ಕಲೆ ಸಂಸ್ಕೃತಿ ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪುತ್ತೂರು: ನಾಡಿದ್ದು (ಮಾ.5) ವಿವೇಕಾನಂದ ಕಾಲೇಜಿನಲ್ಲಿ ರಂಗ ವಿಮರ್ಶಾ ಶಿಬಿರ

ಪುತ್ತೂರು: ವಿವೇಕಾನಂದ ಮಹಾವಿದ್ಯಾಲಯದಲ್ಲಿ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇದರ ಆಶ್ರಯದಲ್ಲಿ ಕಾಲೇಜಿನ ಐಕ್ಯುಎಸಿ ಘಟಕ, ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಗಳು ಜಂಟಿಯಾಗಿ ಒಂದು ದಿನದ ರಂಗ ವಿಮರ್ಶಾ ಕಮ್ಮಟವನ್ನು ಮಾರ್ಚ್ 5ರಂದು ಆಯೋಜಿಸಲಾಗಿದೆ.

ಪೂರ್ವಾಹ್ನ 10 ಗಂಟೆಗೆ ಆರಂಭವಾಗಲಿರುವ ಕಮ್ಮಟಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಪ್ರೊ. ಭೀಮಸೇನ ಆರ್. ವಹಿಸಲಿರುವರು. ಈ ಸಂದರ್ಭ ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ, ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ, ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ರಾಜ್ಯ ಪ್ರಶಸ್ತಿ ಪುರಸ್ಕøತ ನಟ ಎಂ.ಕೆ ಮಠ ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮದ ನಂತರದಲ್ಲಿ ಎರಡು ಗೋಷ್ಠಿಗಳು ಹಾಗೂ ‘ಅಶ್ವಪರ್ವ’ ನಾಟಕ ಪ್ರದರ್ಶನ ನಡೆಯಲಿದೆ. ಹಿರಿಯ ಪತ್ರಕರ್ತ ಪಿ. ಬಿ. ಹರೀಶ್ ರೈ ಹಾಗೂ ವಿಜಯ್ ಕುಮಾರ್ ಕೊಡಿಯಾಲ್‍ಬೈಲು ಕ್ರಮವಾಗಿ ‘ರಂಗಾವಲೋಕನ’ ಹಾಗೂ ‘ಇಂದಿನ ದಿನಗಳಲ್ಲಿ ತುಳು ರಂಗಭೂಮಿಯ ಸ್ಥಿತಿಗತಿ’ ಎಂಬ ವಿಚಾರಗಳ ಕುರಿತಾಗಿ ವಿಷಯ ಮಂಡನೆ ಮಾಡಲಿದ್ದಾರೆ. ಕಮ್ಮಟದ ಕೊನೆಯ ಹಂತವಾಗಿ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಪ್ರೊ. ವಿ.ಬಿ. ಅರ್ತಿಕಜೆ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಪ್ರಶಸ್ತಿ ಪತ್ರ ವಿತರಿಸಲಿರುವರು. ಮುಖ್ಯ ಅಭ್ಯಾಗತರಾಗಿ ಹಿರಿಯ ಪತ್ರಕರ್ತ ಯು.ಎಲ್. ಉದಯಕುಮಾರ್ ಭಾಗವಹಿಸುವರು.
*******

ಕರ್ನಾಟಕ ನಾಟಕ ಅಕಾಡೆಮಿ ನಡೆದು ಬಂದ ದಾರಿ:
ಸಾಂಸ್ಕøತಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರ ಗುರುತರವಾದುದು. ಕಲೆ ಸಂಸ್ಕೃತಿಗಳನ್ನು ಕಾಪಾಡಲು, ಪ್ರದರ್ಶನ ಕಲೆಗಳನ್ನು ಅಭಿವೃದ್ಧಿ ಪಡಿಸಲು ಸದಾ ಸಿದ್ಧರಾಗಿರುವ ರಾಜ್ಯ ಸರ್ಕಾರ ಪ್ರತಿಯೊಂದು ಕಲಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತನೆ ನಡೆಸಿ ರೂಪಿಸಿದ ಯೋಜನೆಯಲ್ಲಿ ಅಕಾಡೆಮಿಗಳ ಸ್ಥಾಪನೆಯು ಒಂದು. ಕರ್ನಾಟಕ ನಾಟಕ ಅಕಾಡೆಮಿಯ ಅಂದಿನ ಮೈಸೂರು ಸರ್ಕಾರದ ಆಡಳಿತದಡಿ 1955ರಲ್ಲಿ ಮೈಸೂರುರಾಜ್ಯ ಸಂಗೀತ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು. ಆಗ ಅದರ ಅಧ್ಯಕ್ಷರಾಗಿದ್ದವರು ಶ್ರೀ ಜಯಚಾಮರಾಜ ಒಡೆಯರ್.

ನಂತರ ಈ ಅಕಾಡೆಮಿಯು ವಿದ್ಯಾ ಇಲಾಖೆಯ ಆಡಳಿತಕ್ಕೆ ಒಳಪಟ್ಟಿತು. ಸಂಬಂಧಪಟ್ಟ ವಿದ್ಯಾಮಂತ್ರಿಗಳೇ ಅಕಾಡೆಮಿಯ ಅಧ್ಯಕ್ಷ ಪದವಿಯನ್ನು ಅಲಂಕರಿಸುತ್ತಾ ಬಂದರು. ಕೆ.ವಿ.ಶಂಕರಗೌಡ, ಎಸ್.ಆರ್.ಕಂಠಿ, ಎ.ಆರ್. ಬದರಿನಾರಾಯಣ್, ಅಣ್ಣಾರಾವ್ ಗಣಮುಖಿ ಈ ಸ್ಥಾನವನ್ನಲಂಕರಿಸಿದ ಪ್ರಮುಖರು. ನಂತರ 1978ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ವತಂತ್ರ ಅಕಾಡೆಮಿಯಾಗಿ ರೂಪುಗೊಂಡು ನಾಟಕ ಕ್ಷೇತ್ರಕ್ಕೆ ವಿಶಿಷ್ಟ ಆಯಾಮ ನೀಡಿ, ರಂಗಭೂಮಿಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದೆ.

ರಂಗಪ್ರಶಸ್ತಿಗಳು: ರಂಗಭೀಷ್ಮ ಗುಬ್ಬಿ ವೀರಣ್ಣನವರಿಂದ ಮೊದಲುಗೊಂಡು, ಕಳೆದ ಐದು ದಶಕಗಳಿಂದ ರಾಜ್ಯದ ಹವ್ಯಾಸಿ, ವೃತ್ತಿ, ಗ್ರಾಮೀಣ ರಂಗಭೂಮಿಯ ಹಲವಾರು ಖ್ಯಾತ ರಂಗಕರ್ಮಿಗಳನ್ನು, ರಂಗತಜ್ಞರನ್ನು, ನಾಟಕಕಾರರನ್ನು, ನಟ-ನಟಿಯರನ್ನು, ನಿರ್ದೇಶಕರನ್ನು, ನೇಪಥ್ಯತಜ್ಞರನ್ನು ಪ್ರಸಾಧನ ಕಲಾವಿದರನ್ನು ಗುರುತಿಸಿ, ಅವರಿಗೆ ಅವರವರ ಸಾಧನೆ ಪರಿಶ್ರಮಿಗಳಿಗೆ ತಕ್ಕಂತೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸುವ ರಂಗಪರಂಪರೆಯನ್ನು ಅನುಸರಿಸುತ್ತಿದೆ. ಇದಲ್ಲದೆ, ಫೆಲೋಶಿಪ್‍ಗಳನ್ನು, ಜೀವಮಾನ ರಂಗಸಾಧನೆ ಪ್ರಶಸ್ತಿ, ಸುವರ್ಣಕರ್ನಾಟಕ ಗೌರವ ಪುರಸ್ಕಾರ, ಮತ್ತು ದತ್ತಿ ಪ್ರಶಸ್ತಿಗಳನ್ನು ಅಕಾಡೆಮಿ ನೀಡುತ್ತಾ ಬಂದಿದೆ.

ವೃತ್ತಿ ರಂಗಭೂಮಿ ಪುನಶ್ಚೇತನ ಕಾರ್ಯಕ್ರಮ:
ಹಲವಾರು ದಶಕಗಳಿಂದ ರಾಜ್ಯದಲ್ಲಿ ಅನೇಕ ವೃತ್ತಿಕಂಪನಿಗಳು ಕಲಾಸೇವೆಯಲ್ಲಿ ತೊಡಗಿದ್ದು, ನಟನೆಯನ್ನೇ ತಮ್ಮ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಈ ವೃತ್ತಿಯಲ್ಲದೆ, ಇತರ ವೃತ್ತಿಅರಿಯದ ಈ ಕಲಾವಿದರ ಕುಟುಂಬಗಳು ಹಳ್ಳಿ ಹಳ್ಳಿಗಳಲ್ಲಿ, ಸಂತೆ ಜಾತ್ರೆಗಳಲ್ಲಿ, ವೃತ್ತಿ ನಾಟಕಗಳನ್ನು ಪ್ರದರ್ಶಿಸುತ್ತಿವೆ. ಆದರೆ, ಎಲ್ಲಾ ಕಂಪನಿಗಳು, ಎಲ್ಲಾ ಕಾಲದಲ್ಲಿಯೂ ನಾಟಕ ಪ್ರದರ್ಶನ ಅವಕಾಶಗಳಿಲ್ಲದೆ, ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಯನ್ನು ಮನಗಂಡು ಕರ್ನಾಟಕ ಸರ್ಕಾರದ ವಿಶೇಷ ಆರ್ಥಿಕ ಸಹಾಯದಿಂದಾಗಿ ಕರ್ನಾಟಕ ನಾಟಕ ಅಕಾಡೆಮಿ, ಇವುಗಳ ಪುನಶ್ಚೇತನಕ್ಕಾಗಿ, ಅವುಗಳ ಅವಶ್ಯಕತೆಗೆ ಮತ್ತು ಪರಿಶ್ರಮಕ್ಕೆ ಅನುಗುಣವಾಗಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಾಲನೆಯಲ್ಲಿರುವ ಕಂಪನಿಗಳ ವರದಿಗಳನ್ನು ಪಡೆದು ಅವುಗಳ ಪುನಶ್ಚೇತನಕ್ಕಾಗಿ ಅನುದಾನ ನೀಡುತ್ತಾ ಬಂದಿದೆ.

ಹಿರಿಯ ಕಲಾವಿದರಿಗೆ ಮಾಸಾಶನ: ಜೀವನ ನಿರ್ವಹಣೆಗಾಗಿ ನಾಟಕ ಕ್ಷೇತ್ರವನ್ನೇ ನಂಬಿ, ಕಲಾವಿದರು ತಮ್ಮ ಇಳಿವಯಸ್ಸಿನಲ್ಲಿ ಅನುಭವಿಸುವ ಸಂಕಷ್ಟಗಳನ್ನು ಗಮನಿಸಿ, ಅಂತಹವರಿಗೆ ಊರಗೋಲಾಗಿ ನಿಲ್ಲುವ ಮಾಸಾಶನ ಯೋಜನೆಯ ಮೂಲಕ ಸಾವಿರಾರು ಅರ್ಹ ಕಲಾವಿದರನ್ನು ಅಕಾಡೆಮಿ ಗುರುತಿಸಿದೆ. ಅಂಥಹವರಿಂದ ಅರ್ಜಿ ಆಹ್ವಾನಿಸಿ, ಅವುಗಳನ್ನು ಅವರವರ ಜಿಲ್ಲಾ ಕೇಂದ್ರಗಳಲ್ಲೇ ಪರಿಶೀಲಿಸಿ, ಸರ್ಕಾರಕ್ಕೆ ಶಿಫಾರಸು ಮಾಡಿ, ಮಾಸಾಶನ ಮಂಜೂರು ಮಾಡುವ ಕಾರ್ಯಕ್ರಮವನ್ನು ವಷರ್ಂಪ್ರತಿ ಮಾಡುತ್ತಾ ಬಂದಿದೆ.

ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೊಡಮಾಡುವ ಅನುದಾನವನ್ನು ಪ್ರತಿ ವರ್ಷ ನಿರ್ದೇಶಕರು ಮತ್ತು ಕಲಾವಿದರನ್ನು ಗುರುತಿಸಿ, ಶಿಬಿರ ನಡೆಸುವ ನಾಟಕ ಪ್ರದರ್ಶನ ಏರ್ಪಡಿಸುವ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದೆ. ಇದರಿಂದ ಅನೇಕ ಯುವಕ ಯುವತಿಯರು ರಂಗಭೂಮಿಯತ್ತ ಬರಲು ಅನುಕೂಲವಾಗುತ್ತಿದೆ.

ರಂಗಸಮ್ಮಿಲನ: ನೆರೆರಾಜ್ಯಗಳೊಡನೆ ರಂಗಸಂಬಂಧ ಕಲ್ಪಿಸಿಕೊಂಡು, ರಂಗ ಕಾರ್ಯಕ್ರಮಗಳ ಮುಖೇನ ರಾಷ್ಟ್ರೀಯ ಸಾಂಸ್ಕೃತಿಕ ಭಾವೈಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ, ರಂಗಸಮ್ಮಿಲನ ಯೋಜನೆಯನ್ನು ನಾಟಕ ಅಕಾಡೆಮಿ ಹಮ್ಮಿಕೊಂಡು ನಡೆಸುತ್ತಿದೆ. ಈ ಯೋಜನೆಯಲ್ಲಿ ದೆಹಲಿ, ಮುಂಬೈ, ಹೈದರಾಬಾದ್, ಕಲ್ಕತ್ತಾ, ಗೋವಾ, ಪುಣೆ ಹೀಗೆ ಮೊದಲಾದ ಕಡೆಗಳಿಗೆ ಕನ್ನಡ ನಾಟಕಗಳನ್ನು ಕಳುಹಿಸುವುದು ಹಾಗೂ ಅವರ ನಾಟಕ ತಂಡಗಳನ್ನು ಇಲ್ಲಿಗೆ ಬರಮಾಡಿಕೊಳ್ಳುವ ಮೂಲಕ ಅನೇಕ ರಂಗಸಮ್ಮಿಲನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.

ಕರ್ನಾಟಕ ನಾಟಕ ಅಕಾಡೆಮಿ ಸುವರ್ಣ ಸಂಭ್ರಮ: ನಾಟಕ ಅಕಾಡೆಮಿ ಸ್ಥಾಪನೆಯಾಗಿ 50 ವರ್ಷ(1959-2009) ಪೂರೈಸಿದ ಸಂದರ್ಭದಲ್ಲಿ ಸುವರ್ಣಸಂಭ್ರಮ ಮಾಲಿಕೆಯಡಿ ಜಿಲ್ಲಾ ರಂಗ ಮಾಹಿತಿ, ಯುವಜನರಿಗಾಗಿ ರಂಗ ಕೈಪಿಡಿ, ಅಖಿಲಭಾರತ ಮಟ್ಟದ ವಿಚಾರಸಂಕಿರಣಗಳು, ಕನ್ನಡ ರಂಗಭೂಮಿಯ 150 ವರ್ಷ ಇತಿಹಾಸದ ಪುಸ್ತಕ ಪ್ರಕಟಣೆ, ನಾಟಕಗಳ ಸಿ.ಡಿ.ತಯಾರಿ, ಮುಂತಾದ ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಜಾರಿಗೆ ತಂದಿದೆ.

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
1965ರಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಒಂದು ಅಂಗ ಸಂಸ್ಥೆಯಾಗಿ ಸ್ಥಾಪನೆಯಾದ ವಿವೇಕಾನಂದ ಪದವಿ ಮಹಾವಿದ್ಯಾಲಯ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಸಂಸ್ಕಾರಯುತ, ಸಮಾಜಮುಖಿ ಶಿಕ್ಷಣವನ್ನು ಕಳೆದ ಐದು ದಶಕಗಳಿಂದ ನೀಡುತ್ತಾ ಬಂದಿದೆ. ಇಲ್ಲಿ ಕಳೆದ ಹದಿಮೂರು ವರ್ಷಗಳಿಂದ ಪದವಿ ಪತ್ರಿಕೋದ್ಯಮ ಹಾಗೂ ನಾಲ್ಕು ವರ್ಷಗಳಿಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಗಳು ಕಾರ್ಯ ನಿರ್ವಹಿಸತ್ತಾ ಬಂದಿವೆ. ಸದಾ ಒಮದಿಲ್ಲೊಂದು ವಿಭಿನ್ನ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಸಕ್ರಿಯವಾಗಿರುವ ಪತ್ರಿಕೋದ್ಯ ವಿಭಾಗ, ವೃತ್ತಿಪರ ಪತ್ರಿಕೋದ್ಯಮದ ಕಲಿಕೆಗಾಗಿ, ವಿಕಸನಪತ್ರಿಕೆ, ವಿಕಾಸ ಪತ್ರಿಕೆ, ವಿನೂತನ ಪಾಕ್ಷಿಕ ಹಾಗೂ ವಿಕಸನ ಟಿವಿ ಎಂಬ ಯೂಟೂಬ್ ವಾಹಿನಿಯ ಮೂಲಕ ವೇದಿಕೆ ಕಲ್ಪಿಸಿದೆ. ವತ್ತಿಪರತೆಯನ್ನು ಬೆಳೆಸುವ ದೃಷ್ಟಿಯಿಂದ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕೊಟ್ಟಾರಚೌಕಿ ಭೈರವ ಗುಳಿಗ ಕಟ್ಟೆ ವರ್ಷಾವಧಿ ನೇಮೋತ್ಸವ: ಪ್ರಸಾದ ಸ್ವೀಕರಿಸಿದ ಶಾಸಕ ಡಾ. ವೈ ಭರತ್‌ ಶೆಟ್ಟಿ

Upayuktha

ನಮ್ಮ ಹೆಮ್ಮೆಯ ಕೋವಿಡ್ ಯೋಧರು ಈ ಯುವ ವೈದ್ಯರು

Upayuktha

ಕಾವೂರು-ಕಾಪಿಗುಡ್ಡೆ ಪೈಪ್‌ಲೈನ್‌ ಕಾಮಗಾರಿಗೆ ಚಾಲನೆ

Upayuktha