ಕತೆ-ಕವನಗಳು

ರಂಗೇರಿದೆ ತಿರಂಗ

 

ಇಂದು ರೋಮ ರೋಮಗಳಲ್ಲಿ


ಶಕ್ತಿಯು ನೂರ್ಮಾಡಿಯಾಗಿದೆ
ನಿನ್ನೆಯ ಅತಂತ್ರ ಜೀವನಕ್ಕೆ ತೆರೆ ಬೀಳಲು
ನಿದಿರೆಯ ಮರೆಯಾಗಿಸಿ ಕಾದ ಸುದಿನ
ಪಾಲಿಗೊದಗಿ ಬಂದು ಭಾರತ ಮಾತೆ ನಕ್ಕಾಗ

ಹಗಲು ರಾತ್ರಿ ಹರಿದ ರಕ್ತದೋಕುಳಿ
ಭಾರತ ಮಾತೆಯ ಕರುಳು ಕಡಿದ ಭಾವ
ಭಾರತ ಮಾತೆ ಶಾಂತಿಯ ಪಾಲಿಸೆಂದಳು
ಅಶಾಂತಿಯ ಕಿಚ್ಚು ಹತ್ತಿರಲು
ಶಾಂತಿಯ ಕನಸು ಯುವ ಶಕ್ತಿಗೆ ಸಹಿಸದ ತುತ್ತು

ಶತ ಶತ ಭಾರಿ ತಾಯಿ ಭಾರತೀಯ ಮೆಟ್ಟಿರಲು
ಭಾರತ ಮಾತೆಯ ಸುಪುತ್ರರು ಜೀವ ತೆತ್ತರು
ತಾಯಿ ರಕ್ಷಣೆ ನಾಳಿನ ಸುಂದರ ಭಾರತ ಬೆಳಗಲು
ಹರಿದ ರಕ್ತ ಭಾರತಿಗೆ ತಿಲಕವಾಗಿ ಹೊಳೆಯಿತು
ಮಾತೆಯ ಗೆಲುವಿನ ನಗು ಮತ್ತೆ ಹಸಿರಾಯಿತು

ತ್ರಿವರ್ಣ ಧ್ವಜ ಗಗನದ ಮೇಲೇರಿ ನಗುತ್ತಿದೆ
ವೀರ ಶೂರ ಸುಪುತ್ರರ ಬಲಿದಾನದ ಶಕ್ತಿ
ತಿರಂಗಾ ಆಕಾಶದಾಚೆಗೂ ಹಾರುತ್ತಿದೆ
ಬಲಿದಾನದ ಉಸಿರು ತಿರಂಗದಲಿ ಹೊಕ್ಕಿದೆ
ಉಸಿರಿನ ಗಾಳಿಯ ಜೊತೆ ಜೊತೆ ತಿರಂಗ ರಂಗೇರಿದೆ.

ಕೃಷ್ಣಪ್ರಿಯ✍️

Related posts

ಮಕ್ಕಳ ಕತೆ: ಆನೆ….. ಒಂದಾನೆ.. (ಭಾಗ 2)

Upayuktha

ಕವಿತೆ: 🙏 ಮನೋಲ್ಲಾಸ 🙏

Upayuktha

ತುಳು ಭಾಷೆ : ನೆಂಪಾಂಡ್ ಆ ದಿನೊಕುಲು.

Harshitha Harish

Leave a Comment

error: Copying Content is Prohibited !!