ಗ್ರಾಮಾಂತರ ಸ್ಥಳೀಯ

ರಂಗಸಿರಿ ‘ಸ್ವಯಂಪ್ರಭೆ’ ಯಕ್ಷಗಾನ

ಸಾಂದರ್ಭಿಕ ಚಿತ್ರ

ಬದಿಯಡ್ಕ: ತೊಕ್ಕೊಟಿನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಮಂದಿರದ ವಾರ್ಷಿಕ ಭಜನಾ ಮಂಗಲೋತ್ಸವದಂಗವಾಗಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು. ಸವ್ಯಸಾಚಿ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ವಿದ್ಯಾರ್ಥಿಗಳು ‘ಸ್ವಯಂಪ್ರಭಾ ಪರಿಣಯ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದರು.

ಪಾತ್ರವರ್ಗದಲ್ಲಿ ದೇವೇಂದ್ರನಾಗಿ ಶ್ರೀಹರಿ ಮವ್ವಾರು, ಅಗ್ನಿಯಾಗಿ ಕಿಶನ್ ಅಗ್ಗಿತ್ತಾಯ, ವರುಣನಾಗಿ ಮನ್ವಿತ್ ಕೃಷ್ಣ, ನಾರದನಾಗಿ ಮನಸ್ವಿನಿ, ಸ್ವಯಂಪ್ರಭೆಯಾಗಿ ಸುಪ್ರೀತಾ ಸುಧೀರ್, ಮಿತ್ರಶೋಭೆಯಾಗಿ ಉಪಾಸನಾ ಪಂಜರಿಕೆ, ಕಮಲಗಂಧಿ ಹಾಗೂ ಬ್ರಹ್ಮನಾಗಿ ಅಭಿಜ್ಞಾ ಬೊಳುಂಬು, ಶಂಖಚೂಡನಾಗಿ ಶ್ರೀಶ ಪಂಜಿತ್ತಡ್ಕ, ಪದ್ಮಚೂಡನಾಗಿ ಆಕಾಶ್ ಬದಿಯಡ್ಕ, ಕೃಷ್ಣನಾಗಿ ವಿದ್ಯಾ ಕುಂಟಿಕಾನಮಠ, ರಾಣಿಯರಾಗಿ ಸುಮಿತಾ ಅಡೂರು ಮತ್ತು ವರ್ಷಾ ಲಕ್ಷ್ಮಣ್, ಶಿವನಾಗಿ ರಾಜೇಶ್ ಕುಂಪಲ, ಶೃಂಗಿಯಾಗಿ ವರ್ಷಾ ಲಕ್ಷ್ಮಣ್, ಷಣ್ಮುಖನಾಗಿ ಆಯುಶ್ ಲಕ್ಷ್ಮಣ್ ಪಾತ್ರಗಳಿಗೆ ಜೀವತುಂಬಿದರು.

ಭಾಗವತರಾಗಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಕೃಷ್ಣರಾಜ ಭಟ್ ನಂದಳಿಕೆ ಹಾಗೂ ಚಕ್ರತಾಳದಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಉತ್ತಮ ಹಿಮ್ಮೇಳ ನೀಡಿದರು. ನೇಪಥ್ಯದಲ್ಲಿ ಕೇಶವ ಆಚಾರ್ಯ, ರಾಜೇಶ್, ಗಿರೀಶ್ ಕುಂಪಲ ಸಹಕರಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಆಕಾಶಕ್ಕೆ ಲಗ್ಗೆಯಿಟ್ಟ ಚೊಕ್ಕಾಡಿಯ ಪಾರಿಜಾತ: ‘ಸುಬ್ರಾಯ ಚೊಕ್ಕಾಡಿ 80’ ಅಭಿನಂದನೆ ಸಮಾರಂಭದಲ್ಲಿ ಅರವಿಂದ ಚೊಕ್ಕಾಡಿ

Upayuktha

ಅರಣ್ಯೇತರ ಚಟುವಟಿಕೆ ವಿರುದ್ಧ ನೋಟಿಸ್: ವಿವಾದಾಸ್ಪದ ಹೊಸಗುಂದ ಉತ್ಸವಕ್ಕೆ ಬ್ರೇಕ್

Upayuktha

ಪ.ಜಾತಿ/ಪ.ಪಂಗಡ ಸಾಹಿತಿಗಳಿಗೆ 25,000 ರೂ ಪ್ರೋತ್ಸಾಹ ಧನ: ಅರ್ಜಿ ಆಹ್ವಾನ

Upayuktha