ಪ್ರಮುಖ ರಾಜ್ಯ

ರಾಷ್ಟ್ರೀಯ ಕಾಮಧೇನು ಆಯೋಗದಿಂದ ಅಬಾಲ ವೃದ್ಧರಿಗಾಗಿ ಗೋ ಸಂತತಿ ವಿಷಯದ ವಿನೂತನ ಪರೀಕ್ಷೆ

ಭಾಗವಹಿಸಿ “ಬಹುಮಾನ ಮತ್ತು ಪ್ರಮಾಣಪತ್ರ” ಪಡೆಯಿರಿ
ಫೆಬ್ರವರಿ 2021ರಲ್ಲಿ ಜರುಗಲಿದೆ “ಕಾಮಧೇನು ಗೋ-ವಿಜ್ಞಾನ ಪರೀಕ್ಷೆ”

ಮಂಗಳೂರು: ಗೋ-ಸಂತತಿಯ (ದನ/ಹಸು/ಪಶು) ಪಾಲನೆ, ಸಂರಕ್ಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಮತ್ತು ಗೋ ಸಂತತಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡುವುದಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.) ಯನ್ನು ಭಾರತ ಸರ್ಕಾರ ರೂಪಿಸಿದೆ. ಸಣ್ಣ ಮತ್ತು ಮಧ್ಯಮ ರೈತರು, ಮಹಿಳೆಯರು ಮತ್ತು ಯುವ ವ್ಯವಹಾರಿಕೋದ್ಯಮಿಗಳಿಗೆ ಜೀವನೋಪಾಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ನೀತಿಗಳನ್ನು ರೂಪಿಸಲು ಮತ್ತು ಗೋ ಸಂತತಿಗಳಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನಕ್ಕೆ ನಿರ್ದೇಶನಗಳನ್ನು ನೀಡಲು ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.) ಅತ್ಯುನ್ನತ-ಶಕ್ತಿಯ ಶಾಶ್ವತ ಸಂಸ್ಥೆಯಾಗಿದೆ.

ಹಸು ಕೇವಲ ಹಾಲು ನೀಡುವ ಪ್ರಾಣಿಯಲ್ಲ ಆದರೆ ಸರಿಯಾಗಿ ಬಳಸಿದರೆ ಅದರ ಪರಿಸರ, ಆರೋಗ್ಯ ಮತ್ತು ಆರ್ಥಿಕ ಪ್ರಯೋಜನಗಳು ಮನುಕುಲಕ್ಕೆ ಅಪಾರ ಎಂಬ ಸಂದೇಶವನ್ನು ದೇಶಾದ್ಯಂತ ತಲುಪಿಸುವಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.) ಯಶಸ್ವಿಯಾಗಿದೆ. ಇದರ ತ್ಯಾಜ್ಯ ಉತ್ಪನ್ನಗಳಾದ ಹಸು-ಸಗಣಿ ಮತ್ತು ಹಸು-ಮೂತ್ರವು ಅಗ್ಗದ ಮತ್ತು ಹೇರಳವಾಗಿ ಲಭ್ಯವಿರುವ ಜೈವಿಕ ವಿಘಟನೀಯ ಮತ್ತು ಪರಿಸರ ಸ್ನೇಹಿ ಉತ್ಪನ್ನವಾಗಿದೆ. ಆದ್ದರಿಂದ, ಲಾಭದಾಯಕವಾಗಿ ಬಳಸಲು ಹಸು ಉದ್ಯಮಿಗಳು ಹಸುವಿನ ಪಾಲನೆ ಸುಸ್ಥಿರವಾಗಿಸಲು ಹಾಗೂ ಲಾಭದಾಯಕವಾಗಿ ರೂಪಿಸಬಹುದು. ಇದು ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ವರ್ಷ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.)ದ ಕೆಲವು ಅಭಿಯಾನಗಳು ನಡೆಸಿಕೊಟ್ಟಿದೆ. ಗೌಮಯ ಗಣೇಶ ಅಭಿಯಾನ, ಕಾಮಧೇನು ದೀಪಾವಳಿ ಅಭಿಯಾನ, ಕಾಮಧೇನು ದೇವ್ ದೀಪಾವಳಿ ಮುಂತಾದ ಅಭಿಯಾನಗಳು ಮತ್ತು ಸರಣಿ ಸೆಮಿನಾರ್ಗಳು ಹಾಗೂ ವೆಬ್ ನಾರ್ಗಳ ಮೂಲಕ ಗೋವಿನ ಸಗಣಿ ಮತ್ತು ಗೋ ಮೂತ್ರದ ಇತರ ಬಳಕೆಯ ಸಂದೇಶವನ್ನು ತಿಳಿಸಿಕೊಡುವ ಅಂತರಜಾಲ ಕಾರ್ಯಾಗಾರಗಳು ಬಹಳ ಪರಿಣಾಮಕಾರಿಯಾಗಿ ದೇಶದಾದ್ಯಂತ ನಗರ ಹಾಗೂ ಗ್ರಾಮೀಣ ಜನಸಾಮಾನ್ಯರ ಮನೆ-ಮನ ತಲುಪಿಸಲು ಸಾಗಿಸಿವೆ.

ದೇಶಾದ್ಯಂತ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಮಧೇನು ಪೀಠ ಅಥವಾ ಕಾಮಧೇನು ಅಧ್ಯಯನ ಕೇಂದ್ರ ಅಥವಾ ಕಾಮಧೇನು ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.)ದ ಆಶಯ ದೇಶಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಇದು ದೇಶಾದ್ಯಂತ ಅತ್ಯಂತ ತೀವ್ರವಾಗಿ ಚರ್ಚಿತ ಹಾಗೂ ಜನಪ್ರಿಯ ವಿಷಯವಾಗಿ ಮಾನ್ಯತೆ ಪಡೆಯುತ್ತಿದೆ.

ಯುವ ವಿದ್ಯಾರ್ಥಿಗಳು ಮತ್ತು ಇತರ ಎಲ್ಲ ನಾಗರಿಕರಲ್ಲಿ ಸ್ಥಳೀಯ ಗೋಸಂತತಿಯ (ಹಸುಗಳ) ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸಲು, ಗೋ ವಿಜ್ಞಾನದ ಬಗ್ಗೆ ಅಧ್ಯಯನ ಸಾಮಗ್ರಿಗಳು ಲಭ್ಯವಾಗುವಂತೆ ಮಾಡುವ ಮತ್ತು ಕಾಮಧೇನು ಗೌ ವಿಜ್ಞಾನ್‌ ಪರೀಕ್ಷೆಯನ್ನು ನಡೆಸುವ ಉದಾತ್ತ ಹಾಗೂ ನೂತನ ಉಪಕ್ರಮವನ್ನು ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.) ಪ್ರಾರಂಭಿಸಿದೆ. ಹಾಲು ನೀಡುವುದನ್ನು ನಿಲ್ಲಿಸಿದ ನಂತರವೂ ಹಸು ನೀಡುವ ಅನಪೇಕ್ಷಿತ ಉತ್ಪಾದನಾ ಸಾಮರ್ಥ್ಯ ಮತ್ತು ವಿಫುಲ ವ್ಯಾಪಾರ ಅವಕಾಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಮೂಲಕ ಗೋಸಂತತಿ (ಹಸುಗಳ) ಬಗ್ಗೆ ಎಲ್ಲ ಭಾರತೀಯರಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಹಾಗೂ ಕುತೂಹಲವನ್ನು ಉಂಟುಮಾಡುವ ಅವಕಾಶ ಸೃಷ್ಠಿಸಲಿದೆ.

“ಕಾಮಧೇನು ಗೌ ವಿಜ್ಞಾನ್” ಪರೀಕ್ಷೆಯ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

ಕಾಮಧೇನು ಗೋ- ವಿಜ್ಞಾನ ಪರೀಕ್ಷೆಯು ಒಂದೇ ದಿನ ದೇಶಾದ್ಯಂತ ನಡೆಸಲಾಗುವ ಅಂತರಜಾಲ (ಆನ್ಲೈನ್) ಪರೀಕ್ಷೆಯಾಗಿದೆ. ಈ ಪರೀಕ್ಷೆಯ ಉದ್ದೇಶಿತ ದಿನಾಂಕವನ್ನು ನಮ್ಮ ಅಧಿಕೃತ http://kamdhenu.gov.in ಮತ್ತು http: // kamdhenu.blog ಜಾಲತಾಣಗಳಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಪರೀಕ್ಷೆಯನ್ನು ಪ್ರಧಾನವಾಗಿ ನಾಲ್ಕು ವಿಭಾಗಗಳಲ್ಲಿ ನಡೆಸಲಾಗುವುದು

(1) ಪ್ರಾಥಮಿಕ ಹಂತ (8ನೇ ತರಗತಿಯವರೆಗೆ)
(2) ದ್ವಿತೀಯ ಹಂತ (9ನೇ ತರಗತಿಯಿಂದ 12ನೇ ತರಗತಿಯವರೆಗೆ)
(3) ಕಾಲೇಜು ಹಂತ (12ನೇ + ನಂತರ)
(4) ಸಾರ್ವಜನಿಕರಿಗೆ (ವಯಸ್ಸು ಮುಕ್ತ)

*ಕಾಮಧೇನು ಗೋ – ವಿಜ್ಞಾನ ಪರೀಕ್ಷೆಯು 100 ಅಂಕಗಳು ಮತ್ತು ಒಂದು ಗಂಟೆ ಅವಧಿಯನ್ನು ಹೊಂದಿರುತ್ತದೆ ಹಾಗೂ ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಇತರ 11 ಪ್ರಾದೇಶಿಕ ಭಾಷೆಗಳಲ್ಲಿರುತ್ತದೆ.
*ಪರೀಕ್ಷೆಗೆ ಯಾವುದೇ ಶುಲ್ಕವಿಲ್ಲ.
*ಪರೀಕ್ಷೆಯು ಟಿಕ್-ಮಾರ್ಕ್ / ವಸ್ತುನಿಷ್ಠ/ವಸ್ತುಆಧಾರಿತ ( ಆಬ್ಜೆಕ್ಟಿವ್ ) ರೀತಿಯ ಪ್ರಶ್ನೆ-ಉತ್ತರಗಳು (ಎಂ.ಸಿ.ಕ್ಯೂ.) ಆಗಿರುತ್ತದೆ.

*ರಾಷ್ಟ್ರೀಯ ಕಾಮಧೇನು ಆಯೋಗ ಜಾಲತಾಣಗಳಲ್ಲಿ ಪಠ್ಯಕ್ರಮ ಪ್ರಕಟಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಮಾಡಲಾಗುವುದು. ಇದರ ಜೊತೆಗೆ ಹಸುಗಳ ಕುರಿತ ಇತರ ಸಾಹಿತ್ಯ ಮತ್ತು ಉಲ್ಲೇಖ ಪುಸ್ತಕಗಳು, ಸಾಮಾಜಿಕ ಜಾಲತಾಣದ ಮಾಹಿತಿಗಳು ಪರೀಕ್ಷಾ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಗೆ ಸಿದ್ಧವಾಗಲು ಸಹಾಯ ಮಾಡುತ್ತದೆ. ಬ್ಲಾಗ್ಗಳು, ವೀಡಿಯೊಗಳು ಮತ್ತು ಇತರ ಆಯ್ದ ಓದುವ ವಸ್ತುಗಳನ್ನು ನಮ್ಮ ಅಧಿಕೃತ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗುತ್ತದೆ.

ಈ ಬೃಹತ್ ಕಾರ್ಯಕ್ರಮವನ್ನು ಭರ್ಜರಿ ಯಶಸ್ಸಿಗೊಳಿಸಲು ವಿಜ್ಞಾನಿಗಳು, ಉದ್ಯಮಿಗಳು, ಗೋ-ಸೇವಕರು, ರೈತರು, ಯುವಕರು ಮತ್ತು ಮಹಿಳೆಯರು ಮತ್ತು ಹಿರಿಯ ನಾಗರಿಕರು ಸಕ್ರಿಯವಾಗಿ ಕೆಲಸ ಮಾಡುತ್ತಾರೆ.

ಈ ಪರೀಕ್ಷೆಯನ್ನು ಪಾರದರ್ಶಕ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ನಡೆಸಲಾಗುವುದು.

ಅಂತರಜಾಲ(ಆನ್ಲೈನ್) ಪರೀಕ್ಷೆಯ ಸಮಯದಲ್ಲಿ ಯಾವುದೇ ಅಡ್ಡಹಾದಿ/ ಅನ್ಯಕುಶಲತಾ ಹಾದಿಗೆ ಯಾವುದೇ ಅವಕಾಶವಿಲ್ಲದ ರೀತಿಯಲ್ಲಿ ಅಂತರಜಾಲ ಪ್ರಶ್ನೆಗಳಗೆ ಉತ್ತರ ಬರೆಯುವ ರೀತಿಯಲ್ಲಿ ವ್ಯವಸ್ಥೆಯನ್ನು ಹೊಂದಿಸಲಾಗುವುದು.

ಫಲಿತಾಂಶಗಳನ್ನು ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.)ದ http://kamdhenu.gov.in ಮತ್ತು http: // kamdhenu.blog ಜಾಲತಾಣಗಳಲ್ಲಿ ತಕ್ಷಣ ಘೋಷಿಸಲಾಗುತ್ತದೆ.

ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಯಶಸ್ವಿ ಅರ್ಹ ಅಭ್ಯರ್ಥಿಗಳಿಗೆ ನಂತರ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು.

ಈ ಪರೀಕ್ಷೆಯನ್ನು ಆಯೋಜಿಸಲು ಸಹಾಯ ಮಾಡುವ ಎಲ್ಲರಿಗೂ ಮೆಚ್ಚುಗೆಯ ಪತ್ರಗಳನ್ನು ನೀಡಲಾಗುತ್ತದೆ.

ಈ ಆನ್ಲೈನ್ ಪರೀಕ್ಷೆಯ ನೋಂದಣಿ ಲಿಂಕ್ ರಾಷ್ಟ್ರೀಯ ಕಾಮಧೇನು ಆಯೋಗದ ಜಾಲತಾಣಗಳಲ್ಲಿ “www.kamdhenu.gov.in” / www.kamdhenu.blog ಸದಾ ಲಭ್ಯವಿರುತ್ತದೆ.

ಈ ಕಾರ್ಯಕ್ರಮವನ್ನು ಭರ್ಜರಿಯಾಗಿ ಯಶಸ್ಸಿಗೊಳಿಸಲು, ಕೇಂದ್ರ ಶಿಕ್ಷಣ ಸಚಿವರು / ಮುಖ್ಯಮಂತ್ರಿಗಳು / ರಾಜ್ಯ ಶಿಕ್ಷಣ ಮಂತ್ರಿಗಳು / ಎಲ್ಲಾ ರಾಜ್ಯಗಳ ಗೋ ಸೇವಾ ಆಯೋಗಗಳು / ಎಲ್ಲಾ ರಾಜ್ಯಗಳ ಜಿಲ್ಲಾ ಶಿಕ್ಷಣ ಅಧಿಕಾರಿಗಳು / ಎಲ್ಲಾ ಶಾಲೆಗಳ ಪ್ರಾಂಶುಪಾಲರು / ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ, ಎನ್.ಜಿ.ಒ.ಗಳು ಮತ್ತು ಗೋ(ಹಸು) ದಾನಿಗಳು ಈ ಬೃಹತ್ ವ್ಯಾಯಾಮದಲ್ಲಿ ಭಾಗಿಯಾಗಲಿದ್ದಾರೆ.

“ಕಾಮಧೇನು ಗೋ-ವಿಜ್ಞಾನ ಪರೀಕ್ಷೆ”ಯು ಭವಿಷ್ಯದಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗದ ವಾರ್ಷಿಕ ಕಾರ್ಯಕ್ರಮವಾಗಿರುತ್ತದೆ.

ಕಾಮಧೇನು ಗೋ-ವಿಜ್ಞಾನ ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಆರ್ಕೆಎ “kamdhenu.gov.in” / “www.kamdhenu.blog” ಜಾಲತಾಣಗಳಿಗೆ ಭೇಟಿ ನೀಡಿ.

ಸ್ಥಳೀಯ ಹಸುವನ್ನು ಸಾಕುವ ರೈತರು, ಗೋ ಸ್ನೇಹಿಗಳು ಮತ್ತು ಗೋಪಾಲಕರು ಮಾತ್ರವಲ್ಲದೆ ವಿದ್ಯಾವಂತ ಯುವಕರು, ಮಹಿಳೆಯರು ಮತ್ತು ಉದ್ಯಮಿಗಳಿಂದಲೂ ಸಹ, ಸ್ಥಳೀಯ ಹಸುವನ್ನು ಸಾಕುವಲ್ಲಿ ಜನಸಾಮಾನ್ಯರಲ್ಲಿ ಆಸಕ್ತಿ ಮತ್ತು ಪ್ರೇರಣೆ ಮೂಡಿಸುವ ಮೂಲಕ ಕಾಮಧೇನು ಗೋ-ವಿಜ್ಞಾನ ಪರೀಕ್ಷೆಯು ಬಹಳ ದೂರದ ಹಂತ ತಲುಪಲಿದೆ. ಹಾಗೂ ಮುಂಬರುವ ದಿನಗಳಲ್ಲಿ ಇದರ ಹಲವಾರು ಪ್ರಯೋಜನಗಳು ಮತ್ತು ಇದು ಪರೋಕ್ಷವಾಗಿ ದೇಶದ ಆರ್ಥಿಕ ಬೆಳವಣಿಗೆಗೆ ಆಧಾರವಾಗಲಿವೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭಾರ ಭಾರತ / ಸ್ಥಳೀಯ ಭಾರತ / ಹಸಿರು ಭಾರತ / ಡಿಜಿಟಲ್ ಭಾರತ / ಸ್ವಚ್ಛ ಭಾರತ / ಆರೋಗ್ಯ ಭಾರತ/ ಮೇಕ್ ಇನ್ ಇಂಡಿಯಾ ಮುಂತಾದ ಮಹತ್ವಪೂರ್ಣ ಹಾಗೂ ದೂರದರ್ಶಿತ್ವದ ಪರಿಕಲ್ಪನೆಗಳ ಉದ್ದೇಶಗಳನ್ನು ಸಹ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.)ದ ವಿನೂತನ ಕಾಮಧೇನು ಗೋ-ವಿಜ್ಞಾನ ಪರೀಕ್ಷೆಯು ಮೂಡಿಸುವ ಅರಿವು ಮತ್ತು ಉತ್ತೇಜನ ಮೂಲಕ ಪೂರೈಸಬಹುದಾಗಿದೆ.

-ವಂದೇ ಗೋ ಮಾತರಂ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದೇಶೀಯ ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್‌ಗಳ ದೈನಂದಿನ ಉತ್ಪಾದನೆ 3 ಲಕ್ಷಕ್ಕೆ ಏರಿಕೆ

Upayuktha

ಜಮ್ಮು-ಕಾಶ್ಮೀರ: ಎಸ್‌ಎಂಎಸ್‌ ಸೇವೆ ಪುನರಾರಂಭ

Upayuktha

ಮಳೆ ಹಾನಿ ಸಂತ್ರಸ್ತರಿಗೆ ಗೋಸ್ವರ್ಗದಲ್ಲಿ ಉಚಿತ ಊಟ, ವಸತಿ ವ್ಯವಸ್ಥೆ

Upayuktha