ಕುಟುಂಬದ ಸದಸ್ಯರ ಜತೆಗೆ ಕುಳಿತು ರಾಮಾಯಣ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಾರೆ. ರಾಮಾಯಣ ಧಾರಾವಾಹಿ ಮೊದಲ ಬಾರಿಗೆ ಪ್ರಸಾರವಾದಾಗ ಅರುಣ್ ಗೋವಿಲ್ ಅವರು ಎಲ್ಲಿಗೆ ಹೋದರೂ ಮುತ್ತಿಕೊಳ್ಳುತ್ತಿದ್ದ ಅಭಿಮಾನಿಗಳು ಸಾಕ್ಷಾತ್ ಶ್ರೀರಾಮನೇ ತಮ್ಮ ಮುಂದೆ ಬಂದಿದ್ದಾನೆ ಎಂಬಂತೆ ಭಕ್ತಿಪೂರ್ವಕ ಆದರ ಗೌರವಗಳನ್ನು ತೋರುತ್ತಿದ್ದರು. ಸೀತೆಯ ಪಾತ್ರ ನಿರ್ವಹಿಸಿದ ದೀಪಿಕಾ ಅವರನ್ನೂ ಅಭಿಮಾನಿಗಳು ಪ್ರತ್ಯಕ್ಷವಾಗಿ ಸೀತಾಮಾತೆಯೇ ತಮ್ಮೆದುರು ಬಂದು ನಿಂತಿದ್ದಾಳೆ ಎಂಬಂತೆ ಜನ ಭಾವಿಸುತ್ತಿದ್ದರು. ಅಷ್ಟರ ಮಟ್ಟಿಗೆ ಈ ಇಬ್ಬರೂ ಕಲಾವಿರು ತಮ್ಮ ಪಾತ್ರಗಳಲ್ಲಿ ಅಭಿನಯಿಸುವಾಗ ತಾದಾತ್ಮ್ಯ ಸೃಷ್ಟಿಸಿರುವುದನ್ನು ಮರೆಯುವಂತಿಲ್ಲ.

ದೂರದರ್ಶನದ ರಾಷ್ಟ್ರೀಯ ವಾಹಿನಿ (ಡಿಡಿ ನ್ಯಾಷನಲ್) ಶನಿವಾರದಿಂದ ಪ್ರತಿದಿನ ಬೆಳಗ್ಗೆ 9ರಿಂದ 10 ಗಂಟೆ ಹಾಗೂ ರಾತ್ರಿ 9ರಿಂದ 10 ಗಂಟೆಯ ವರೆಗೆ ರಾಮಾಯಣ ಧಾರಾವಾಹಿಯ ಎರಡು ಕಂತುಗಳನ್ನು ಪ್ರಸಾರ ಮಾಡುತ್ತಿದೆ. ಇಂದು ಬೆಳಗ್ಗೆ ಪ್ರಸಾರವಾದ ಕಂತಿನಲ್ಲಿ ರಾಮ-ಸೀತೆಯರ ವಿವಾಹ ಮಹೋತ್ಸವದ ಕಥೆ ಪ್ರಸಾರವಾಯಿತು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಡ್ರೈವಿಂಗ್ ವೇಳೆ ದಿಕ್ಸೂಚಿಗಾಗಿ ಮಾತ್ರ ಮೊಬೈಲ್ ಬಳಕೆಗೆ ಅನುಮತಿ: ಅ. 1ರಿಂದ ಜಾರಿ

Upayuktha

ಬಿಜೆಪಿ ಜತೆ ಸಚಿನ್ ಪೈಲಟ್ ಮಾತುಕತೆ; ರಾಜಸ್ಥಾನದ ಕಾಂಗ್ರೆಸ್ ಸರಕಾರಕ್ಕೆ ಕುತ್ತು…?

Upayuktha

ಹಾಕಿ ದಂತಕಥೆ ಬಲಬೀರ್ ಸಿಂಗ್‌ ಸರ್ದಾರ್‌ಗೆ ಹೃದಯಾಘಾತ; ಸ್ಥಿತಿ ಗಂಭೀರ

Upayuktha