ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದಲ್ಲಿ ಪತಿಯ ಮನೆಯಿಂದ ಮಗು ಜೊತೆ ಕಾಣೆಯಾಗಿದ್ದ ತಾಯಿ, ಅಲ್ಲಿರುವ ಬಾವಿಗೆ ಹಾರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮೂರು ದಿನ ಕಳೆದು ಬೆಳಕಿಗೆ ಬಂದಿದೆ.
ಹನುಮಂತಿ ಹುಲಗಯ್ಯ (26) ಹಾಗೂ ಉದಯ (14 ತಿಂಗಳು) ಪ್ರಾಣ ಕಳೆದುಕೊಂಡವರು.
ರಾಯಚೂರು ತಾಲ್ಲೂಕಿನ ಮಟಮಾರಿ ಗ್ರಾಮದ ಹನುಮಂತಿ ಮತ್ತು ಹುಲಗಯ್ಯ ಅವರು ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಪತಿ ಮತ್ತು ಅವರ ಸಂಬಂಧಿಗಳು ಕಿರುಕುಳ ನೀಡಿದ್ದು, ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಗು ಜೊತೆ ಹನುಮಂತಿ ಅವರು ಮನೆಯಿಂದ ಹೊರಹೋಗಿದ್ದು, ಕಾಣೆಯಾದ ಬಗ್ಗೆ ಸೋಮವಾರ ಮಾನ್ವಿ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಿಸಲಾಗಿತ್ತು.
ಪೊಲೀಸರು ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ