ನಗರ ಸ್ಥಳೀಯ

ಗೃಹರಕ್ಷಕರು ಸಮಾಜದ ನಿಜವಾದ ಯೋಧರು: ಡಾ. ಮುರಲೀಮೋಹನ್ ಚೂಂತಾರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಗೃಹರಕ್ಷಕರಿಗೆ ಮಂಗಳೂರಿನ ಲಕ್ಷ್ಮೀನಾರಾಯಣ ಎಂಟರ್‌ಪ್ರೈಸಸ್ ಮತ್ತು ಸುಚಿತ್ರಾ ಪ್ರಭಾತ್ ಟಾಕೀಸ್‍ಗಳ ಮಾಲಕರಾದ ಡಿ.ಎನ್. ಗೋಪಾಲಕೃಷ್ಣ ಇವರು ಲಾಕ್‍ಡೌನ್ ಸಂದರ್ಭಗಳಲ್ಲಿ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಿಗೆ ಹಾಗೂ 78 ಗೃಹರಕ್ಷಕರಿಗೆ ಉಚಿತ ರೇಷನ್ ಕಿಟ್ ನೀಡಿದ್ದಾರೆ.

ಉತ್ತರ ಪೊಲೀಸ್ ಠಾಣೆ, ಉತ್ತರ ಸಂಚಾರಿ ಠಾಣೆ, ದಕ್ಷಿಣ ಪೊಲೀಸ್ ಠಾಣೆ, ದಕ್ಷಿಣ ಸಂಚಾರಿ ಪೊಲೀಸ್ ಠಾಣೆ, ಬರ್ಕೆ ಠಾಣೆ, ಉರ್ವಾ ಠಾಣೆ, ಮಂಗಳೂರು ಪೂರ್ವ ಠಾಣೆ, ಪೂರ್ವ ಸಂಚಾರಿಸ ಠಾಣೆ, ಕಂಕನಾಡಿ ನಗರ ಠಾಣೆ, ಮಂಗಳೂರು ಗ್ರಾಮಾಂತರ ಠಾಣೆ, ಕಾವೂರು ಠಾಣೆ, ಉಳ್ಳಾಲ ಠಾಣೆ, ಕೊಣಾಜೆ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 78 ಗೃಹರಕ್ಷಕರಿಗೆ ಈ ಸೌಲಭ್ಯ ವಿತರಿಸಲಾಯಿತು.

ಅವುಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಡಿ.ಎನ್. ಗೋಪಾಲಕೃಷ್ಣ ಅವರು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಗೃಹರಕ್ಷಕರ ಮೇಲಿನ ನಂಬಿಕೆ, ವಿಶ್ವಾಸ ಮತ್ತು ಗೌರವವನ್ನು ಜಿಲ್ಲಾ ಗೃಹರಕ್ಷಕ ದಳ ಯಾವಾಗಲೂ ನೆನಪಿಸುತ್ತದೆ ಎಂದು ಸಮಾದೇಷ್ಟರು ನುಡಿದರು. ಕೋವಿಡ್-19 ಸಂದರ್ಭದಲ್ಲಿ ದುಡಿದ ಗೃಹರಕ್ಷಕರೇ ನಿಜವಾದ ಆಸ್ತಿ ಎಂದು ಶ್ಲಾಘಿಸಿದರು.

ಈ ರೇಷನ್ ಕಿಟ್ ವಿತರಣೆಗೆ ಗೃಹರಕ್ಷಕಿ ಸುಮಿತ್ರಾರವರು ಬಹಳ ಸಹಕಾರ ನೀಡಿದ್ದಾರೆ. ಇವರು ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಊಟೋಪಚಾರ ಮಾಡಿದ್ದು, ಅವರಿಗೆ ಗೃಹರಕ್ಷಕ ದಳ ಗುರುತಿಸಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಗೃಹರಕ್ಷಕ ದಳದ ಮಹಾಸಮಾದೇಷ್ಟರು ಮತ್ತು ನಿರ್ದೇಶಕರು, ನಗದು ಬಹುಮಾನವನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಸಂದರ್ಭದಲ್ಲಿ ಗೃಹರಕ್ಷಕರಾದ ಸುಮಿತ್ರಾ, ಹಮೀದ್ ಪಾವ್ಲ, ರಾಜೇಶ್ ಗಟ್ಟಿ, ದಿವಾಕರ, ಸುನಿಲ್ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಬಲ್ಲಂಗುಡೇಲು: ಮಾ. 3, 4ರಂದು ಗೆಳೆಯರ ಬಳಗದ ವಾರ್ಷಿಕೋತ್ಸವ

Upayuktha

ಉಜಿರೆ: ‘ಝೇಂಕಾರ ಸ್ಟಾರ್ ನೈಟ್‍’ಗೆ ಬಿಗ್‍ಬಾಸ್ ಖ್ಯಾತಿಯ ವಾಸುಕಿ ವೈಭವ್ !

Upayuktha

ಎಸ್‌ಡಿಎಂ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Upayuktha