ಪ್ರಮುಖ ರಾಜ್ಯ

ರಮೇಶ್ ಸಿಡಿ ಪ್ರಕರಣ: ದೂರುದಾರ ದಿನೇಶ್‌ ಕಲ್ಲಹಳ್ಳಿಗೆ ಜೀವ ಬೆದರಿಕೆ

ರಾಮನಗರ: ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಇರುವ ಅವರ ನಿವಾಸಕ್ಕೆ ಪೊಲೀಸರು ಬುಧವಾರ ಭದ್ರತೆ ಒದಗಿಸಿದ್ದಾರೆ.

‘ನಾನು ನೀಡಿರುವ ದೂರಿನಿಂದ ಜಾರಕಿಹೊಳಿ ಬೆಂಬಲಿಗರು ಆಕ್ರೋಶಗೊಂಡಿದ್ದು, ದೂರವಾಣಿ ಕರೆಗಳ ಮೂಲಕ ನನಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೇ ನಾನು ಓಡಾಡುವ ಸ್ಥಳಗಳಲ್ಲಿ ಅಪರಿಚಿತರ ಗುಂಪು ನನ್ನನ್ನು ಹಿಂಬಾಲಿಸುತ್ತಿದ್ದು, ನಾನು ಹಾಗೂ ನನ್ನ ಕುಟುಂಬದವರಿಗೆ ಭಯ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ ಒದಗಿಸಬೇಕು’ ಎಂದು ಕೋರಿ ಅವರು ಬುಧವಾರ ಸಂಜೆ ಕನಕಪುರ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದರು.

Related posts

‘ಶಿವಪದ ರತ್ನಕೋಶ’ ಗ್ರಂಥ: ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ

Upayuktha

ಕೊರೋನಾ ಸಂಕಷ್ಟಕ್ಕೆ ಶ್ರೀರಾಮಚಂದ್ರಾಪುರಮಠ ಸ್ಪಂದನೆ

Upayuktha

ದಿಲ್ಲಿ ಕಾರ್ಖಾನೆಯಲ್ಲಿ ಭಾರಿ ಅಗ್ನಿ ದುರಂತ: ಕನಿಷ್ಠ 43 ಸಾವು

Upayuktha