ಆರೋಗ್ಯ ಮನೆ ಮದ್ದು

ಬಿಸಿಲ ಬೇಗೆ ತಣಿಸುವ, ರೋಗ ನಿರೋಧಕತೆ ಹೆಚ್ಚಿಸುವ ಮಾವಿನಕಾಯಿ ಶರಬತ್ತು

ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಯಾವುದೇ ರೀತಿಯ ಸೋಂಕು ಅಥವಾ ರೋಗವನ್ನು ತಡೆಗಟ್ಟಲು, ನಾವು ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸೋಣ.

ಬಿಸಿಲ ಬೇಗೆ ಹೆಚ್ಚುತ್ತಿರುವ ಈ ಸಮಯದಲ್ಲಿ ದೇಹದ pH ಸಮತೋಲನವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಹಾಗೂ ಪಾನೀಯಗಳನ್ನು ಕುಡಿಯುವುದು ಬಹಳ ಮುಖ್ಯ.

ಕಚ್ಚಾ ಮಾವಿನ ರಸವು (ಮಾವಿನ ಕಾಯಿಯ ಶರಬತ್ತು) ತೀವ್ರವಾದ ಶಾಖ ಮತ್ತು ನಿರ್ಜಲೀಕರಣದಿಂದ ರಕ್ಷಿಸುತ್ತದೆ.
ಇದು ಗರ್ಭಿಣಿಯರಲ್ಲಿ ಕಂಡುಬರುವ ಬೆಳಿಗ್ಗೆ ಕಾಯಿಲೆ, ಹೊಟ್ಟೆ ಉರಿ, ಅಜೀರ್ಣ ಮತ್ತು ಜಠರ, ಕರುಳಿನ ಕಾಯಿಲೆಗಳ ನಿವಾರಣೆಗೆ, ಮಲಬದ್ಧತೆಗೆ ಪರಿಣಾಮಕಾರಿ ಮನೆಮದ್ದು.

ಬೇಕಾಗುವ ಪದಾರ್ಥಗಳು:
2 no.s ಮಧ್ಯಮ ಗಾತ್ರದ ಹಸಿರು ಮಾವಿನಹಣ್ಣು
3 tbsp ಪುಡಿ ಬೆಲ್ಲ ಅಥವಾ ಜೇನುತುಪ್ಪ
1 tsp ಕಪ್ಪು ಉಪ್ಪು
1 tsp ಕರಿಮೆಣಸು ಕಾಳು
1 tsp ತುರಿದ ಶುಂಠಿ
1 ಲೀಟರ್ ನೀರು

ಮಾಡುವ ವಿಧಾನ:
ಹಸಿರು ಮಾವಿನಕಾಯಿಯನ್ನು ಸ್ವಚ್ಛಗೊಳಿಸಿ ಕತ್ತರಿಸಿ. ಮೃದುವಾಗುವವರೆಗೆ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ನೀರಿನಿಂದ ಕುದಿಸಿ. ಅದನ್ನು ಪಕ್ಕಕ್ಕೆ ಇರಿಸಿ ಮತ್ತು ತಣ್ಣಗಾಗಲು ಬಿಡಿ.
ಬೇಯಿಸಿದ ಹಸಿರು ಮಾವಿನಕಾಯಿಯೊಂದಿಗೆ ತುರಿದ ಶುಂಠಿ, ಪುದೀನ ಎಲೆಗಳು ಮತ್ತು ಕರಿ ಮೆಣಸನ್ನು ಸೂಕ್ತ ಪ್ರಮಾಣದ ನೀರಿಂದಿಗೆ ದಪ್ಪ ಪೇಸ್ಟ್ ಆಗುವಂತೆ ಮಾಡಿ.
ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಬೇಕಾದಷ್ಟು ನೀರು ಸೇರಿಸಿಕೊಂಡು ತೆಳು ಮಾಡಿ ಮತ್ತು ಕಪ್ಪು ಉಪ್ಪು, ಬೆಲ್ಲ ಅಥವಾ ಜೇನುತುಪ್ಪವನ್ನು ಸೇರಿಸಿ.
ಇದನ್ನು ಗ್ಲಾಸಿಗೆ ವರ್ಗಾಯಿಸಿ ಮತ್ತು ಪುದೀನ ಚಿಗುರುಗಳಿಂದ ಅಲಂಕರಿಸಿ.

– ಡಾ. ದಿವ್ಯಾ ಕೋಣಮ್ಮೆ

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಖಿನ್ನತೆ: ಕಾರಣಗಳು ಮತ್ತು ಪರಿಹಾರ

Upayuktha

ದೇಹಕ್ಕೆ ಅತೀ ಅಗತ್ಯವಾದ ವಿಟಮಿನ್– ಇ

Upayuktha

ಕಹಿಬೇವು: ಸರ್ವರೋಗ ನಿವಾರಿಣಿ

Upayuktha

Leave a Comment

error: Copying Content is Prohibited !!